ಬ್ರೇಕಿಂಗ್ ನ್ಯೂಸ್
25-08-21 05:54 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 25: ಮಂಗಳೂರಿನ ಮಟ್ಟಿಗೆ ಬಂದರು ಅಂದರೆ, ಅದು ಕೇವಲ ಬಂದರು ಅಲ್ಲ. ಸಾಮಾನ್ಯ ಭಾಷೆಯಲ್ಲಿ ಬಂದರು ಅಂದರೆ, ಹಡಗು ನಿಲ್ಲುವ ಸ್ಥಳ. ಆದರೆ, ಮಂಗಳೂರು ನಗರದ ಮೂಲೆಯಲ್ಲಿರುವ ಬಂದರು ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೇ ದೊಡ್ಡ ಬಂದರು ಮಾತ್ರವಲ್ಲ ಮಾರುಕಟ್ಟೆ ಆಗಿದ್ದ ಪ್ರದೇಶ. ಬ್ರಿಟಿಷರ ಕಾಲದಲ್ಲಿ ದೊಡ್ಡ ಬಂದರು ಆಗಿ ಬೆಳೆದಿದ್ದ ಮಂಗಳೂರಿನ ಬಂದರು ಈಗಲೂ ಹಳೇ ಬಂದರು ಎನ್ನುವ ಹೆಸರಲ್ಲೇ ಇದೆ. ಆದರೆ, ಹಿಂದಿನ ರೀತಿ ಹಡಗುಗಳು ಬರಲ್ಲ ಅಷ್ಟೇ.. ಉಳಿದಂತೆ, ಸಾಂಬಾರ ಪದಾರ್ಥಗಳ ಹೋಲ್ ಸೇಲ್ ವ್ಯಾಪಾರ ಇಲ್ಲಿಂದಲೇ ಆಗುತ್ತಿದೆ.
ದೇಶ- ವಿದೇಶದ ಜೊತೆಗೆ ವ್ಯಾಪಾರದ ನಂಟನ್ನು ಇಟ್ಟುಕೊಂಡಿದ್ದ ಮಂಗಳೂರಿನ ಬಂದರು ಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಎನ್ನುವಂತೆ ಪೊಲೀಸ್ ಠಾಣೆಯನ್ನು ಬ್ರಿಟಿಷರು ಸ್ಥಾಪನೆ ಮಾಡಿದ್ದರು. 1889ರಲ್ಲಿ ಸ್ಥಾಪಿಸಿದ್ದ ಬಂದರು ಠಾಣೆಯ ಕಟ್ಟಡ ಸ್ಮಾರಕ ಅಷ್ಟೇ ಆಗಿ ಉಳಿದಿಲ್ಲ. ಅದೇ ಕಟ್ಟಡದಲ್ಲಿ ಇವತ್ತಿಗೂ ಪೊಲೀಸ್ ಠಾಣೆ ಇದೆ. ಸುಮಾರು 132 ವರ್ಷಗಳಿಂದ ಅಲ್ಲಿ ಬಂದುಹೋದ ಪೊಲೀಸರು ಎಷ್ಟೋ ಲೆಕ್ಕ ಇಟ್ಟವರಿಲ್ಲ. ಸೀಮೆ ಸುಣ್ಣದಿಂದ ತಯಾರಿಸಿದ್ದ ಕಲ್ಲಿನ ಕಟ್ಟಡದಲ್ಲಿಯೇ ಪೊಲೀಸ್ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ಹಳೆಕಾಲದ ಹಂಚು, ಮರದ ಪಕ್ಕಾಸುಗಳು ಶತಮಾನ ಕಳೆದರೂ ಗಟ್ಟಿಯಾಗಿ ಉಳಿದುಕೊಂಡಿದೆ.
ಆದರೆ, ಇತ್ತೀಚೆಗೆ ಕಟ್ಟಡದ ಸಂದುಗಳಲ್ಲಿ ಒಂದಷ್ಟು ಸಿಮೆಂಟ್ ಎದ್ದು ಹೋಗಿತ್ತು. ವಿದ್ಯುತ್ ವಯರಿಂಗ್ ಸಮಸ್ಯೆ ಯಾವಾಗಲೂ ಕಾಡುತ್ತಿತ್ತು. ಪದೇ ಪದೇ ವಿದ್ಯುತ್ ಕೈಕೊಟ್ಟು ಪೊಲೀಸರಿಗೆ ರಾತ್ರಿ ವೇಳೆ ಸಮಸ್ಯೆ ಆಗುತ್ತಿತ್ತು. ಇದನ್ನು ಮನಗಂಡ ಕಳೆದ ಬಾರಿ ಬಂದರು ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಗೋವಿಂದರಾಜು ಮೇಲಧಿಕಾರಿಗಳ ಒಪ್ಪಿಗೆ ಪಡೆದು ನವೀಕರಣ ಮಾಡಿಸಿದ್ದಾರೆ. ಕೆಲವು ಸಂಸ್ಥೆಗಳು ಮತ್ತು ದಾನಿಗಳ ನೆರವಿನಿಂದ ಸಂಪೂರ್ಣ ಇಲೆಕ್ಟ್ರಿಕ್ ವಯರಿಂಗ್ ಚೇಂಜ್ ಮಾಡಿಸಿದ್ದಾರೆ. ಸಿಮೆಂಟ್ ಎದ್ದು ಹೋಗಿದ್ದ ಜಾಗಕ್ಕೆ ತೇಪೆ ಹಾಕಿದ್ದು ಪೂರ್ತಿ ಕಟ್ಟಡಕ್ಕೆ ಮತ್ತೆ ಬಣ್ಣ ಬಳಿದಿದ್ದಾರೆ.
ಗೋವಿಂದರಾಜು ಇತ್ತೀಚೆಗೆ ಠಾಣೆಯಿಂದ ವರ್ಗಾವಣೆಗೊಂಡು ಬೇರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಮುತುವರ್ಜಿಯಿಂದ ಬ್ರಿಟಿಷರ ಕಾಲದ ಬಳುವಳಿಯಾಗಿ ಬಂದಿರುವ ಮಂಗಳೂರಿನ ಅನಾದಿ ಕಾಲದ ಪೊಲೀಸ್ ಠಾಣೆ ಹೊಂಬಣ್ಣದಿಂದ ಮಿಂಚುವಂತಾಗಿದೆ. 1889ರಲ್ಲಿ 16 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿತ್ತು ಎಂದು ದಾಖಲೆಗಳಿಂದ ತಿಳಿದುಬರುತ್ತದೆ. ಮಂಗಳೂರಿನ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರಗಳಿಗೆ ಸಾಕ್ಷಿಯಾಗಿದ್ದ ಈ ಪೊಲೀಸ್ ಠಾಣೆಯಲ್ಲಿ ಅದೆಷ್ಟು ಮಂದಿ ಸೆರೆವಾಸ ಅನುಭವಿಸಿದ್ದರೋ ಏನೋ..
ಒಳಭಾಗದಲ್ಲಿ ದೊಡ್ಡ ಗಾತ್ರದ ಬೆಳಕು ಬೀಳದ ಸೆಲ್ ಗಳಿದ್ದು, ಹಲವಾರು ಮಂದಿಯನ್ನು ಕೂಡಿಹಾಕುವಷ್ಟು ಜಾಗ ಹೊಂದಿದೆ. ಅಲ್ಲದೆ, ಮಂಗಳೂರಿನ ನಗರದ ವ್ಯಾಪ್ತಿಯ ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಇದೇ ಕಟ್ಟಡದ ನಿಗೂಢ ಕೊಠಡಿಗಳಲ್ಲಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದರು. ಮಂಗಳೂರಿನ ಹಂಪನಕಟ್ಟೆ ಸರಕಾರಿ ಕಾಲೇಜು, ಜಿಲ್ಲಾಧಿಕಾರಿಯ ಕಚೇರಿ, ಬಂದರು ಠಾಣೆ ಹೀಗೆ ಇಲ್ಲಿನ ಆರ್ಕ್ ಮಾದರಿಯ ಕಟ್ಟಡಗಳು ಸಮಕಾಲೀನ ಚರಿತ್ರೆಯನ್ನು ಹೊಂದಿದ್ದು, ಸ್ಮಾರಕ ಕಟ್ಟಡಗಳಾಗಿ ಉಳಿದುಕೊಂಡಿದೆ.
ಇಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ತಂಡ ಬಂದರು ಠಾಣೆಗೆ ತೆರಳಿ, ಅಲ್ಲಿನ ನವೀಕರಣದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಲ್ಲದೆ, ಹಳೆಕಾಲದ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಅಲ್ಲಿನ ಸಿಬಂದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.
132 year old Bunder Police Station built by British has been renovated with new touch. Police Commissioner of Mangalore Shahsi Kumar and DCP Hariram Shankar visited the station.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm