ಬ್ರೇಕಿಂಗ್ ನ್ಯೂಸ್
24-08-21 03:02 pm Mangaluru Correspondent ಕರಾವಳಿ
ಉಳ್ಳಾಲ, 24: ಉಳ್ಳಾಲ ಉಳಿಯದ ಮೆಲ್ವಿನ್ ಮೊಂತೇರೊ (45) ಅಫ್ಘಾನಿಸ್ತಾನದ ನರಕದಿಂದ ಕಳೆದ ವಾರ ಪಾರಾಗಿ ಬಂದಿದ್ದರು. ಉದ್ಯೋಗಕ್ಕಾಗಿ ತೆರಳಿ ಸಿಕ್ಕಿಬಿದ್ದಿದ್ದ ಮೆಲ್ವಿನ್ ಸಹೋದರ ಡೆಮ್ಸಿ ಮೊಂತೆರೊ ಕೂಡ ಇಂದು ಅಪ್ಘನ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಇಕೊಲೊಗ್ ಇಂಟರ್ನ್ಯಾಷನಲ್ ಕಂಪನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮೊಂತೆರೊ(29) ಇಂದು ಉಳ್ಳಾಲದ ಉಳಿಯದಲ್ಲಿರುವ ತನ್ನ ಮನೆಗೆ ಮರಳಿದ್ದಾರೆ.
ಕಳೆದ ಆ.17ರಂದು ಭಾರತೀಯ ವಾಯುಪಡೆ ಮೆಲ್ವಿನ್ ಮೊಂತೇರೊ ಅವರನ್ನ ಸುರಕ್ಷಿತವಾಗಿ ಭಾರತಕ್ಕೆ ಏರ್ ಲಿಫ್ಟ್ ಮಾಡಿತ್ತು. ಮೆಲ್ವಿನ್ ತಮ್ಮ ಡೆಮ್ಸಿಯನ್ನ ಮರುದಿವಸ ಆ.18 ರಂದು ನ್ಯಾಟೊ ಪಡೆಯು ಕಾಬೂಲಿನಿಂದ ಏರ್ ಲಿಪ್ಟ್ ಮಾಡಿತ್ತು. ಅಂದು ರಾತ್ರಿ ಇಡೀ ಕಾಬೂಲ್ ಏರ್ಪೋರ್ಟಲ್ಲಿ ಡೆಮ್ಸಿ ಸೇರಿ 155 ಮಂದಿ ಭಾರತೀಯರು ವಿಮಾನದೊಳಗೆ ಕಳೆದಿದ್ದರು.19 ರಂದು ಬೆಳಗ್ಗೆ ಡೆಮ್ಸಿ ಸೇರಿ ಒಟ್ಟು 155 ಮಂದಿಯನ್ನ ಕಾಬೂಲಿನಿಂದ ಕತಾರಿಗೆ ಏರ್ ಲಿಪ್ಟ್ ಮಾಡಲಾಗಿತ್ತು.
ಕತಾರ್ ಏರ್ಪೋರ್ಟಲ್ಲಿ ಡೆಮ್ಸಿ ನಾಲ್ಕು ದಿನ ಕಳೆದಿದ್ದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಅಲ್ಲಿದ್ದ ಭಾರತೀಯರನ್ನು ಶನಿವಾರ ರಾತ್ರಿ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿತ್ತು. ಆನಂತರ ಮುಂಬೈಗೆ ತಲುಪಿದ್ದು ಇಂದು ಮಧ್ಯಾಹ್ನ ಮಂಗಳೂರಿಗೆ ತಲುಪಿದ್ದಾರೆ.
ಉಳ್ಳಾಲ ಉಳಿಯದ ವಲೇರಿಯನ್ ಮೊಂತೇರೊ- ಸಿಸಿಲಿಯಾ ಮೊಂತೇರೊ ದಂಪತಿಯ ಎಂಟು ಮಕ್ಕಳಲ್ಲಿ ಮೆಲ್ವಿನ್ ಹಿರಿಯ ಮಗನಾದರೆ, ಡೆಮ್ಸಿ ಮೊಂತೇರೊ ಎಲ್ಲರಿಗೂ ಕಿರಿಯನಾಗಿದ್ದಾರೆ. ಮೆಲ್ವಿನ್ ಅವರು ಕಾಬೂಲಿನ ಮಿಲಿಟರಿ ಬೇಸಲ್ಲಿ ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ಕಳೆದ ವಾರವಷ್ಟೆ ಅವರು ಸೇಫಾಗಿ ತಾಯ್ನಾಡಿಗೆ ಮರಳಿದ್ದು ಇಂದು ಅವರ ಸೋದರ ಡೆಮ್ಸಿ ಕೂಡ ಮನೆ ಸೇರಿದ್ದು ಉಳಿಯದ ಮೊಂತೆರೊ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಮಾಜಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಉಳ್ಳಾಲ, ಉಳಿಯದ ಮೊಂತೇರೊ ಸಹೋದರರ ಮನೆಗೆ ತೆರಳಿ ಕ್ಷೇಮ ವಿಚಾರಿಸಿದ್ದಾರೆ. ಮೆಲ್ವಿನ್ ಮತ್ತು ಡೆಮ್ಸಿ ಸೋದರರು ಅಫ್ಘನ್ನಲ್ಲಿ ಅತಂತ್ರರಾಗಿ ಮರಳಿದ್ದರು. ಮೆಲ್ವಿನ್ ಕಳೆದ ವಾರ ಮರಳಿದ್ದರೆ, ಡೆಮ್ಸಿ ಇಂದು ಮನೆಗೆ ಬಂದಿದ್ದಾರೆ.
Stranded Dempsey Monterio stranded in Afghan Kabul reaches Mangaluru shares experience. Last night five from Kabul reached Mangaluru aiprort. Dempsey hails from Ullal. Dempsey has been working since five years at the Kabul Air base of Nato.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm