ಬ್ರೇಕಿಂಗ್ ನ್ಯೂಸ್
13-08-21 08:59 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 13: "ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ವಚನ ಒಂದಿದೆ. ಹೌದು.. ನೈಜ ನಾಗರ ಕಂಡರೆ ದೂರಕ್ಕೆ ಓಡುವವರೇ ಜಾಸ್ತಿ. ಹೀಗಾಗಿ ಕಲ್ಲಿನ ನಾಗನಿಗೆ ಮಾತ್ರ ಹಾಲೆರೆಯುವ ಪದ್ಧತಿ ಬಂದಿದೆ. ಹಾಗಂತಲೇ, ಹೆಡೆಯೆತ್ತುವ ಹಾವು ಕಂಡರೆ ಕೊಲ್ಲುವರು ಎಂದು ವಚನಕಾರರು ಹೇಳಿದ್ದರು. ಆದರೆ, ಈಗಿನ ಆಧುನಿಕ ಕಾಲದಲ್ಲಿ ಈ ವಚನ ಅಷ್ಟು ಒಗ್ಗಿಕೊಳ್ಳುವುದಿಲ್ಲವೋ ಏನೋ.. ಯಾಕಂದ್ರೆ ಇಲ್ಲೊಬ್ಬರು ನೈಜ ನಾಗನಿಗೇ ಹಾಲು, ಸೀಯಾಳ ಅಭಿಷೇಕ ಮಾಡಿ ಗಮನ ಸೆಳೆದಿದ್ದಾರೆ.
ನಾಗರ ಪಂಚಮಿಯ ದಿನ ನಾಗನ ಕಲ್ಲಿನ ಮೂರ್ತಿಗಳಿಗೆ ಹಾಲು ಎರೆಯುವುದು ಹಿಂದಿನಿಂದಲೂ ಬಂದ ಪದ್ಧತಿ. ಕರಾವಳಿಯಲ್ಲಂತೂ ನಾಗಬನ, ನಾಗನ ಕ್ಷೇತ್ರಗಳಿಗೆ ತೆರಳಿ, ಈ ದಿನ ಕಡ್ಡಾಯವಾಗಿ ಪೂಜೆ ಸಲ್ಲಿಸುತ್ತಾರೆ. ಈ ನಡುವೆ ಉಡುಪಿಯಲ್ಲಿ ಒಂದು ವಿಚಿತ್ರ ವಿದ್ಯಮಾನ ಸಂಭವಿಸಿದೆ. ಕೇವಲ ಕಲ್ಲನಾಗರನಿಗೆ ಮಾತ್ರವಲ್ಲದೆ ನಿಜವಾದ ನಾಗನಿಗೂ ಪೂಜೆ ಸಲ್ಲಿಕೆಯಾಗಿದೆ.



ಕಾಪು ತಾಲೂಕಿನ ಮಂಜೂರು ಎಂಬಲ್ಲಿ ವಿಶೇಷ ಪೂಜೆ ನಡೆದಿದೆ. ಇಲ್ಲಿನ ಪುರೋಹಿತ ವೃತ್ತಿ ನಡೆಸುವ ಗೋವರ್ಧನ ಭಟ್ ಗೋವಿನ ರೀತಿಯಲ್ಲೆ ನಾಗನ ಪ್ರೀತಿಯಿಂದ ನೋಡಿಕೊಂಡು ಬಂದವರು. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡುವ ವಿಶೇಷ ಹವ್ಯಾಸ ಹೊಂದಿದ್ದಾರೆ. ಈ ಪರಿಸರದಲ್ಲಿ ಎಲ್ಲೇ ಗಾಯಾಳು ನಾಗರ ಹಾವು ಕಂಡುಬಂದರೆ, ಗೋವರ್ಧನ ಭಟ್ಟರಿಗೆ ತಿಳಿಸುತ್ತಾರೆ. ಹಾಗಾಗಿ ಇವರ ಮನೆಯಲ್ಲಿ ಯಾವತ್ತೂ ಗುಣಮುಖವಾದ ಹಾವುಗಳು ಇದ್ದೇ ಇರುತ್ತವೆ.
ಈ ಬಾರಿ ನಾಗರಪಂಚಮಿಯ ದಿನ, ತಾವು ಮನೆಯಲ್ಲೇ ಆರೈಕೆ ಮಾಡಿದ ನಾಗರ ಹಾವುಗಳಿಗೆ ಆರತಿ ಬೆಳಗಿ, ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹೀಗೆ ನೈಜ ನಾಗರನಿಗೆ ಪೂಜೆ ಮಾಡುವ ವಿಡಿಯೋ ವೈರಲ್ ಆಗಿದ್ದು ಜನರು ಅಚ್ಚರಿಗೆ ಒಳಗಾಗಿದ್ದಾರೆ. ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನವನ್ನು ಇನ್ನು ಬದಲಿಸಬೇಕು. ಹಾವು ಕಂಡರೆ ಓಡಬೇಕಿಲ್ಲ. ಅವುಗಳಿಗೂ ನೋವು ನಲಿವು ಇದೆ ಎಂಬುದನ್ನು ಕಂಡುಕೊಳ್ಳಬೇಕಿದೆ.
Real Nagara Snake worshipped at Home by Priests in Udupi for Nagara Panchami 2021.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 08:27 am
HK News Staffer
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm