ಬ್ರೇಕಿಂಗ್ ನ್ಯೂಸ್
13-08-21 03:24 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 13: ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿಲ್ಲ. ದೇಶದ ಹಲವಾರು ಕಡೆ ಈ ರೀತಿಯ ಬೆಳವಣಿಗೆ ಕಂಡುಬಂದಿದೆ. ಹಾಗೆಂದು, ಒಂದು ಭಾಗದ ಹೆಸರನ್ನು ಹಾಳು ಮಾಡುವ ಪ್ರಯತ್ನವನ್ನು ನಾನು ಒಪ್ಪಲ್ಲ. ಉಳ್ಳಾಲದಲ್ಲಿಯೂ ದೇಶವನ್ನು ಪ್ರೀತಿಸುವ ದೇಶಪ್ರೇಮಿ ಜನರು ಇದ್ದಾರೆ. ಹಾಗೆಂದು, ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸೋದೂ ಇಲ್ಲ ಎಂದು ಶಾಸಕ ಯು.ಟಿ. ಖಾದರ್ ತಮ್ಮ ಕ್ಷೇತ್ರದ ಹೆಸರು ಉಗ್ರವಾದದ ಜೊತೆಗೆ ಥಳಕು ಹಾಕಿಕೊಂಡಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಮೊನ್ನೆಯ ಘಟನೆಯಲ್ಲಿ ಎನ್ ಐಎ ಅಧಿಕಾರಿಗಳು ಬಂದು ಒಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ತನಿಖೆ ನಡೆಯುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಅದರ ತನಿಖೆ ನಡೆದು ಸತ್ಯ ವಿಚಾರ ಬೆಳಕಿಗೆ ಬರಲಿ. ಈ ಬಗ್ಗೆ ರಾಜಕೀಯ ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಆತ ಅಪರಾಧಿ ಆಗಿದ್ರೆ ಉಳ್ಳಾಲದ ಜನರು ಅವರನ್ನ ಯಾವತ್ತೂ ಕ್ಷಮಿಸಲ್ಲ. ನಿರಪರಾಧಿ ಆಗಿದ್ದರೆ ಯಾಕೆ ಈ ಆರೋಪ ಬಂತು ಅನ್ನೋದ್ರ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದರು.
ದೀಪ್ತಿ ಯಾನೆ ಮರಿಯಂ ಬಗ್ಗೆ ಪ್ರಶ್ನಿಸಲು ಇವರ್ಯಾರು ?
ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾದರ್, ಆ ಮನೆಯ ಹುಡುಗಿ ಬಗ್ಗೆ ಪ್ರಶ್ನೆ ಮಾಡಲು ಈ ಸಂಘಟನೆಯವರು ಯಾರು? ಹಿಂದು ಸಂಘಟನೆ ಕಾರ್ಯಕರ್ತರು ಪಾಷಾ ಅವರ ಮನೆ ಎದುರು ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ಇವರಿಗೆ ದೀಪ್ತಿ ಮಾರ್ಲ ಯಾನೆ ಮರಿಯಂ ಅವರ ತಂದೆ ತಾಯಿ ಏನಾದ್ರೂ ಕಂಪ್ಲೇಟ್ ಕೊಟ್ಟಿದ್ದಾರಾ?
ಲವ್ ಜಿಹಾದ್ ಮತ್ತೊಂದು ಇನ್ನೊಂದು ಅಂತ ಅಜೆಂಡಾ ಇಟ್ಟು ಪ್ರತಿಭಟನೆ ಮಾಡ್ತೀರಲ್ಲಾ? ನಿಮಗೆ ತಾಕತ್ತಿದ್ದರೆ ಲವ್ ಜಿಹಾದ್ ವಿರುದ್ದ ಕಾನೂನು ತರುವಂತೆ ಹೇಳಿ ಉಪವಾಸ ಮಾಡಿ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಎಂದು ಹಿಂದೂ ಸಂಘಟನೆಗಳಿಗೆ ಶಾಸಕ ಖಾದರ್ ಟಾಂಗ್ ನೀಡಿದ್ದಾರೆ. ಅದು ಬಿಟ್ಟು ಹೊರಗಿನವರು ನಮ್ಮ ಉಳ್ಳಾಲ ಕ್ಷೇತ್ರಕ್ಕೆ ಬಂದು ಯಾಕೆ ಸಮಸ್ಯೆ ಮಾಡ್ತೀರಾ? ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನ ಮದುವೆ ಆಗಿಲ್ವಾ? ಹೀಗೆ ಮದುವೆ ಆದವರು ರಾಜಕೀಯಕ್ಕೆ ಬಂದು ಜನಪ್ರತಿನಿಧಿ ಆದವರೂ ಇದ್ದಾರೆ. ನಿಮಗೆ ಬದ್ಧತೆ ಇದ್ದರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟನೆ ನಡೆಸಿ ಎಂದು ಸವಾಲು ಹಾಕಿದರು.
ತಿರುವನಂತಪುರಕ್ಕೇ ಪಾದಯಾತ್ರೆ ಮಾಡ್ತೀವಿ
ಸಿಎಂ ಬಸವರಾಜ ಬೊಮ್ಮಾಯಿ ತಲಪಾಡಿ ಗಡಿಗೆ ಭೇಟಿಯನ್ನು ರದ್ದುಗೊಳಿಸಿದ್ದು ಕೇರಳದ ಕೆಲವರು ತಮಗೆ ಹೆದರಿ ಅಂತಾ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಬಲವಾಗಿ ಖಂಡಿಸುತ್ತೇನೆ. ಕರ್ನಾಟಕ ಸಿಎಂ ಯಾರ ಬೆದರಿಕೆಗೂ ಹೆದರಿ ಹಿಂತಿರುಗಿದ್ದಲ್ಲ. ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಇರಲೇಬೇಕು ಅಂತ ಸಿಎಂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಬಂದೋಬಸ್ತ್ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಭಯದಿಂದ ಹಿಂದೆ ಹೋಗಿದ್ದಾರೆ ಎನ್ನುವುದಕ್ಕೆ ಅರ್ಥ ಇಲ್ಲ. ಕನ್ನಡಿಗರೆಲ್ಲ ಒಟ್ಟಾದ್ರೆ ಮುಖ್ಯಮಂತ್ರಿಯನ್ನು ಪಾದಯಾತ್ರೆ ಮೂಲಕ ತಲಪಾಡಿ ಗಡಿಯಿಂದ ತಿರುವನಂತಪುರದ ವರೆಗೂ ಕರೆದೊಯ್ಯಬಹುದು. ಆ ಮಟ್ಟಿಗಿನ ಧೈರ್ಯ ಕರ್ನಾಟಕದ ಜನರಲ್ಲಿದೆ. ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ಸಿಎಂ ಆದೇಶ ಮಾಡುತ್ತಾರೆ. ಅಧಿಕಾರಿಗಳೆಲ್ಲ ಚರ್ಚಿಸಿ ಗಡಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಹಾಗೆಂದು ಇಲ್ಲ ಸಲ್ಲದ್ದನ್ನು ಹೇಳಬಾರದು ಎಂದು ಹೇಳಿದರು. ಈ ಹಿಂದೆ ಕಾಸರಗೋಡಿನ ಜನರನ್ನೇ ಕೇರಳದ ಬೇರೆ ಜಿಲ್ಲೆಗಳಿಗೆ ಹೋಗದಂತೆ ತಡೆದಿದ್ದರು. ಈಗ ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡೋರು ಆಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಅಫೀಮು ತುಂಬಿಕೊಂಡಿದ್ದಾರೆ ಸೀಟಿ ರವಿ
ಸಿ.ಟಿ.ರವಿ ಹುಕ್ಕಾಬಾರ್ ಹೇಳಿಕೆಯ ಬಗ್ಗೆ ಕಿಡಿಕಾರಿದ ಯು.ಟಿ.ಖಾದರ್, ಕೋಮುವಾದದ ಅಫೀಮು ತುಂಬಿಕೊಂಡಿರುವ ಮಂದಿ ಹುಕ್ಕಾಬಾರ್ ರೀತಿಯ ಸಂಸ್ಕೃತಿ ಬಿಂಬಿಸ್ತಾರೆ. ಹುಕ್ಕಾಬಾರ್ ಅಫೀಮು ಅಲ್ವಾ, ಅದಕ್ಕೆ ಅವರು ಅದನ್ನೇ ಮಾತನಾಡ್ತಾರೆ. ಬಡವರಿಗೆ ಊಟ ಕೊಡುವುದು ಕಾಂಗ್ರೆಸ್ ಸಂಸ್ಕೃತಿ. ಅದ್ರೆ ಸಿಟಿ ರವಿ ಅಂಥವರಿಗೆ ಅದೇ ಸಂಸ್ಕೃತಿ, ಹೀಗಾಗಿ ಅದನ್ನೇ ಮಾತನಾಡ್ತಾರೆ ಎಂದು ತಿರುಗೇಟು ನೀಡಿದ್ರು.
ಬಿಜೆಪಿ ಸರಕಾರ ವಾಜಪೇಯಿ ವಸತಿ ಯೋಜನೆ ಮಾಡಿದ್ದರೂ, ಬಿಜೆಪಿ ಸರ್ಕಾರವೇ ಅದಕ್ಕೆ ಅನುದಾನ ಕೊಡದೇ ವಾಜಪೇಯಿ ಅವರಿಗೇ ಅವಮಾನ ಮಾಡ್ತಿದೆ. ಹೀಗಾಗಿ ಅವರ ಹೆಸರು ಇಟ್ಟುಕೊಂಡರೆ ಸಾಲದು. ದಯವಿಟ್ಟು ಅವರ ಹೆಸರಿನ ಯೋಜನೆಗೆ ಅನುದಾನವನ್ನೂ ಕೊಡಿ. ಹಿಂದೆ ವಾಜಪೇಯಿ ಆರೋಗ್ಯ ಯೋಜನೆ ಹೆಸರಿನ ಬದಲಾವಣೆ ಬಗ್ಗೆಯೂ ಚರ್ಚೆಯಿತ್ತು. ಆದ್ರೆ ನಮ್ಮ ಸರ್ಕಾರ ಇರುವಾಗ ಅದನ್ನು ಬದಲಾಯಿಸುವ ಕೆಲಸ ಮಾಡಿಲ್ಲ. ವಾಜಪೇಯಿ ಅವರಿಗೂ ಈ ದೇಶದಲ್ಲಿ ಅತ್ಯಂತ ಗೌರವವಿದೆ ಎಂದು ಹೇಳಿದರು.
Mangalore UT Khader slams VHP for protesting at Deepthi Marlas house at Ullal opposing Love Jihad. Mangaluru police took Vishwa Hindu Parishad (VHP) Mangaluru divisional secretary Sharan Pumpwell and other activists into custody after they attempted to protest outside the house of former MLA and poet late B.M. Idinabba in Ullal on August 11. He said if they have got issues with love jihad let them protest near the BJP office. Also, Khader spoke about talapady border issue.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm