ಬ್ರೇಕಿಂಗ್ ನ್ಯೂಸ್
31-08-21 01:11 pm Mangaluru Correspondent ಕರಾವಳಿ
ಉಳ್ಳಾಲ, ಆಗಸ್ಟ್ 31: ಕಾರಿನಲ್ಲಿದ್ದ ಓಂ ಸಾಯಿ ಮತ್ತು ಕೊರಗಜ್ಜ ಹೆಸರಿನ ಸ್ಟಿಕ್ಕರ್ ತೆಗೆಯಲು ಮುಂದಾದ ಟ್ರಾಫಿಕ್ ಎಎಸ್ಸೈ ವಿರುದ್ಧ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಓಂ ಸಾಯಿ, ಸ್ವಾಮಿ ಕೊರಗಜ್ಜ, ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಇದ್ದ ಮಾರುತಿ 800 ಕಾರೊಂದನ್ನ ತೊಕ್ಕೊಟ್ಟು ಫ್ಲೈ ಓವರ್ ಅಡಿಯಲ್ಲಿ ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಎಸ್ಸೈ ಆಲ್ಬರ್ಟ್ ಲಸ್ರಾದೊ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.
ಬಬೀಶ್ ಪೂಜಾರಿ ಎಂಬವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಹಾದು ಹೋಗುತ್ತಿದ್ದ ಸಂದರ್ಭ ತೊಕ್ಕೊಟ್ಟಿನಲ್ಲಿ ಫ್ಲೈ ಓವರ್ ಕೆಳಗಡೆ ಕರ್ತವ್ಯದಲ್ಲಿದ್ದ ಎಎಸ್ಸೈ ಆಲ್ಬರ್ಟ್ ಲಸ್ರಾದೊ ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳು ಸಮರ್ಪಕವಾಗಿದ್ದು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ, ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಗಳನ್ನ ಕಳಚಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ. ವಿಚಲಿತರಾದ ಕಾರು ಚಾಲಕ ಬಬೀಶ್ ಪೂಜಾರಿ ಕೂಡಲೇ ಬಜರಂಗದಳ ಸಂಘಟನಾ ಪ್ರಮುಖರು ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರಲ್ಲಿ ದೂರಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಅವರಲ್ಲೂ ಎಎಸ್ಸೈ ಲಸ್ರಾದೊ ಅವರು ಉಡಾಫೆಯಿಂದ ಮಾತನಾಡಿದ್ದು ಕೆರಳಿದ ಹಿಂದೂ ಸಂಘಟನೆ ಸದಸ್ಯರು ಜಮಾಯಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಕರ್ತವ್ಯದಲ್ಲಿ ಕೋಮುಭಾವನೆ ತೋರಿಸಿದ ಲಸ್ರಾದೊ ಅವರಂತಹ ಅಧಿಕಾರಿಗಳನ್ನ ಕರ್ತವ್ಯದಿಂದ ವಜಾಗೊಳಿಸುವಂತೆ ಚಂದ್ರಹಾಸ ಪಂಡಿತ್ ಹೌಸ್ ಅವರು ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಅವರಲ್ಲಿ ಒತ್ತಾಯಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಪೊಲೀಸರು ಹಗಲಿರುಳು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿದ್ದು ಇಂತಹ ಕೆಲವೊಂದು ಲಜ್ಜೆಗೆಟ್ಟ ಅಧಿಕಾರಿಗಳು ಪ್ರಾಮಾಣಿಕ ಪೊಲೀಸರ ಮರ್ಯಾದಿ ಹರಾಜು ಮಾಡುವ ಕಾರ್ಯ ನಡೆಸುತ್ತಿದ್ದಾರೆ. ಇಂಥವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಜರಂಗದಳ ಪ್ರಮುಖರಾದ ಅರ್ಜುನ್ ಮಾಡೂರು ಮಾತನಾಡಿ, ಹಿಂದೂಗಳು ತಾವು ನಂಬುವ ದೇವರ ಹೆಸರು, ಚಿತ್ರಗಳನ್ನ ವಾಹನಗಳಲ್ಲಿ ಅಂಟಿಸುತ್ತಾರೆ. ಅದನ್ನು ಕೀಳಲು ಮುಂದಾಗಿರುವ ಲಸ್ರಾದೊ ಅಂತಹ ಅಧಿಕಾರಿಗಳ ಕ್ರಮ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಇಂತಹ ಅಧಿಕಾರಿಗಳನ್ನು ಕರ್ತವ್ಯದಲ್ಲಿ ಮುಂದುವರಿಯಬಾರದೆಂದು ಆಗ್ರಹಿಸಿದ್ದಾರೆ.
ಟ್ರಾಫಿಕ್ ಎಎಸ್ಸೈ ಲಸ್ರಾದೊ ವಾಹನ ಸವಾರರಿಗೆ ವಿನಾಕಾರಣ ಪೀಡನೆ ನೀಡುತ್ತಿರುವ ಅನೇಕ ದೂರುಗಳು ಕೇಳಿ ಬಂದಿವೆ. ದಾಖಲೆಗಳು ಸಮರ್ಪಕವಾಗಿದ್ದರೂ ವಾಹನದ ಹಳೆಯ ಕೇಸುಗಳ ದಂಡವನ್ನ ಸ್ಥಳದಲ್ಲೇ ಪಾವತಿಸುವಂತೆ ವಾಹನ ಸವಾರರನ್ನು ಪೀಡಿಸುವುದು, ತಪ್ಪಿದಲ್ಲಿ ವಾಹನ ಜಪ್ತಿ ಮಾಡಲು ಮುಂದಾಗುವ ದೂರುಗಳು ಕೇಳಿ ಬಂದಿವೆ. ಮೇಲಧಿಕಾರಿಗಳು ಇಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Video:
Thokottu koragajja sticker on Car traffic Asi Lasrado police tries to remove sticker Hindu activists intervene and oppose the act of the traffic inspector in Mangalore.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm