ಬ್ರೇಕಿಂಗ್ ನ್ಯೂಸ್
07-09-21 05:34 pm Mangaluru Correspondent ಕರಾವಳಿ
ಮಂಗಳೂರು, ಸೆ.8: ಕಳೆದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಜನರನ್ನು ದಂಗುಬಡಿಸಿದ್ದ ಗೋಡೆಬರಹ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ಲಭಿಸಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಆರೋಪಿಗಳಿಗೆ ಮಂಗಳೂರಿನ ಕೋರ್ಟಿನಲ್ಲಿ ಜಾಮೀನು ಸಿಗದೆ, ಒಂಬತ್ತು ತಿಂಗಳ ಬಳಿಕ ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದಾರೆ.
ಆರೋಪಿಗಳ ಪೈಕಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮಾಝ್ ಮುನೀರ್ ಅಹ್ಮದ್ ಗೆ ಪ್ರಕರಣ ನಡೆದ ಎರಡು ತಿಂಗಳಲ್ಲೇ ಮಂಗಳೂರಿನ ಸೆಷನ್ಸ್ ಕೋರ್ಟಿನಲ್ಲಿ ಜಾಮೀನು ಲಭಿಸಿತ್ತು. ಇನ್ನಿಬ್ಬರು ಆರೋಪಿಗಳಿಗೆ ಮಂಗಳೂರಿನ ನ್ಯಾಯಾಲಯದಲ್ಲಿ ಜಾಮೀನು ಲಭಿಸಿರಲಿಲ್ಲ. ಆನಂತರ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ತೀರ್ಪನ್ನು ಕಾದಿರಿಸಿತ್ತು. ವಾರದ ಹಿಂದೆ, ಜಾಮೀನು ನೀಡಿ ಹೈಕೋರ್ಟ್ ತೀರ್ಪು ನೀಡಿತ್ತು.
2020ರ ನವೆಂಬರ್ 27ರಂದು ಕದ್ರಿ ಠಾಣೆ ವ್ಯಾಪ್ತಿಯ ಬಿಜೈ ಬಳಿ ಗೋಡೆ ಬರಹ ಕಂಡುಬಂದಿತ್ತು. ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಝಿಂದಾಬಾದ್, ತಾಲಿಬಾನ್ ಝಿಂದಾಬಾದ್ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿತ್ತು. ಎಲ್ಲರಿಗೂ ಕಾಣುವಂತೆ, ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ಬರೆಯಲಾಗಿದ್ದ ಬರಹದ ಬಗ್ಗೆ ಭಾರೀ ಆಕ್ರೋಶ ಕೇಳಿಬಂದಿತ್ತು. ಮಂಗಳೂರಿನ ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ಬರಹ ಬರೆದಿದ್ದ ಕಾರಣ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು. ಮಂಗಳೂರಿಗೆ ಉಗ್ರವಾದಿಗಳ ಸಂಪರ್ಕ ಹೊಂದಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿದ್ದರು.
ಆನಂತರ ವಾರದ ಅಂತರದಲ್ಲೇ ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಅಹ್ಮದ್ ಮತ್ತು ಮಹಮ್ಮದ್ ಶಾರೀಕ್ ಗೋಡೆ ಬರಹ ಬರೆದ ಆರೋಪಿಗಳಾಗಿದ್ದು, ಇಬ್ಬರೂ ತೀರ್ಥಹಳ್ಳಿ ಮೂಲದವರಾಗಿದ್ದರು. ಮಾಝ್ ಮುನೀರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿಕೊಂಡು ಆರ್ಯ ಸಮಾಜ ರಸ್ತೆಯಲ್ಲಿ ಫ್ಲಾಟ್ ಒಂದರಲ್ಲಿ ನೆಲೆಸಿದ್ದ. ಶಾರೀಕ್ ಈತನ ಗೆಳೆಯನಾಗಿದ್ದು, ಮಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಆನಂತರ ವಾರದ ನಂತರ ಇವರಿಬ್ಬರಿಗೂ ಆಶ್ರಯ ಮತ್ತು ಹಣಕಾಸು ನೆರವು ನೀಡಿದ್ದ ಆರೋಪದಲ್ಲಿ ಸಾದತ್ ಹುಸೇನ್ ಎಂಬಾತನನ್ನು ಬಂಧಿಸಲಾಗಿತ್ತು.
ವಿಚಾರಣೆ ನಡೆಸಿದ್ದ ಎನ್ಐಎ ಅಧಿಕಾರಿಗಳು
ಗೋಡೆ ಬರಹ ಪ್ರಕರಣ ದೇಶದ ಗಮನ ಸೆಳೆಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಮಂಗಳೂರಿಗೆ ಬಂದು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಬೇರಾವುದೇ ಟೆರರ್ ಲಿಂಕ್ ಇಲ್ಲ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಹಿಂತಿರುಗಿದ್ದರು. ಆನಂತರ ಮಾಝ್ ಮುನೀರ್ ವಿದ್ಯಾರ್ಥಿಯಾಗಿದ್ದ ನೆಲೆಯಲ್ಲಿ ಎರಡು ತಿಂಗಳಲ್ಲೇ ಜಾಮೀನು ಲಭಿಸಿತ್ತು. ಮಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೇನ್ ಜಾಮೀನು ಸಿಗದೆ ಜೈಲಿನಲ್ಲಿಯೇ ಇದ್ದರು. ಇದೀಗ ವಾರದ ಹಿಂದೆ, ಹೈಕೋರ್ಟಿನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಆರೋಪಿಗಳ ವಿಚಾರಣೆ ಸಂದರ್ಭ ಗೋಡೆ ಬರಹ ಬರೆಯುವುದಕ್ಕೆ ಪ್ರೇರಣೆ ನೀಡಿದ್ದು ಅರಾಫತ್ ಆಲಿ ಎನ್ನುವ ವಿಚಾರವನ್ನು ಪೊಲೀಸರಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ. ಅರಾಫತ್ ಆಲಿ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆಯೇ ಸೌದಿ ಅರೇಬಿಯಾಕ್ಕೆ ತೆರಳಿದ್ದ. ಗೋಡೆ ಬರಹದಲ್ಲಿ ಯಾವ ರೀತಿಯ ವಿಷಯ ಇರಬೇಕೆಂದು ಹೇಳಿದ್ದಲ್ಲದೆ, ಹೀಗೆಯೇ ಬರೆಯುವಂತೆ ಸೂಚಿಸಿದ್ದು ಅರಾಫತ್ ಆಲಿ ಎನ್ನುವ ವಿಚಾರವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ತಾಲಿಬಾನ್ ಕಾನೂನಿಗಾಗಿ ಗೋಡೆಬರಹ
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಸ್ರೇಲಿಗರು ಪ್ಯಾಲೆಸ್ತೀನ್ ಮೇಲೆ ದಾಳಿ ಮಾಡಿದ್ದನ್ನು ವಿರೋಧಿಸಿ ಭಾರತದಲ್ಲಿ ಕೆಲವು ಮುಸ್ಲಿಮ್ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದವು. ಅದೇ ಸಂದರ್ಭ ಇಸ್ರೇಲ್ ಮೇಲಿನ ದ್ವೇಷದ ಭಾವನೆ ಬೆಳೆಸಿಕೊಂಡಿದ್ದ ಅರಾಫತ್ ಆಲಿ ಮಂಗಳೂರಿನಲ್ಲಿ ಗೋಡೆ ಬರಹ ಬರೆಯಲು ತನ್ನ ಸಹಚರರಿಗೆ ಪ್ರೇರಣೆ ನೀಡಿದ್ದ. ಹಿಂದು ಸಂಘಟನೆಗಳ ಪರವಾದ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸುವುದನ್ನು ವಿರೋಧಿಸಿ, ಷರೀಯತ್ ಪ್ರಕಾರದ ತಾಲಿಬಾನ್ ಕಾನೂನು ಭಾರತದಲ್ಲಿಯೂ ಬರಬೇಕು ಅನ್ನುವ ಉದ್ದೇಶದಿಂದ ಗೋಡೆ ಬರಹ ಬರೆಯುವಂತೆ ಪ್ರೇರಣೆ ನೀಡಿದ್ದ. ಮಂಗಳೂರಿನ ಹಲವೆಡೆ ಗೋಡೆಬರಹ ಬರೆಯುವ ಮೂಲಕ ತಮ್ಮ ಪರವಾಗಿರುವ ಯುವಕರಿಗೆ ಪ್ರಚೋದನೆ ಮತ್ತು ವಿರೋಧಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶ ಹೊಂದಿದ್ದ ಅನ್ನುವುದನ್ನು ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಮಂಗಳೂರಿನ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Pro terror Graffiti case in Mangalore both accused get bail from High Court after nine months. Two man, including an engineering student, had been arrested for allegedly scribbling pro-terror graffiti on buildings in Karnataka's Mangalore. The pro-terror graffiti messages was written by both the accused had allegedly expressed support to terror outfits Lashkar-e-Taiba and Taliban. The two accused have been identified as 22-year-old Mohammed Shariq and 21-year-old Mazz Muner Ahmed. Both the accused were known to each other and hail from Thirthahalli in the Shimoga district of Karnataka.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm