ಬ್ರೇಕಿಂಗ್ ನ್ಯೂಸ್
15-08-21 11:10 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತೊಂದು ತುಳು ಹಾಡು ಹಾಡಿದ್ದಾರೆ. ಕೋಟಿ ಚೆನ್ನಯ ತುಳು ಚಿತ್ರದ ‘’ಕೆಮ್ಮಲೆತಾ ಬ್ರಹ್ಮಾ ಎಂಕ್ಲೆ ಕುಲದೈವೋ ಬ್ರಹ್ಮಾ’’ ಎನ್ನುವ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಈ ಹಾಡನ್ನು ತುಳು ಭಾಷೆಯ ಬಗ್ಗೆ ತಿಳಿಯದವರು ಹಾಡುವುದು ಕಷ್ಟ. ಒರಿಜಿನಲ್ ಪದ್ಯವನ್ನು ಪಿ.ಬಿ.ಶ್ರೀನಿವಾಸ್ ತಮ್ಮ ಮಧುರ ಕಂಠದಲ್ಲಿ ಹಾಡುವ ಮೂಲಕ ಆ ಹಾಡನ್ನು ಅಜರಾಮರವಾಗಿಸಿದ್ದರು. ಅವರು ಕೂಡ ತುಳುವರಲ್ಲ. ಆದರೆ, ತಮ್ಮ ಗಾಯನದ ಮೂಲಕವೇ ಹಾಡಿಗೆ ಸತ್ವ ತಂದುಕೊಟ್ಟಿದ್ದರು. ಉಚ್ಚಾರ, ಅರ್ಥಗಳ ಬಗ್ಗೆ ತಿಳಿದುಕೊಂಡು ಸಾಕಷ್ಟು ಅಭ್ಯಾಸ ನಡೆಸಿ ಹಾಡಿಗೆ ಸ್ವರ ತುಂಬಿದ್ದರು.
ಹಾಗೆಯೇ, ಮಂಗಳೂರು ಕಮಿಷನರ್ ಆಗಿರುವ ಶಶಿಕುಮಾರ್ ಸ್ವತಃ ಹಾಡುಗಾರರೇನಲ್ಲ. ತುಳು ಭಾಷೆಯ ಗಂಧ ಗಾಳಿಯೂ ತಿಳಿದವರಲ್ಲ. ಆದರೆ, ಹಾಡು, ಗಾಯನದ ಬಗ್ಗೆ ಅಪಾರ ಒಲವುಳ್ಳವರು. ಮಂಗಳೂರಿಗೆ ಬರುವುದಕ್ಕಿಂತಲೂ ಹಿಂದೆ ತಾವು ಕರ್ತವ್ಯದಲ್ಲಿದ್ದ ಜಾಗದಲ್ಲೆಲ್ಲ ಹಾಡುಗಳನ್ನು ಹಾಡಿ ರಂಜಿಸಿದ್ದರು. ಮಂಗಳೂರಿಗೆ ಪೊಲೀಸ್ ಕಮಿಷನರ್ ಆಗಿ ಬಂದ ಬಳಿಕವೂ ಶಶಿಕುಮಾರ್ ತಮ್ಮ ಗಾಯನ ಪ್ರತಿಭೆಯನ್ನು ಮುಂದುವರಿಸಿದ್ದಾರೆ. ಅದರ ಜೊತೆಗೆ, ಕರಾವಳಿಯ ನೆಲದ ಭಾಷೆ ತುಳುವನ್ನು ಕಲಿಯಲು, ಇಲಾಖೆಯ ಸಹೋದ್ಯೋಗಿಗಳಿಗೆ ತುಳುವನ್ನು ತಜ್ಞರಿಂದ ಕಲಿಸುವುದಕ್ಕೂ ಮುಂದಾಗಿದ್ದಾರೆ.
ಇದೀಗ ತುಳು ಚಿತ್ರದ ಕಠಿಣ ಹಾಡೊಂದನ್ನು ಹಾಡುವ ಮೂಲಕ ತುಳುವರ ಮನ ಗೆದ್ದಿದ್ದಾರೆ. ಎರಡು ತಿಂಗಳ ಹಿಂದೆ ಮೋಕೆದ ಸಿಂಗಾರಿ ಎನ್ನುವ ತುಳು ಹಾಡನ್ನು ಹಾಡಿದ್ದ ಕಮಿಷನರ್, ಆಬಳಿಕ ಯಾರೋ ಸಲಹೆ ಕೊಟ್ಟರೆಂದು ಕೋಟಿ ಚೆನ್ನಯ ಚಿತ್ರದ ಹಾಡನ್ನು ಹಾಡಲು ಕಲಿಯತೊಡಗಿದ್ದರು. ಕೊನೆಗೂ ಅದರಲ್ಲಿ ಯಶಸ್ಸು ಕಂಡಿದ್ದಾರೆ.
Independence Day Special 2021 Mangalore Police Commissioner Shashi Kumar Sings Koti Chennaya tulu song.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm