ಬ್ರೇಕಿಂಗ್ ನ್ಯೂಸ್
15-09-21 02:38 pm Mangaluru Correspondent ಕರಾವಳಿ
ಮಂಗಳೂರು, ಸೆ.15: ಇತ್ತೀಚೆಗೆ ಶ್ರೀಲಂಕಾದಿಂದ ಐಸಿಸ್ ಪ್ರೇರಿತ ಶಂಕಿತ ಉಗ್ರರು ಭಾರತದ ಕರಾವಳಿಗೆ ಒಳನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯಿಂದ ಹೈಎಲರ್ಟ್ ಸೂಚನೆ ಬಂದಿತ್ತು. ಭಾರತದ ಕರಾವಳಿಯಾದ್ಯಂತ ಎಲರ್ಟ್ ಮಾಡಲು ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯಲ್ಲಿ ಸದ್ದು ಮಾಡಿದೆ.
ಕಳೆದ ಒಂದು ವಾರದಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ಇಲ್ಲಿಂದ ವಿದೇಶಕ್ಕೆ ಕನೆಕ್ಟ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ತುರಾಯಾ ಸ್ಯಾಟಲೈಟ್ ಫೋನ್ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗಿದ್ದರೂ, ರಾಜ್ಯದ ಕರಾವಳಿಯಲ್ಲಿ ಹಲವು ಬಾರಿ ಸಂಪರ್ಕ ಆಗಿರುವುದನ್ನು ಗುಪ್ತಚರ ಪಡೆಗಳು ದೃಢಪಡಿಸಿವೆ.
ಇತ್ತೀಚೆಗೆ ಲಂಕಾ ಮೂಲದ 13 ಮಂದಿ ಶಂಕಿತರು ಪಾಕಿಸ್ಥಾನ ಅಥವಾ ಸಿರಿಯಾಕ್ಕೆ ತೆರಳುವ ಉದ್ದೇಶದಿಂದ ಭಾರತದ ಕರಾವಳಿಗೆ ಬಂದಿದ್ದಾರೆ ಎನ್ನಲಾಗಿತ್ತು. ತಮಿಳು ಮೀನುಗಾರರ ಸೋಗಿನಲ್ಲಿ ಶಂಕಿತರು ಬಂದಿದ್ದರು ಎನ್ನುವ ಮಾಹಿತಿ ಇತ್ತಾದರೂ, ಅದನ್ನು ಪತ್ತೆ ಮಾಡಲು ಗುಪ್ತಚರ ಪಡೆಗಾಗಲೀ, ಪೊಲೀಸರಿಗಾಗಲೀ ಸಾಧ್ಯವಾಗಿಲ್ಲ. ಪತ್ತೆ ಮಾಡಿದ್ರೂ ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ. ಇದರ ನಡುವಲ್ಲೇ ತುರಾಯಾ ಫೋನ್ ಸದ್ದು ಮಾಡಿದ್ದು, ಸ್ಲೀಪರ್ ಸೆಲ್ ನೆಟ್ವರ್ಕ್ ಬಗ್ಗೆ ಶಂಕೆ ಮೂಡಿಸಿದೆ. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ಫೋನ್ ಟ್ರೇಸ್ ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಫೋನ್ ನೆಟ್ವರ್ಕ್ ಟ್ರೇಸ್ ಆಗಿದೆ.
ಎರಡು ತಿಂಗಳ ಹಿಂದೆ ಎನ್ಐಎ ಅಧಿಕಾರಿಗಳು ಉಗ್ರವಾದಿ ಗುಂಪುಗಳ ಜೊತೆಗಿನ ಸಂಬಂಧ ಶಂಕೆಯಲ್ಲಿ ದೇಶಾದ್ಯಂತ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಂಗಳೂರಿನ ಉಳ್ಳಾಲ ಮತ್ತು ಭಟ್ಕಳದಲ್ಲಿ ಇಬ್ಬರು ವ್ಯಕ್ತಿಗಳನ್ನು ಉಗ್ರರ ಜೊತೆಗಿನ ಸಂಪರ್ಕದ ಹಿನ್ನೆಲೆಯಲ್ಲಿ ಬಂಧಿಸಿದ್ದೂ ನಡೆದಿತ್ತು. ಇದರ ಬೆನ್ನಲ್ಲೇ ಲಂಕಾ ಮೂಲದವರು ಕೇರಳ ಅಥವಾ ಕರ್ನಾಟಕದ ಕರಾವಳಿಗೆ ಬಂದು ಇಲ್ಲಿಂದ ಪಾಕಿಸ್ಥಾನಕ್ಕೆ ತೆರಳಲು ಪ್ಲಾನ್ ಹಾಕಿದ್ದಾರೆಂಬ ಮಾಹಿತಿಗಳು ಬಂದಿದ್ದವು.
ಇಂಥ ಬೆಳವಣಿಗೆಯ ಬೆನ್ನಲ್ಲೇ ಕರಾವಳಿಯಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದು, ಲಂಕನ್ನರು ಬರೋದಕ್ಕೂ ಇಲ್ಲಿಂದ ಫೋನ್ ಕನೆಕ್ಟ್ ಆಗಿರೋದಕ್ಕೂ ಒಂದಕ್ಕೊಂದು ತಾಳೆ ಆಗ್ತಿದ್ಯಾ ಅನ್ನೋದ್ರ ಬಗ್ಗೆ ಶಂಕೆ ಮೂಡಿದೆ. ಕರಾವಳಿಯಲ್ಲಿ ಸೈಲೆಂಟ್ ಮೋಡಲ್ಲಿದೆ ಎನ್ನಲಾಗುತ್ತಿರುವ ಉಗ್ರರ ಸ್ಲೀಪರ್ ಸೆಲ್ ಗಳಿಂದಲೇ ಸ್ಯಾಟಲೈಟ್ ಫೋನ್ ಸಂಪರ್ಕ ಆಗ್ತಿದೆಯಾ ಅನ್ನೋದ್ರ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಯಾಕಂದ್ರೆ, ತುರಾಯಾ ಫೋನ್ ಬಳಕೆ ಮಾಡಿದಲ್ಲಿ ಅದನ್ನು ಯಾರು ಬಳಕೆ ಮಾಡಿದ್ದಾರೆ ಮತ್ತು ಯಾರಿಗೆ ಕನೆಕ್ಟ್ ಆಗಿದೆ ಅನ್ನುವುದನ್ನು ಖಚಿತವಾಗಿ ಪತ್ತೆ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ಈ ಫೋನ್ ಗಳ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧ ಮಾಡಲಾಗಿತ್ತು. ಇದಲ್ಲದೆ, ಈ ಫೋನ್ ಬಳಕೆಯಾದ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತವೆ ಎನ್ನಲಾಗುತ್ತಿದೆ. ಹೀಗಾಗಿ ಕರಾವಳಿಯಲ್ಲಿ ಪದೇ ಪದೇ ತುರಾಯಾ ಫೋನ್ ಬಳಕೆ ಕಂಡುಬರುತ್ತಿರುವುದು, ಇದು ಉಗ್ರರದ್ದೇ ಹೆಜ್ಜೆ ಗುರುತು ಅನ್ನೋ ಬಲವಾದ ಶಂಕೆ ಮೂಡುವಂತಾಗಿದೆ.
Satellite phone gets activated in Mangalore once again. Signals get detected from Belthangady and Chikmagalur forest area. Sri Lanka terror link suspected.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm