ಬ್ರೇಕಿಂಗ್ ನ್ಯೂಸ್
30-08-21 05:43 pm Mangaluru Correspondent ಕರಾವಳಿ
ಉಳ್ಳಾಲ, ಆ.30: ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ನವಾಝ್ ಬೆಂಗ್ರೆಯನ್ನ ರಕ್ಷಿಸಿದ್ದ ಉಳ್ಳಾಲ ಹೊಯ್ಗೆಯ ಮೀನುಗಾರರ ತಂಡವನ್ನ ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯು ಗೌರವಿಸಿ ಸನ್ಮಾನಿಸಿದೆ.
ನಿನ್ನೆ ನಡೆದ ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಉಳ್ಳಾಲ ಹೊಯ್ಗೆಯ ಐವರು ಜೀವ ರಕ್ಷಕ ಮೀನುಗಾರರನ್ನ ಸನ್ಮಾನಿಸಲಾಯಿತು.
ಉಳ್ಳಾಲದ ಅಳಿವೆ ಬಾಗಿಲಿನ ಸಮುದ್ರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ಹಿಂತಿರುಗುವಾಗ ಅಲೆಗಳ ಆರ್ಭಟಕ್ಕೆ ಸಮುದ್ರಕ್ಕೆಸೆಯಲ್ಪಟ್ಟ ನವಾಝ್ ಬೆಂಗ್ರೆಯನ್ನು ಸಾವಿನ ದವಡೆಯಿಂದ ರಕ್ಷಿಸಿದ ಉಳ್ಳಾಲ ಹೊಯ್ಗೆಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್, ರಿತೇಶ್ ಡಿಸೋಜ ಮತ್ತು ಅಜಿತ್ ಕರ್ಕೇರ ಬೆಂಗ್ರೆ ಅವರನ್ನು ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ಧಮಾಕ- ಸೀಸನ್ 15 ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯಸ್ಥ ಲಿಯೋ ಡಿಸೋಜ ರಾಣಿಪುರ, ಲೋಬೋ ಸೌಂಡ್ಸ್ ಪೆರ್ಮನ್ನೂರಿನ ಮಾಲೀಕ ಜೈಸನ್ ಲೋಬೊ ಹಾಗೂ ಸಂಗೀತ ಕಾರ್ಯಕ್ರಮದ ಸದಸ್ಯರಾದ ರವಿರಾಜ್ ಡಿಸೋಜ, ರೋಲ್ಟನ್ ಪಿಂಟೋ, ಮೆಲ್ವಿಟಾ ಡಿಸೋಜ, ಕ್ಲಿಯೋನ್ ಡಿಸೋಜ, ಪ್ರೀತಮ್ ನೊರೊನ್ಹ ಪಜೀರು, ಕಾರ್ಯಕ್ರಮದ ಪ್ರಾಯೋಜಕ ಮ್ಯಾಕ್ಸಿಮ್ ಡಿಸೋಜ ರಾಣಿಪುರ, ಡೋಲ್ಫಿ ಡಿಸೋಜ ರಾಣಿಪುರ, ರೋನಿ ಡಿಸೋಜ ಪೆರ್ಮನ್ನೂರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರೂಪಕ
ರೋಷನ್ ಕ್ರಾಸ್ತಾ ಪಾಲ್ದನೆ ಮೊದಲಾದವರು ಉಪಸ್ಥಿತರಿದ್ದರು.
ಫೇಸ್ ಬುಕ್ ನೇರಪ್ರಸಾರ ವೀಕ್ಷಿಸಿದ ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ಪ್ರಾಣ ಉಳಿಸಿದ ಉಳ್ಳಾಲ ಹೊಯ್ಗೆಯ ಐವರು ಯುವಕರ ಸಾಧನೆಯನ್ನು ಪ್ರಶಂಸಿದ್ದಾರೆ.
Ullal Fishermen rescued from drowning team felicitated for saving life
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm