ಸೇತುವೆಯಲ್ಲಿ ಸಾಗುತ್ತಿದ್ದಾಗಲೇ ಆಂಬುಲೆನ್ಸ್ ಟೈರ್ ಸ್ಫೋಟ ; ನದಿಗೆ ಹಾರುತ್ತಿದ್ದ ವಾಹನ ಅಲ್ಪದರಲ್ಲಿ ಬಚಾವ್ !

16-09-21 01:46 pm       Udupi Correspondent   ಕರಾವಳಿ

ಅನಾರೋಗ್ಯ ಪೀಡಿತ ಮಗುವನ್ನು ಕರೆತರುತ್ತಿದ್ದ ಆಂಬ್ಯುಲೆನ್ಸ್ ವಾಹನದ ಟೈರ್ ಸ್ಫೋಟಗೊಂಡು ಅಪಘಾತಕ್ಕೀಡಾದ ಘಟನೆ ಮಾಬುಕಳ ಸೇತುವೆ ಬಳಿ ನಡೆದಿದೆ. 

ಉಡುಪಿ, ಸೆ.16: ಅನಾರೋಗ್ಯ ಪೀಡಿತ ಮಗುವನ್ನು ಕರೆತರುತ್ತಿದ್ದ ಆಂಬ್ಯುಲೆನ್ಸ್ ವಾಹನದ ಟೈರ್ ಸ್ಫೋಟಗೊಂಡು ಅಪಘಾತಕ್ಕೀಡಾದ ಘಟನೆ ಬ್ರಹ್ಮಾವರ ತಾಲೂಕು ಮಾಬುಕಳ ಸೇತುವೆ ಬಳಿ ನಡೆದಿದೆ. 

ಕಾರವಾರ ಕಡೆಯಿಂದ ಮಗುವನ್ನು ಕರೆತರುತ್ತಿದ್ದ ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ಆಂಬ್ಯುಲೆನ್ಸ್ ನ ಟೈರ್ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದೆ. ಆಂಬ್ಯುಲೆನ್ಸ್ ಬಳಿಕ ಡಿವೈಡರ್ ಹಾರಿ ಸೇತುವೆಯ ಆವರಣ ಗೋಡೆಗೆ ಡಿಕ್ಕಿಯಾಗಿದೆ. ನದಿ ಸೇತುವೆಯಲ್ಲೇ ಘಟನೆ ನಡೆದಿದ್ದು ಆವರಣ ಗೋಡೆಗೆ ಡಿಕ್ಕಿಯಾಗಿ ನಿಂತಿದೆ.  ಅಂಬ್ಯುಲೆನ್ಸ್ ವಾಹನ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದು, ದೊಡ್ಡ ದುರಂತ ತಪ್ಪಿದೆ. 

ಘಟನೆಯಲ್ಲಿ ಮಗುವಿನ ಜೊತೆಗಿದ್ದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Udupi Ambulance tyre blast while carrying little child major accident averted from falling into river. The Kota police rushed to the spot. Child and mother are said to have slight injuries.