ಕಾಬೂಲ್ ಮಿಲಿಟರಿ ಬೇಸ್ ನಲ್ಲಿದ್ದ ಕೊಲ್ಯ ನಿವಾಸಿ ಕೊನೆಗೂ ಮರಳಿ ಮನೆಗೆ ; ಕತಾರ್ ಗೆ ಏರ್ ಲಿಫ್ಟ್ ಮಾಡಿದ್ದ ಅಮೆರಿಕ !

23-08-21 12:15 pm       Mangaluru Correspondent   ಕರಾವಳಿ

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಮಿಲಿಟರಿ ಬೇಸಲ್ಲಿ ಅಕೌಂಟೆಟ್ ಆಗಿ ಉದ್ಯೋಗದಲ್ಲಿದ್ದ ಕೊಲ್ಯ ಕಣೀರುತೋಟ ನಿವಾಸಿ ಪ್ರಸಾದ್ ಆನಂದ್ (39) ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.

ಮಂಗಳೂರು, ಆಗಸ್ಟ್ 23: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಮಿಲಿಟರಿ ಬೇಸಲ್ಲಿ ಅಕೌಂಟೆಟ್ ಆಗಿ ಉದ್ಯೋಗದಲ್ಲಿದ್ದ ಕೊಲ್ಯ ಕಣೀರುತೋಟ ನಿವಾಸಿ ಪ್ರಸಾದ್ ಆನಂದ್ (39) ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.

ಪ್ರಸಾದ್ ಅವರನ್ನ ಕಾಬೂಲಿನಿಂದ ಅಮೆರಿಕಾ ನ್ಯಾಟೊ ಪಡೆ ಕತಾರ್ ವಿಮಾನ ನಿಲ್ದಾಣಕ್ಕೆ ಏರ್ ಲಿಪ್ಟ್ ಮಾಡಿದ್ದರು. ಮೂರು ದಿವಸಗಳಿಂದ ಕತಾರಲ್ಲಿ ಉಳಿದುಕೊಂಡಿದ್ದ ಪ್ರಸಾದ್, ಅಲ್ಲಿಂದ ನಿನ್ನೆ ರಾತ್ರಿ ದೆಹಲಿಗೆ ತಲುಪಿದ್ದಾರೆ. ಕತಾರಿನಿಂದ ದೆಹಲಿಗೆ ಬರಲು ಇಂಡಿಯನ್ ಅಂಬಾಸಿಯವರು ಸಹಕಾರ ಮಾಡಿದ್ದಾಗಿ ಪ್ರಸಾದ್ ಹೇಳಿದ್ದಾರೆ. 

ನಿನ್ನೆ ರಾತ್ರಿ ಪ್ರಸಾದ್ ದೆಹಲಿಗೆ ತಲುಪಿದ್ದು , ಇಂದು ಬೆಳಗ್ಗೆ ಮಂಗಳೂರು ಏರ್ಪೋರ್ಟ್ ತಲಪಿದ್ದಾರೆ. ಪ್ರಸಾದ್ ಅವರು 2013 ರಲ್ಲಿ ಅಕೌಂಟೆಟ್ ಆಗಿ ಕಾಬೂಲಿನ ನ್ಯಾಟೋ ಮಿಲಿಟರಿ ಬೇಸ್ ನಲ್ಲಿ ಕೆಲಸಕ್ಕೆ ಸೇರಿದ್ದರು‌. ಮಿಲಿಟರಿ ಬೇಸ್ ಒಳಗಡೆ ಲಂಡನ್ ಮೂಲದ ಓವರ್ ಸೀಸ್ ಸಪ್ಲೈ ಸರ್ವಿಸಸ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. 

ಹೊರಗಡೆ ತಾಲಿಬಾನಿಗಳ ಅಟ್ಟಹಾಸ ನಡೆಯುತ್ತಿದ್ದು ನಾವು ಮಿಲಿಟರಿ ಬೇಸಲ್ಲಿ ಇದ್ದ ಕಾರಣ ಅಷ್ಟೊಂದು ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಕಾಬೂಲಲ್ಲಿ ಮೂರು ದಿವಸಗಳಿಂದ ಪ್ಲೈಟ್ ಗಳನ್ನ ಬ್ಲಾಕ್ ಮಾಡಿದ ನಂತರ ಸ್ವಲ್ಪ ಸಂಕಷ್ಟ ಅನುಭವಿಸುವಂತಾಗಿತ್ತು ಎಂದು ಪ್ರಸಾದ್ ತಿಳಿಸಿದ್ದಾರೆ. ‌

ಕಣೀರು ತೋಟ ನಿವಾಸಿಗಳಾದ ದಿವಂಗತ ಆನಂದ ಅಮೀನ್ ಮತ್ತು ಸರೋಜಿನಿ ದಂಪತಿಯ ಆರು ಮಕ್ಕಳಲ್ಲಿ ಪ್ರಸಾದ್ ಐದನೇಯವರಾಗಿದ್ದು, ವಿವಾಹಿತರಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸಾದ್ ಅವರು ಪತ್ನಿ ಭವಿಲ ಪ್ರಸಾದ್ ಮತ್ತು ತಮ್ಮ ಮುರಳೀರಾಜ್ ಕುಟುಂಬದ ಜೊತೆ ಕಣೀರು ತೋಟದಲ್ಲಿ ವಾಸಿಸುತ್ತಿದ್ದಾರೆ.

Video: 

Mangalorean 39-Year-old  Prasad Anand from Thokottu stranded in Afghan Kabul reaches Mangalore Via Delhi shares his experience of being under Taliban in Afghan. Thanks Indian govt from bringing him safe.