ಕಾಂಗ್ರೆಸಿಗರಿಗೆ ಆಗಾಗ ತಾಲಿಬಾನ್ ಮೇಲೆ ಪ್ರೀತಿ ಬರುತ್ತದೆ, ಅಲ್ಲಿನ ದುರಂತ ನೋಡಿ ಕಲಿಯಲಿ ; ಸಚಿವ ಕೋಟ 

23-08-21 10:22 pm       Udupi Reporter   ಕರಾವಳಿ

ಇವರಿಗೆ ಆಗಾಗ ತಾಲಿಬಾನ್ ಮೇಲೆ ಒಳ್ಳೆಯ ಭಾವನೆ ಬರುತ್ತೆ. ಅಲ್ಲಿಯ ದುರಂತವನ್ನು ನೋಡಿಯಾದರೂ ಈ ಸಂಸ್ಕೃತಿಯನ್ನು ಬೆಂಬಲಿಸಬೇಡಿ. ಇವರು ಒಳ್ಳೆಯ ಸಂಸ್ಕೃತಿ

ಉಡುಪಿ, ಆಗಸ್ಟ್ 23: ಬಿಜೆಪಿ ಮತ್ತು ತಾಲಿಬಾನ್ ಸಂಸ್ಕೃತಿ ಒಂದೇ ಎಂಬ ಕಾಂಗ್ರೆಸ್ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇದು ತಾಲಿಬಾನ್ ಸಂಸ್ಕೃತಿಯನ್ನು ಪ್ರೀತಿಸುವವರ ಹೇಳಿಕೆ ಎಂದು ವ್ಯಂಗ್ಯವಾಡಿದ್ದಾರೆ. 

ಇವರಿಗೆ ಆಗಾಗ ತಾಲಿಬಾನ್ ಮೇಲೆ ಒಳ್ಳೆಯ ಭಾವನೆ ಬರುತ್ತೆ. ಅಲ್ಲಿಯ ದುರಂತವನ್ನು ನೋಡಿಯಾದರೂ ಈ ಸಂಸ್ಕೃತಿಯನ್ನು ಬೆಂಬಲಿಸಬೇಡಿ. ಇವರು ಒಳ್ಳೆಯ ಸಂಸ್ಕೃತಿ ರೂಢಿಸಿಕೊಳ್ಳಲಿ ಎಂದು ಹೇಳಿದರು. 

ಬಿಜೆಪಿಯದ್ದು ಜನಾಶೀರ್ವಾದ ಯಾತ್ರೆಯಲ್ಲ ಜನದ್ರೋಹ ಯಾತ್ರೆ ಎಂಬ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ, ಉಗ್ರಪ್ಪನವರು ಅವರದೇ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಉಗ್ರಪ್ಪನವರು ಸೇರಿದಂತೆ ಕೆಲ ಮುಖಂಡರು ಕಾಲಕಾಲಕ್ಕೆ ಸರ್ಟಿಫಿಕೇಟು ಕೊಡುತ್ತಾರೆ. ಎಲ್ಲರ ಭಾವನೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮದು ಜನಾಶೀರ್ವಾದ ಇರುವ ಸರಕಾರ. ಪ್ರಧಾನಿ ಮೋದಿ,  ಸಿಎಂ ಬೊಮ್ಮಾಯಿ ಜನಾಶೀರ್ವಾದ ಪಡೆದು ಸರಕಾರ ನಡೆಸುತ್ತಿದ್ದಾರೆ. ಜನರ ಮಧ್ಯೆ ನಿಂತು ಸಮಸ್ಯೆ ಬಗೆಹರಿಸುತ್ತೇವೆ. ಇನ್ನೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. 

ಜಾತಿಗಣತಿ ವರದಿ ಮಂಡನೆಗೆ ಸಿದ್ಧತೆ 

ಜಾತಿ ಜನಗಣತಿ ವರದಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಲಾಗಿತ್ತು. ಆವತ್ತಿನ ಆಯೋಗದ ಅಧ್ಯಕ್ಷರಾದ ಕಾಂತರಾಜುಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಅವಧಿಯಲ್ಲಿ ಜಾತಿಗಣತಿ ಪೂರ್ಣಗೊಂಡು ವರದಿ ಸಿದ್ಧವಾಗಿತ್ತು. ಜಾತಿಗಣತಿ ವರದಿ ಬಿಡುಗಡೆಗೆ ನಾವು ಆಗ್ರಹಿಸಿದ್ದೆವು. ಯಾಕೆ ಬಿಡುಗಡೆ ಮಾಡಿಲ್ಲವೋ ಗೊತ್ತಿಲ್ಲ. ಕಾಂತರಾಜು ಅವಧಿಯಲ್ಲಿ ವರದಿ ಸರ್ಕಾರಕ್ಕೆ ಮಂಡನೆಯಾಗಿಲ್ಲ.‌ ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಇದ್ದಾರೆ.‌ ಈ ಬಗ್ಗೆ ಕೆಲವು ಪ್ರಕರಣಗಳು ಹೈಕೋರ್ಟ್ನಲ್ಲಿ ದಾಖಲಾಗಿವೆ.‌ ಇದನ್ನು ಬಗೆಹರಿಸಿ, ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ವರದಿ ಸಲ್ಲಿಕೆಯ ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಕೇರಳದ ಗಡಿಜಿಲ್ಲೆಗಳಾದ ಕೊಡಗು, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ಶೇಕಡಾ 2.5 ಕಿಂತ ಜಾಸ್ತಿ ಇರುವುದರಿಂದ ಶಾಲೆ ಪ್ರಾರಂಭ ಮಾಡಿಲ್ಲ.‌ ರಾಜ್ಯದ ಇತರ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭವಾಗಿದೆ. ನಮ್ಮ ಜಿಲ್ಲೆಗಳಿಗೆ ಇದೊಂದು ಸಾಂಕೇತಿಕ ಎಚ್ಚರಿಕೆ. ಕೋವಿಡ್ ಗೈಡ್ ಲೈನ್ ಗಟ್ಟಿಗೊಳಿಸಬೇಕು.  ಪಾಸಿಟಿವಿಟಿ ರೇಟ್ ಕಡಿಮೆಯಾಗಬೇಕು. ಶಾಲೆಗಳನ್ನು ಶೀಘ್ರ ಪ್ರಾರಂಭಿಸಬೇಕೆಂಬ ಬಗ್ಗೆ ಆಸಕ್ತಿ ನಮಗೂ ಇದೆ.‌ ಆದರೆ ಪಾಸಿಟಿವ್ ರೇಟ್ ಇಳಿಯಬೇಕಿದೆ. ಅದಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

Congress repeatedly gets affection and love on Taliban slams Kota in Udupi