ಬ್ರೇಕಿಂಗ್ ನ್ಯೂಸ್
18-09-21 06:47 pm Headline Karnataka News Network ಕರಾವಳಿ
ಮಂಗಳೂರು, ಸೆ.18 : ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಮುಸ್ಲಿಮ್ ಮತ್ತು ಕ್ರಿಸ್ತಿಯನ್ ಮತಗಳ ಓಲೈಕೆ ಮಾಡಲು ಬಿಜೆಪಿಯವರು ದೇವಸ್ಥಾನ ಕೆಡವಿದ್ದಾರೆ. ಹಿಂದುಗಳಿಗೆ ಅನ್ಯಾಯಾ ಮಾಡಿದ ಗಾಂಧಿಯನ್ನೇ ನಾವು ಬಿಟ್ಟಿಲ್ಲ. ನೀವು ಯಾವ ಲೆಕ್ಕರೀ ಎಂದು ಹಿಂದು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವಸ್ಥಾನ ಕೆಡವಿದ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ದೇವಸ್ಥಾನ ಕೆಡವಿದ್ದಾದರೆ, ಬೇರೆ ಯಾವ ಚರ್ಚ್, ಮಸೀದಿಯನ್ನು ಕೆಡವಿದ್ದೀರಿ ನೀವು. ಕೇವಲ ಹಿಂದುಗಳ ಶ್ರದ್ಧಾಕೇಂದ್ರಗಳಷ್ಟೇ ನಿಮ್ಮ ಗುರಿಯಾಗಿರುವುದು. ಇಲ್ಲಿ ಒಂದೇ ಒಂದು ಚರ್ಚ್, ಮಸೀದಿ ಧ್ವಂಸ ಮಾಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಈ ನಡೆಯ ಹಿಂದೆ ಅಲ್ಪಸಂಖ್ಯಾತರ ತುಷ್ಟೀಕರಣದ ಭಾಗ ಇದೆ. ದೇವಸ್ಥಾನ ಕೆಡಹುವ ಮೂಲಕ ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದೀರಿ. ಹಿಂದುಗಳ ಪಕ್ಷ ಎಂದು ಹೇಳಿಕೊಂಡು ಬಂದ ನಿಮ್ಮ ಅಜೆಂಡಾ ಈಗ ಎಲ್ಲಿ ಹೋಯ್ತು.. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರ ಇದೆ, ಇವರದೇ ಕಾರ್ಯಕರ್ತರು, ಸಂಘ ಪರಿವಾರದ ಸಂಘಟನೆಗಳ ಹೆಸರಲ್ಲಿ ಪ್ರತಿಭಟನೆ ಮಾಡುತ್ತಾರೆ. ಇವರ ಪ್ರತಿಭಟನೆ ಯಾರ ವಿರುದ್ಧ. ಇವ್ರಿಗೆ ಅಷ್ಟು ಅಭಿಮಾನ, ಹಿಂದುಗಳ ಮೇಲೆ ನಿಷ್ಠೆ ಇದ್ದರೆ ನೀವು ಬಿಜೆಪಿಗೆ ಬೆಂಬಲ ನೀಡಬಾರದು. ಮತ್ತೆ ಬಿಜೆಪಿಯನ್ನು ಬೆಂಬಲಿಸಬಾರದು.
ದೇಗುಲ ಧ್ವಂಸದ ಪ್ರಕರಣವನ್ನು ಸಣ್ಣ ತಪ್ಪು ಎಂದು ಹೇಳಿ ಮುಚ್ಚಿ ಹಾಕುವ ಹೇಳಿಕೆ ನೀಡುತ್ತಿದ್ದಾರೆ. ಇದು ಸಣ್ಣ ತಪ್ಪಾದ್ರೆ ಮತ್ತೆ ಯಾವುದು ದೊಡ್ಡ ತಪ್ಪು. 800 ವರ್ಷಗಳ ಹಳೆಯ ದೇವಸ್ಥಾನ ಕೆಡವಿದ್ದು ಸಣ್ಣ ತಪ್ಪಾಗುವುದೇ.. ದೇವಾಲಯ ಮತ್ತೆ ನಿರ್ಮಾಣ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಯಾರ ದುಡ್ಡಲ್ಲಿ ದೇಗುಲ ನಿರ್ಮಿಸುತ್ತೀರಿ. ಜನರ ದುಡ್ಡಿನ ತೆರಿಗೆಯಲ್ಲಿ ದೇಗುಲ ನಿರ್ಮಾಣ ಮಾಡುವುದು ಬೇಡ. ಮುಜರಾಯಿ ಇಲಾಖೆಯಿಂದಲೂ ದೇಗುಲ ನಿರ್ಮಾಣ ಮಾಡಬೇಡಿ. ಸಂಸದರು, ಶಾಸಕರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಅಲ್ಲಿ ದೇಗುಲ ಕೆಡವಲು ಕಾರಣವಾಗಿರುವ ಅಧಿಕಾರಿಗಳು ಮತ್ತು ಇದಕ್ಕೆ ಅಸ್ತು ನೀಡಿದ್ದ ಜನಪ್ರತಿನಿಧಿಗಳು, ಶಾಸಕರ ದುಡ್ಡಲ್ಲಿ ದೇಗುಲ ನಿರ್ಮಿಸಿ. ಸರಕಾರದ ದುಡ್ಡಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಹಿಂದು ಮಹಾಸಭಾ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಹಿಂದುಗಳಿಗೆ ಅನ್ಯಾಯ ಮಾಡಿದ ಗಾಂಧಿಯನ್ನೇ ನಾವು ಬಿಟ್ಟಿಲ್ಲ. ಇನ್ನು ನೀವು ಯಾವ ಲೆಕ್ಕ. ಹಿಂದುಗಳಿಗೆ ಅನ್ಯಾಯ ಮಾಡಿದ ನಿಮ್ಮನ್ನು ಬಿಡುತ್ತೇವಾ.. ನಿಮಗೆ ತಕ್ಕ ಪಾಠವನ್ನು ಹಿಂದು ಮಹಾಸಭಾ ಕಲಿಸಲಿದೆ. ಬಹುಸಂಖ್ಯಾತ ದೇಶವಾದ ಭಾರತವನ್ನು ಧರ್ಮಾಧಾರಿತವಾಗಿ ವಿಭಜನೆ ಮಾಡಿದ್ದೀರಿ. ಇಲ್ಲಿ ಹಿಂದುಗಳಿಗೆ ಉಳಿಯಲು ಆಗಲ್ಲ ಅಂದರೆ ನಾವು ಎಲ್ಲಿ ಹೋಗಬೇಕು. ಸುಪ್ರೀಂ ಆದೇಶ ಅಂತ ಹೇಳುವ ನೀವು ಎಲ್ಲವನ್ನೂ ಪಾಲನೆ ಮಾಡಿದ್ದೀರಾ.. ಹೈವೇ ಬದಿಯಲ್ಲಿರುವ ಬಾರ್, ವೈನ್ ಶಾಪ್ ತೆಗೆಯಬೇಕು ಅಂತಲೂ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ, ಯಾಕೆ ನೀವು ಇದನ್ನು ಮಾಡಿಲ್ಲ. ಅದರಿಂದ ದುಡ್ಡು ಬರುತ್ತೆ ಅನ್ನುವ ಕಾರಣಕ್ಕೆ ಕೆಡವಿಲ್ಲ ತಾನೇ.. ನಿಮಗೆ ಇಚ್ಚೆ ಬಂದಂತೆ ನಡೆದುಕೊಂಡು ಹೋಗಲು ನಿಮ್ಮ ಮಾವನ ಮನೆಯ ಆಸ್ತಿಯಲ್ಲ ಇದು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಧರ್ಮೇಂದ್ರ.
In the hindu maha sabha sparked controversy over demolition of temples in Karnataka stating that we did not leave Gandhi so we wont leave even you if you hurt hindu sentiments of people.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm