ನಶೆಯಲ್ಲಿದ್ದ ಕಂಟೇನರ್ ಚಾಲಕನ ಅವಾಂತರ ; ಹೆದ್ದಾರಿಯಲ್ಲಿ ಬ್ಯಾರಿಕೇಡ್ ಎಳೆದೊಯ್ದು ಆತಂಕ ಸೃಷ್ಟಿ ! ಲಾರಿ ನಿಲ್ಲಿಸಲು ಹರಸಾಹಸ

19-09-21 02:39 pm       Udupi Correspondent   ಕರಾವಳಿ

ನಶೆಯಲ್ಲಿದ್ದ ಕಂಟೇನರ್ ಚಾಲಕ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಅಡ್ಡಾದಿಡ್ಡಿ ಚಲಿಸಿ ಆತಂಕ ಸೃಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಬಳಿ ನಡೆದಿದೆ.‌

ಕುಂದಾಪುರ, ಸೆ.19: ನಶೆಯಲ್ಲಿದ್ದ ಕಂಟೇನರ್ ಚಾಲಕ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಅಡ್ಡಾದಿಡ್ಡಿ ಚಲಿಸಿ ಆತಂಕ ಸೃಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಬಳಿ ನಡೆದಿದೆ.‌

ವೇಗ ತಡೆಗಾಗಿ ಹೆದ್ದಾರಿಗೆ ಇಡಲಾಗಿದ್ದ ಬ್ಯಾರಿಕೇಡ್ ಗೆ ಡಿಕ್ಕಿಯಾಗಿ ಅದನ್ನು ಬರೋಬ್ಬರಿ ನಾಲ್ಕು ಕಿ.ಮೀ. ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಸ್ಥಳೀಯರು, ಆಟೋ ಚಾಲಕರು ಕಂಟೇನರ್ ಚಾಲಕನ ಗಮನಕ್ಕೆ ತಂದರೂ ಆತನಿಗೆ ಗೊತ್ತಾಗಿರಲಿಲ್ಲ. 

ಮುಳ್ಳಿಕಟ್ಟೆ ಎಂಬಲ್ಲಿ ಹೆದ್ದಾರಿಗೆ ಅಡ್ಡಲಾಗಿ ವೇಗ ತಡೆಗಾಗಿ ಬ್ಯಾರಿಕೇಡ್ ಹಾಕಿದ್ದು ಅದನ್ನು ಎಳಕೊಂಡೇ ಸಾಗಿದ್ದಾನೆ. ಆನಂತರ, ಅರಾಟೆ ಸೇತುವೆಯ ತಡೆಗೋಡೆಗೂ ಡಿಕ್ಕಿಯಾಗಿ ಮುಂದೆ ಸಾಗಿದ್ದಾನೆ. ಕಂಟೈನರ್ ಅನ್ನು ನಿಲ್ಲಿಸಲು ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಹರ ಸಾಹಸ ಮಾಡಿದ್ದಾರೆ. ಕೊನೆಗೆ ಕಂಟೈನರ್ ಮುಂದಿನ ಗಾಜಿಗೆ ಕಲ್ಲೆಸೆದು ಸ್ಥಳೀಯರು ಚಾಲಕನಿಗೆ ಲಾರಿ ನಿಲ್ಲಿಸಲು ಆಗ್ರಹಿಸಿದ್ದಾರೆ. ನಂತರ ಹೆಮ್ಮಾಡಿಯ WFK ಬಳಿ ಕಂಟೈನರನ್ನು ತಡೆದು ಸಾರ್ವಜನಿಕರೇ ಸೇರಿ ಚಾಲಕನನ್ನು ಲಾರಿಯಿಂದ ಇಳಿಸಿದ್ದಾರೆ. 

ಚಾಲಕನನ್ನು ಬಳಿಕ ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಚಾಲಕ ಗಾಂಜಾ ಅಥವಾ ಮದ್ಯ ಸೇವಿಸಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಛತ್ತಿಸ್ ಗಢ ನೋಂದಣಿಯ ಕಂಟೈನರ್ ಆಗಿದ್ದು ಕುರುಚಲು ಹುಲ್ಲನ್ನು ಸಾಗಿಸುತ್ತಿದ್ದ. ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರ ಭೇಟಿ ನೀಡಿ, ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ‌

Video: 

Kundapura Truck Driver creates havoc consuming alcohol traffic police risk life to stop truck.