ಬ್ರೇಕಿಂಗ್ ನ್ಯೂಸ್
25-09-21 05:40 pm Mangaluru Correspondent ಕರಾವಳಿ
ಮಂಗಳೂರು, ಸೆ.25: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ಪೆಟ್ರೋಲಿಯಂ ಸ್ಥಾವರದಿಂದ ತ್ಯಾಜ್ಯವನ್ನು ಸಂಸ್ಕರಿಸದೆ, ಚರಂಡಿ ನೀರಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಜೋಕಟ್ಟೆ ಭಾಗದ ಸ್ಥಳೀಯರು ಆರೋಪ ಮಾಡಿದ್ದು, ಚರಂಡಿಯಲ್ಲಿ ಪೆಟ್ರೋಲಿಯಂ ತ್ಯಾಜ್ಯ ಹರಿಯುವ ವಿಡಿಯೋ ಮಾಡಿ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.
ಜೋಕಟ್ಟೆ ಭಾಗದಲ್ಲಿ ರಸ್ತೆ ಬದಿಯ ಚರಂಡಿ, ತೋಡಿನಲ್ಲಿ ಕೊಳಚೆ ನೀರಿನ ಜೊತೆ ಪೆಟ್ರೋಲಿಯಂ ತ್ಯಾಜ್ಯ ಹರಿಯುತ್ತಿದೆ. ಜೋಕಟ್ಟೆ - ತೋಕೂರು ಹಳ್ಳದ ಮೂಲಕ ತೋಡಿನಲ್ಲಿ ಪೆಟ್ರೋಲಿಯಂ ತ್ಯಾಜ್ಯ ಹರಿಯುತ್ತಿದ್ದು, ಅದು ನೇರವಾಗಿ ಬಂದು ಫಲ್ಗುಣಿ ನದಿ ಸೇರುತ್ತಿದೆ. ಈ ರೀತಿ ಪೆಟ್ರೋಲಿಯಂ ತ್ಯಾಜ್ಯವನ್ನು ಚರಂಡಿಗೆ ಬಿಡುವುದರಿಂದ ಸ್ಥಳೀಯ ಬಾವಿಗಳಿಗೂ ಪೆಟ್ರೋಲಿಯಂ ಅಂಶ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.





ಈ ಬಗ್ಗೆ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅವರಲ್ಲಿ ಕೇಳಿದರೆ, ಪ್ರತಿ ಬಾರಿ ಮಳೆಗಾಲ, ಬೇಸಗೆ ಸಂದರ್ಭದಲ್ಲಿ ಕೆಲವೊಮ್ಮೆ ಈ ರೀತಿ ಪೆಟ್ರೋಲಿಯಂ ತ್ಯಾಜ್ಯವನ್ನು ಚರಂಡಿಗೆ ಬಿಡಲಾಗುತ್ತಿತ್ತು. ನಾಲ್ಕು ವರ್ಷಗಳಿಂದ ಈ ರೀತಿ ವಿಷಕಾರಿ ತ್ಯಾಜ್ಯವನ್ನು ಆಗಾಗ ಬಿಡುತ್ತಿದ್ದಾರೆ. ಈ ಬಗ್ಗೆ ಪರಿಸರ ನಿಯಂತ್ರಣ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೂ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ಥಳೀಯ ಜನರು ಇವರ ಕರ್ಮವನ್ನು ಅನುಭವಿಸಬೇಕಾಗಿದೆ. ಜನಪ್ರತಿನಿಧಿಗಳು ಅಸಡ್ಡೆ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜೋಕಟ್ಟೆ ಬಳಿಯ ಮೂರನೇ ಹಂತದ ಎಂಆರ್ ಪಿಎಲ್ ಘಟಕದಿಂದ ಪೆಟ್ರೋಲಿಯಂ ತ್ಯಾಜ್ಯವನ್ನು ಹೊರ ಬಿಡಲಾಗಿದೆ. ಎಂಆರ್ ಪಿಎಲ್ ಆವರಣದ ಒಳಗಿನಿಂದಲೇ ಈ ರೀತಿ ಪೆಟ್ರೋಲ್, ಡೀಸೆಲ್ ರೀತಿಯ ತ್ಯಾಜ್ಯ ಚರಂಡಿ ಸೇರುತ್ತಿದೆ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಇದೇ ಭಾಗದಲ್ಲಿ ಎಂಆರ್ ಪಿಎಲ್ ಘಟಕದಿಂದ ಭಾರೀ ಪ್ರಮಾಣದಲ್ಲಿ ಬೆಂಕಿ ಹೊರಸೂಸುತ್ತಿತ್ತು. ಇದರಿಂದ ಸ್ಥಳೀಯರು ತೀವ್ರ ಆತಂಕಕ್ಕೂ ಒಳಗಾಗಿದ್ದರು.
Video:
Mangalore Petroleum waste from MRPL enters Palguni river DYFI demands action. Four days huge fire had broke out and residents state that this incident took place becausese of chemical waste getting out.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm