ಬ್ರೇಕಿಂಗ್ ನ್ಯೂಸ್
15-09-21 10:32 am Mangaluru Correspondent ಕರಾವಳಿ
ಮಂಗಳೂರು, ಸೆ.15: ಸಾಮಾನ್ಯವಾಗಿ ಕ್ರೈಮ್ ಎಪಿಸೋಡುಗಳಂದ್ರೆ ಟೀವಿ ಧಾರಾವಾಹಿಯಾಗಿ ಬರುತ್ತಿದ್ದವು. ಘಟನಾವಳಿಯನ್ನು ಮರುಸೃಷ್ಟಿಸಿ ಅದಕ್ಕೆ ಪೂರಕವಾಗುವಂತೆ ಕಥೆ ಕಟ್ಟಿ ತೋರಿಸುತ್ತಿದ್ದರು. ಇಲ್ಲವೇ, ಪೊಲೀಸ್ ಅಧಿಕಾರಿಗಳನ್ನು ಸಂದರ್ಶಿಸಿ ಒಟ್ಟು ವೃತ್ತಾಂತವನ್ನು ಕಟ್ಟಿಕೊಡುವ ಕ್ರೈಮ್ ಸ್ಟೋರಿಗಳು ಬಂದಿರುವುದನ್ನು ನೋಡಿದ್ದೇವೆ. ಆದರೆ, ಪೊಲೀಸರು ಒಂದು ಕೇಸಿನ ಹಿಂದೆ ಬಿದ್ದು ದಿನಗಟ್ಟಲೆ ಕಾರ್ಯಾಚರಣೆ ನಡೆಸುವುದು, ಕೇಸ್ ಪತ್ತೆ ಮಾಡುವುದಕ್ಕಾಗಿ ಏನೆಲ್ಲಾ ಕಸರತ್ತು ಮಾಡುವುದು, ರಿಸ್ಕ್ ತೆಗೆದುಕೊಂಡು ಕಾದಾಡುವುದು ಹೀಗೆಲ್ಲಾ ರಿಯಲ್ ಸೀನ್ ಗಳನ್ನು ನಾವು ಯಾವತ್ತೂ ನೋಡಿರಲ್ಲ.
ಆದರೆ, ಇದೇ ಮೊದಲ ಬಾರಿಗೆ ಈ ಮಾದರಿಯ ಕ್ರೈಮ್ ಎಪಿಸೋಡ್ ರೆಡಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು ನಗರದಲ್ಲಿ ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ, ಕ್ರೈಮ್ ಆದಾಗ ಎಷ್ಟು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿಯುತ್ತಾರೆ ಎಂಬುದನ್ನು ಹಿಡಿದು ಇಡೀ ಪ್ರಕರಣದ ವೃತ್ತಾಂತವನ್ನು ಕಟ್ಟಿಕೊಡಲು ತಂಡವೊಂದು ಮುಂದಾಗಿದೆ. ಇದಕ್ಕಾಗಿ ಒಟಿಟಿ ಪ್ಲಾಟ್ ಫಾರ್ಮ್ ನೆಟ್ ಫ್ಲಿಕ್ಸ್ ನಲ್ಲಿ ಕ್ರೈಮ್ ಸ್ಟೋರಿ ಸಿರೀಸ್ ನಲ್ಲಿ ರಿಯಲ್ ಆಗಿ ಮೂಡಿಬಂದಿರುವ ನಾಲ್ಕು ಕ್ರೈಮ್ ಸ್ಟೋರಿಗಳು ಇದೇ ಸೆ.22ರಿಂದ ತೆರೆಗೆ ಬರಲಿದೆ.
ಡಾಕ್ಯುಮೆಂಟರಿ, ವೆಬ್ ಸಿರೀಸ್, ಶಾರ್ಟ್ ಫಿಲ್ಮ್ ಮೂಲಕ ಜಗತ್ತಿನಾದ್ಯಂತ ಸಿನಿಪ್ರಿಯರನ್ನು ಸೆಳೆಯುತ್ತಿರುವ ನೆಟ್ ಫ್ಲಿಕ್ಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲೀಗ ಕ್ರೈಮ್ ಸ್ಟೋರೀಸ್- ಇಂಡಿಯಾ ಡಿಟೆಕ್ಟಿವ್ಸ್ ಎನ್ನುವ ಹೆಸರಲ್ಲಿ ರಿಯಲ್ ಆಗಿ ಮೂಡಿಬರಲಿದೆ. ವೆಬ್ ಸಿರೀಸ್ ಮಾಡುವ ವಿನೋ ಎಂಬ ಕಂಪನಿಯವರು ಈ ಕ್ರೈಮ್ ಸ್ಟೋರಿ ರೆಡಿ ಮಾಡಿದ್ದು, ವಿದೇಶಿಯರು ಸೇರಿದಂತೆ ಸುಮಾರು 25 ಜನರಿದ್ದ ತಂಡ ಒಂದು ವರ್ಷ ಕಾಲ ಬೆಂಗಳೂರು ಪೊಲೀಸರ ಜೊತೆಗಿದ್ದುಕೊಂಡು ಕ್ಯಾಮರಾ ವರ್ಕ್ ಮಾಡಿದ್ದಾರೆ. ಲಂಡನ್ ಮೂಲದ ಕ್ಲಾರಾ ಮತ್ತು ಜಾನ್ ಎಂಬವರು ಈ ಸಿರೀಸ್ ಡೈರೆಕ್ಟರ್ ಆಗಿದ್ದು, ಬೆಂಗಳೂರಿನ ರಿಚಾ, ನವೀನ್, ತರುಣ್, ಅಮಿತ್, ಸಂದೀಪ್ ಎನ್ನುವ ಐವರ ತಂಡದ ನೇತೃತ್ವದಲ್ಲಿ ಚಿತ್ರೀಕರಣ ನಡೆದಿತ್ತು.
ವಿಶೇಷ ಏನಂದ್ರೆ, ಕ್ರೈಮ್ ಸ್ಟೋರಿ ಚಿತ್ರೀಕರಣ ನಡೆದಾಗ ಈಗ ಮಂಗಳೂರು ಪೊಲೀಸ್ ಕಮಿಷನರ್ ಆಗಿರುವ ಶಶಿಕುಮಾರ್, ಬೆಂಗಳೂರು ನಗರದಲ್ಲಿ ಉತ್ತರ ವಿಭಾಗದ ಡಿಸಿಪಿ ಆಗಿದ್ದರು. ಇವರ ನೇತೃತ್ವದಲ್ಲಿಯೇ ಪ್ರತೀ ಅಪರಾಧ ಪ್ರಕರಣಗಳ ತನಿಖೆ ನಡೆಯುತ್ತಿದ್ದುದರಿಂದ ಚಿತ್ರೀಕರಣ ತಂಡವೂ ಇವರ ಜೊತೆಗೇ ಇತ್ತು. ಹೀಗಾಗಿ ಈಗಾಗ್ಲೇ ಇಂಡಿಯಾ ಡಿಟೆಕ್ಟಿವ್ಸ್ ಹೆಸರಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು ಆಗಿನ ಡಿಸಿಪಿ ಶಶಿಕುಮಾರ್ ಸೇರಿದಂತೆ ಬೆಂಗಳೂರು ನಗರದ ಬಹುತೇಕ ಅಧಿಕಾರಿಗಳು ರಿಯಲ್ ಆಗಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಭಾಸ್ಕರ ರಾವ್ ಬೆಂಗಳೂರು ಕಮಿಷನರ್ ಆಗಿದ್ದಾಗ ಈ ತಂಡ ಚಿತ್ರೀಕರಣದ ಅವಕಾಶ ಕೋರಿ ಬಂದಿತ್ತು. ಭಾಸ್ಕರ ರಾವ್, ಚಿತ್ರ ತಂಡಕ್ಕೆ ಸಂಪೂರ್ಣ ಅವಕಾಶ ಕೊಟ್ಟಿದ್ದರು. ಅಲ್ಲದೆ, ರಿಯಲ್ ಟೈಮಲ್ಲಿ ಪೊಲೀಸರ ಜೊತೆಗಿದ್ದುಕೊಂಡು ಚಿತ್ರೀಕರಣ ನಡೆಸುವುದಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಪ್ರತಿ ದಿನವೂ ರಾತ್ರಿ- ಹಗಲೆನ್ನದೆ 12 ಮಂದಿಯ ತಂಡ ಫುಲ್ ಟೈಮ್ ಪೊಲೀಸರ ಜೊತೆಗಿದ್ದುಕೊಂಡೇ ಕೆಲಸ ಮಾಡಿತ್ತು. ಅಪರಾಧ ಪತ್ತೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಉನ್ನತ ಮಟ್ಟದ ಅಧಿಕಾರಿಗಳೇ ಹೆಚ್ಚು ಹೈಲೈಟ್ ಆಗುತ್ತಾರೆ. ಆದರೆ, ಕೆಳ ಹಂತದ ಎಎಸ್ಐ, ಪಿಎಸ್ಐ, ಹೆಡ್ ಕಾನ್ಸ್ ಟೇಬಲ್ ವರ್ಕ್ ತುಂಬ ಇರುತ್ತದೆ, ಕ್ರೈಮ್ ಪತ್ತೆಯ ಸಂದರ್ಭ ಅವರು ಯಾವ ರೀತಿ ತಂಡವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಈ ಸಿರೀಸ್ ನಲ್ಲಿ ತೋರಿಸಲಾಗಿದೆ ಎನ್ನುತ್ತಾರೆ, ಕಮಿಷನರ್ ಶಶಿಕುಮಾರ್.
ಅಂದಹಾಗೆ, 2019ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ನಾಲ್ಕು ಮಹತ್ವದ ಅಪರಾಧ ಪ್ರಕರಣಗಳನ್ನು ಈ ಸಿರೀಸ್ ನಲ್ಲಿ ತೋರಿಸಲಾಗಿದೆ. ಕೆ.ಆರ್.ಪುರಂನಲ್ಲಿ ನಡೆದಿದ್ದ ಮಗಳಿಂದಲೇ ತಾಯಿಯ ಹತ್ಯೆ, ನಂದಿನಿ ಲೇಔಟ್ ನಲ್ಲಿ 35 ವರ್ಷದ ಫೈನಾನ್ಸರ್ ಯುವಕನ ಶವ ಪತ್ತೆ ಪ್ರಕರಣ, ಸಂಜಯ ನಗರದಲ್ಲಿ ಮಹಿಳೆಯ ಕೊಲೆ ಮತ್ತು ಸುಬ್ರಹ್ಮಣ್ಯ ನಗರದಲ್ಲಿ ಯುವತಿ ಹತ್ಯೆ ಹೀಗೆ ನಾಲ್ಕು ಪ್ರಕರಣಗಳನ್ನು ಸಿರೀಸಲ್ಲಿ ತೋರಿಸಲಿದ್ದಾರೆ. ಯುವಕನ ಶವ ಪತ್ತೆ ಪ್ರಕರಣ ತೀವ್ರ ಕುತೂಹಲ ಸೃಷ್ಟಿಸಿತ್ತು. ಆರು ತಿಂಗಳ ಕಾಲ ಪೊಲೀಸರು ಎಷ್ಟೆಲ್ಲಾ ವರ್ಕ್ ಮಾಡಿದ್ರೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆತನಿಗೆ ಸಂಬಂಧಪಟ್ಟ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರೂ, ಸುಳಿವು ಲಭಿಸಿರಲಿಲ್ಲ. ಕೊನೆಗೆ, ಒಂದು ಸಿಸಿಟಿವಿ ನೀಡಿದ್ದ ಸುಳಿವು ಅಪರಾಧಿಗಳನ್ನು ಪತ್ತೆ ಮಾಡಿಸಿತ್ತು ಎಂದು ಸ್ಮರಿಸುತ್ತಾರೆ, ಕಮಿಷನರ್.
ತಂಡದಲ್ಲಿ ಮೂವರು ಯುರೋಪಿಯನ್ ಇದ್ದರು. ಇಬ್ಬರು ಯುಕೆನವರು ಇದ್ದರು. ಉಳಿದಂತೆ, ಒಟ್ಟು 25 ಜನ ತಂಡವಾಗಿ ಕೆಲಸ ಮಾಡಿದ್ದಾರೆ. ಕೆಲವೊಮ್ಮೆ ಪೊಲೀಸ್ ಠಾಣೆಯಲ್ಲೇ ನಿದ್ದೆ ಮಾಡುತ್ತಿದ್ದರು. ಪೊಲೀಸರ ಜೊತೆಗೇ ಊಟ, ತಿಂಡಿ ಮಾಡಿಕೊಂಡು ಮಲಗುತ್ತಿದ್ದರು. ಆರು ತಿಂಗಳ ಕಾಲ ಕಂಟಿನ್ಯು ವರ್ಕ್ ಮಾಡಿದ್ದರು. ಆನಂತರ ಒಂದೂವರೆ ವರ್ಷ ಕಾಲ ಪೋಸ್ಟ್ ಪ್ರೊಡಕ್ಷನ್ ಕೆಲಸದ ಬಳಿಕ ಈಗ ವೆಬ್ ಸಿರೀಸ್ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ರು ಕಮಿಷನರ್.
A new documentary series detailing the inner workings of four major crime investigations in Bengaluru will soon release on Netflix India where Mangalore Police commissioner Shashi Kumar is seen playing in Vital role in solving murder mystery. Titled Crime Stories: India Detectives, the series will be releasing on September 22, the OTT platform announced on Tuesday, September 14.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am