ಬ್ರೇಕಿಂಗ್ ನ್ಯೂಸ್
25-08-21 02:21 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 25: ಸೆಮಿಸ್ಟರ್ ಪರೀಕ್ಷೆ ಮತ್ತಿತರ ಕಾರಣಕ್ಕೆ ಪದವಿ, ಇಂಜಿನಿಯರಿಂಗ್ ಕಾಲೇಜುಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಈ ನಡುವೆ, ಕಳೆದ ಎರಡು ವಾರಗಳಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರುವ 900 ವಿದ್ಯಾರ್ಥಿಗಳ ಪೈಕಿ 620 ಮಂದಿ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಜಿಲ್ಲೆಯ 29 ಮಂದಿ ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.
ಈ ಬಗ್ಗೆ ದ.ಕ. ಜಿಲ್ಲೆಯ ಹಲವು ಕಾಲೇಜು ಆಡಳಿತಗಳಿಗೆ ನೋಟೀಸ್ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಬೇಕೆಂದು ಸೂಚಿಸಿದ್ದರೂ, ಅದನ್ನು ಪಾಲನೆ ಮಾಡದ ಆಡಳಿತ ಮಂಡಳಿಗೆ ನೋಟೀಸ್ ನೀಡಿದ್ದೇವೆ ಎಂದು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ. ಕಾಲೇಜು ಆಡಳಿತದ ನಿರ್ಲಕ್ಷ್ಯದ ಕಾರಣ ಕಳೆದ ಎರಡು ವಾರಗಳಲ್ಲಿ ಪರೀಕ್ಷೆಗೆಂದು ಆಗಮಿಸಿದ್ದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ ಎಂದವರು ಹೇಳಿದ್ದಾರೆ.
ಕಾಲೇಜಿನ ಹಾಸ್ಟೆಲ್, ಕೆಲವರು ಪ್ರತ್ಯೇಕ ಫ್ಲಾಟ್ ಗಳಲ್ಲಿ ಕ್ವಾರಂಟೈನ್ ಇದ್ದಾರೆ. ಹಾಸ್ಟೆಲ್ ನಲ್ಲಿದ್ದವರನ್ನು ಪ್ರತ್ಯೇಕ ಇರಿಸಿದ್ದರೂ, ಅವರಿಗೆ ಮತ್ತು ಇತರರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ರೀತಿಯ ಲೋಪ ಆಗಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಅಲ್ಲದೆ, ಪ್ರಾಥಮಿಕ ಸಂಪರ್ಕಿತರನ್ನು ಪ್ರತ್ಯೇಕ ಇರಿಸದೆ ಜೊತೆಗೇ ಇರಿಸಿದ್ದಾರೆ. ಒಬ್ಬ ವಿದ್ಯಾರ್ಥಿಯಂತೂ ಸೋಂಕು ಪೀಡಿತನಾಗಿದ್ದರೂ ಆತನಿಗೆ ಮನೆಯಿಂದಲೇ ಕಾಲೇಜಿಗೆ ಬರಲು ಅವಕಾಶ ನೀಡಲಾಗಿತ್ತು. ಈ ಬಗ್ಗೆ ಕಾಲೇಜು ಆಡಳಿತದ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಸೋಂಕು ಕಂಡುಬರುತ್ತಿರುವುದರಿಂದ ಕೆಲವು ಕಾಲೇಜುಗಳಲ್ಲಿ ಆಫ್ ಲೈನ್ ತರಗತಿ ನಡೆಸದಂತೆ ಸೂಚನೆ ನೀಡಲಾಗಿದೆ. ಆನ್ ಲೈನ್ ಮೂಲಕವೇ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ, ಸುಳ್ಯದ ಖಾಸಗಿ ಕಾಲೇಜು ಒಂದರಲ್ಲಿ 77 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭ ಒಂದೇ ಕಾಲೇಜಿನ 77 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಸುಳ್ಯದ ಸದ್ರಿ ಖಾಸಗಿ ಕಾಲೇಜಿನಲ್ಲಿ ಕೇರಳದ ವಿದ್ಯಾರ್ಥಿಗಳು ಅತಿ ಹೆಚ್ಚು ಇದ್ದಾರೆ.
ಕಳೆದ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೂಡ ಈ ಬಗ್ಗೆ ಆಂತಕ ವ್ಯಕ್ತಪಡಿಸಿದ್ದರು. ಕೇರಳದಿಂದ ಕೋವಿಡ್ ನೆಗೆಟಿವ್ ಜೊತೆಗೆ ಬಂದಿದ್ದ 900 ವಿದ್ಯಾರ್ಥಿಗಳ ಪೈಕಿ 600 ಮಂದಿಗೆ ಸೋಂಕು ಕಂಡುಬಂದಿದ್ದು ಗಂಭೀರ ವಿಚಾರ. ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ನಿಯಮ ಪಾಲಿಸದ ಕಾಲೇಜುಗಳ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಸೂಚಿಸಿದ್ದರು.
Over 620 students in Dakshina Kannada mostly from neighbouring Kerala have tested positive for the coronavirus weeks after exams were conducted, and physical classes resumed in the district. As many as 29 institutions have been declared containment zones.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm