ಬಜ್ಪೆ ಠಾಣೆಯಲ್ಲಿ ತ್ಯಾಜ್ಯ ಸುಡುವಾಗ ಸ್ಫೋಟ ; ತೀವ್ರ ಸುಟ್ಟ ಗಾಯಕ್ಕೊಳಗಾದ ಹೋಮ್ ಗಾರ್ಡ್

24-09-21 04:41 pm       Mangaluru Correspondent   ಕರಾವಳಿ

ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ ಒಬ್ಬರು ಸುಟ್ಟ ಗಾಯಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು, ಸೆ.24: ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ ಒಬ್ಬರು ಸುಟ್ಟ ಗಾಯಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಠಾಣೆಯೊಳಗೆ ಕ್ಲೀನ್ ಮಾಡಿ ತ್ಯಾಜ್ಯವನ್ನು ರಾಶಿ ಹಾಕಿ ಬೆಂಕಿ ಕೊಟ್ಟು ಉರಿಸುತ್ತಿದ್ದಾಗ ಏನೋ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದ್ದು, ಇದರಿಂದ ಹೋಮ್ ಗಾರ್ಡ್ ಮೈಯಲ್ಲಿ ಸುಟ್ಟ ಗಾಯಗಳಾಗಿವೆ. ಮುಖ, ತಲೆಯ ಹಿಂಭಾಗ, ಬೆನ್ನು, ಭುಜ, ಕೈಕಾಲು ಹೀಗೆ ಅಲ್ಲಲ್ಲಿ ಸುಟ್ಟ ಗಾಯಗಳಾಗಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ದಾಖಲು ಮಾಡಲಾಗಿದೆ.

ಸುಟ್ಟ ಗಾಯಗಳಾಗಿರುವ ವ್ಯಕ್ತಿಯನ್ನು ಕುಪ್ಪೆಪದವು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಕಳೆದ ಐದಾರು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ದುಡಿಯುತ್ತಿರುವ ದಿನೇಶ್, ಮೂರು ದಿನಗಳ ಹಿಂದೆ ಠಾಣೆಯಲ್ಲಿ ಕಸವನ್ನು ಗುಡಿಸಿ, ಅದರೊಟ್ಟಿಗೆ ಹಳೆಯ ಫೈಲ್, ಇನ್ನಿತರ ತ್ಯಾಜ್ಯಗಳನ್ನು ರಾಶಿ ಹಾಕಿ ಬೆಂಕಿ ಕೊಟ್ಟಿದ್ದರು. ಈ ವೇಳೆ, ಏನೋ ಸ್ಫೋಟ ಆಗಿದ್ದು, ದೇಹ ಪೂರ್ತಿ ಸುಟ್ಟಿರುವ ಗಾಯಗಳಾಗಿವೆ. ಠಾಣೆಯ ಕಸದಲ್ಲಿ ಬ್ಲಾಸ್ಟ್ ಆಗುವಂಥ ತ್ಯಾಜ್ಯ ಏನಿತ್ತು ಅನ್ನೋದು ತಿಳಿದುಬಂದಿಲ್ಲ.

ಮದ್ಯದ ಬಾಟಲಿ ಅಥವಾ ಸ್ಯಾನಿಟೈಸರ್ ಬಾಟಲಿಗಳು ಬೆಂಕಿಯಲ್ಲಿ ಸುಡುವಾಗ ಸ್ಫೋಟ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪೊಲೀಸ್ ಯೂನಿಫಾರ್ಮ್ ಹಾಕಿದ್ದರೂ, ಇಡೀ ದೇಹಕ್ಕೆ ಅಲ್ಲಲ್ಲಿ ಸುಟ್ಟ ಗಾಯಗಳಾಗಿದ್ದು ಹೇಗೆ ಎನ್ನುವ ಬಗ್ಗೆ ಆತನ ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ. 

Mangalore Bajpe Station Home guard seriously injured while disposing garbage of premises admitted at the hospital. Dinesh who was working at Bajpe Station was injured after a blast while disposing the garbage.