ಬ್ರೇಕಿಂಗ್ ನ್ಯೂಸ್
21-09-21 03:52 pm Mangaluru Correspondent ಕರಾವಳಿ
ಪುತ್ತೂರು, ಸೆ.21: ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕಳೆದ ವಾರ ಮುಕ್ತ ಮಾರುಕಟ್ಟೆಯಲ್ಲಿ ಅಡಿಕೆ ದರ 500ರ ಗಡಿ ದಾಟಿದ್ದರೆ, ಈ ವಾರದ ಮೊದಲ ದಿನವೇ ಕ್ಯಾಂಪ್ಕೋ ಮಾರುಕಟ್ಟೆಯಲ್ಲೂ ಅಡಿಕೆ ದರ ಕೇಜಿಗೆ ಐನೂರು ತಲುಪಿದೆ.
ಇದೇ ಮೊದಲ ಬಾರಿಗೆ ಅಡಿಕೆಯ ದರ ಐನೂರನ್ನು ದಾಟಿದ್ದು ಬೆಳೆಗಾರ ಸಂತಸಗೊಂಡಿದ್ದಾನೆ. ಹಿಂದೆಲ್ಲಾ ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ನಡುವೆ ದರದಲ್ಲಿ 50ರಿಂದ 100 ರೂಪಾಯಿ ವ್ಯತ್ಯಾಸ ಇರುತ್ತಿತ್ತು. ಆದರೆ, ಈ ಬಾರಿ ಆ ರೀತಿಯ ವ್ಯತ್ಯಾಸ ಇಲ್ಲದಂತೆ, ಅಡಿಕೆ ಧಾರಣೆ ಕಂಡುಬಂದಿದ್ದು, ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಕಳೆದ ವಾರಾಂತ್ಯದಲ್ಲಿ ಹೊರಗಿನ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 510 ರೂ. ಖರೀದಿ ಆಗಿತ್ತು. ಸುಳ್ಯದ ಬೆಳ್ಳಾರೆ, ಪುತ್ತೂರಿನ ಕೆಲವು ಕಡೆಗಳಲ್ಲಿ 510 ರೂಪಾಯಿ ದರಕ್ಕೆ ಅಡಿಕೆ ಖರೀದಿ ಆಗಿದ್ದು ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಅಚ್ಚರಿ ಸೃಷ್ಟಿಸಿತ್ತು. ಆದರೆ, ಇದೀಗ ಅಡಿಕೆ ಕೇಂದ್ರಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಧಿಕೃತವಾಗಿ ಹೊಸ ಅಡಿಕೆಯನ್ನು ಕೇಜಿಗೆ 500 ರೂ.ಗಳಿಗೆ ಖರೀದಿಸಿದ್ದು, ಹೊಸ ಇತಿಹಾಸದತ್ತ ಮುನ್ನುಗ್ಗಿದೆ.
ಇನ್ನೊಂದು ಕಡೆ ಹಳೆ ಅಡಿಕೆಯ ದರವೂ 515-520ರಲ್ಲಿ ವಿಕ್ರಯವಾಗುತ್ತಿದೆ. ಸಾಮಾನ್ಯವಾಗಿ ಡಬಲ್ ಚೋಲ್ ಅಡಿಕೆ ಕೂಡ ಇದೇ ಧಾರಣೆ ಹೊಂದಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಮೂರೂ ವರ್ಗದ ಧಾರಣೆಯೂ 500ರ ಗಡಿ ದಾಟಿದ್ದು ಇದೇ ಮೊದಲಾಗಿದ್ದು ಬೆಳೆಗಾರರ ಮೊಗದಲ್ಲಿ ನಗು ಮೂಡಿಸಿದೆ. ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕರಾವಳಿಯಲ್ಲಿ ಅಡಿಕೆಯ ದರ ಏರುತ್ತಿದೆ. ಬೆಳೆಗಾರರು ಕೂಡ ಅಡಿಕೆ ಸ್ಟಾಕ್ ಇದ್ದರೂ, ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿಲ್ಲ. ಇದರಿಂದಾಗಿ ಹೊಸ ಅಡಿಕೆಯ ದರವೂ ಹಳೆ ಅಡಿಕೆಯ ಸ್ಥಾನವನ್ನು ಪಡೆಯುತ್ತಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ಹೇಳಿದ್ದಾರೆ.
ಕಳೆದ ಮಾರ್ಚ್, ಎಪ್ರಿಲ್ ನಲ್ಲಿ ಕೊಯ್ಲು ಆಗಿದ್ದ ಅಡಿಕೆಯನ್ನು ಸದ್ಯಕ್ಕೆ ಹೊಸ ಅಡಿಕೆ ಎನ್ನಲಾಗುತ್ತಿದೆ. ಅದಕ್ಕೂ ಹಿಂದಿನ ವರ್ಷದ ಅಡಿಕೆಯನ್ನು ಹಳೆ ಅಡಿಕೆ ಮತ್ತು ಎರಡು ವರ್ಷ ಹಿಂದಿನದ್ದನ್ನು ಡಬಲ್ ಚೋಲ್ ಎಂದು ಕರೆಯುತ್ತಾರೆ. ಇವರೆಡಕ್ಕೂ ಸಾಮಾನ್ಯವಾಗಿ ಒಂದೇ ರೀತಿ ದರ ಇರುತ್ತದೆ. ಈಗ ಸೆಪ್ಟಂಬರ್ ಕಳೆದು ಅಕ್ಟೋಬರ್ ವೇಳೆಗೆ ಈ ಬಾರಿಯ ಕೊಯ್ಲು ಆರಂಭಗೊಳ್ಳಲಿದ್ದು, ಮತ್ತೆ ಹೊಸ ಅಡಿಕೆ ಮಾರುಕಟ್ಟೆಗೆ ಬರಲಿದೆ. ಅಷ್ಟರಲ್ಲಿ ಕಳೆದ ಬಾರಿಯ ಅಡಿಕೆ ಹಳೆಯದಕ್ಕೆ ಸೇರುತ್ತದೆ. ಕಳೆದ ವರ್ಷ ಇದೇ ಹೊತ್ತಲ್ಲಿ 380- 400ರ ಆಸುಪಾಸು ದರ ಬಂದಿದ್ದನ್ನು ಕಂಡು ಬೆಳೆಗಾರರು ಹುಬ್ಬೇರಿಸಿದ್ದರು. ಈ ಬಾರಿ 500 ರೂಪಾಯಿ ಆಗಿದ್ದು ಅಡಿಕೆ ಚರಿತ್ರೆಯಲ್ಲೇ ಐತಿಹಾಸಿಕ ಅನ್ನುವಂತಾಗಿದೆ. ಹಿಂದೆಲ್ಲಾ ಹೆಣ್ಣು ಕೊಡುವವರು ಅಡಿಕೆ ಕೃಷಿ ಇದೆಯಂದ್ರೆ ಮೂಗು ಮುರಿಯುತ್ತಿದ್ದರು. ಇನ್ನು ಎಷ್ಟು ಎಕ್ರೆ ಅಡಿಕೆ ತೋಟ ಇದೆ ಎನ್ನುವ ಕಾಲ ಬರಬಹುದು.
The price of areca nut has skyrocketed surprising the farmers and merchants in Dakshina Kannada. Old and new areca nut has touched Rs 500 per kilogram at Campco market in Mangalore.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm