ಬ್ರೇಕಿಂಗ್ ನ್ಯೂಸ್
27-09-21 11:11 am Mangaluru Correspondent ಕರಾವಳಿ
ಮಂಗಳೂರು, ಸೆ.27: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆ.27ರಿಂದ ಅ.2ರ ವರೆಗೆ ವಿಶೇಷ ಟ್ರಾಫಿಕ್ ಡ್ರೈವ್ ಮಾಡಲು ಪೊಲೀಸ್ ಕಮಿಷನರ್ ಶಶಿಕುಮಾರ್ ನಿರ್ಧರಿಸಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಪ್ರಯಾಣ, ಇನ್ ಶೂರೆನ್ಸ್, ಕಾರುಗಳಲ್ಲಿ ಕಪ್ಪು ಬಣ್ಣದ ಟಿಂಟ್ ಬಳಕೆ, ಹಳೆ ಪ್ರಕರಣಗಳು ಇತ್ಯಾದಿ ವಿಚಾರದಲ್ಲಿ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ ಪೊಲೀಸರು ಆಯಾ ಭಾಗದಲ್ಲಿ ವಿಶೇಷ ಕರ್ತವ್ಯದಲ್ಲಿ ತೊಡಗಲಿದ್ದಾರೆ.
ಅದರಂತೆ, ಸೆ.27ರಂದು ಕಾರು ಸೇರಿದಂತೆ ಇತರ ವಾಹನಗಳಲ್ಲಿ ಟಿಂಟ್ ಅಳವಡಿಕೆ ಅಥವಾ ಗ್ಲಾಸ್ ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಇತ್ಯಾದಿ ಪ್ರಕರಣಗಳ ಪತ್ತೆ ಕಾರ್ಯ ನಡೆಯಲಿದೆ. ಕಾರುಗಳನ್ನು ರಸ್ತೆ ಬದಿ ನಿಲ್ಲಿಸಿ, ಪೊಲೀಸರು ಈ ಬಗ್ಗೆ 500 ರೂ.ಗಿಂತ ಮೇಲ್ಪಟ್ಟು ದಂಡ ವಿಧಿಸಲಿದ್ದಾರೆ.
ಸೆ.28ರಂದು ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ತುಂಡಾಗಿರುವುದು, ತಪ್ಪಾಗಿ ಬರೆದಿರುವುದು ಅಥವಾ ಕಲರ್ ಕೋಡ್ ಅಳವಡಿಸಿದ್ದಲ್ಲಿ ಅದನ್ನು ಪತ್ತೆಹಚ್ಚಿ ಪೊಲೀಸರು ದಂಡ ವಿಧಿಸಲಿದ್ದಾರೆ. ಇದಕ್ಕೆ ರೂ. 500 ದಂಡ ಇರಲಿದೆ. ಸೆ.29ರಂದು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಪ್ರಯಾಣಕ್ಕೆ ಪೊಲೀಸರು ದಂಡ ವಿಧಿಸಲಿದ್ದಾರೆ. ಹಿಂಬದಿ ಸವಾರನಿಗೆ ಹೆಲ್ಮೆಟ್ ಇಲ್ಲದಿರುವುದು ಅಥವಾ ತ್ರಿವಳಿ ರೈಡಿಂಗ್ ಪತ್ತೆಯಾದಲ್ಲಿ 500 ರೂ. ದಂಡ ಬೀಳಲಿದೆ.
ಸೆ.30ರಂದು ವಾಹನದಲ್ಲಿ ಇನ್ಶೂರೆನ್ಸ್ ಇದೆಯಾ ಎನ್ನುವ ಬಗ್ಗೆ ಪೊಲೀಸರ ಟ್ರಾಫಿಕ್ ಡ್ರೈವ್ ನಡೆಯಲಿದೆ. ದ್ವಿಚಕ್ರ ವಾಹನಗಳು, ಆಟೋರಿಕ್ಷಾ, ಕಾರು ಸೇರಿದಂತೆ ಇನ್ನಿತರ ಎಲ್ಲ ರೀತಿಯ ವಾಹನಗಳಲ್ಲಿ ಇನ್ಶೂರೆನ್ಸ್ ದಾಖಲಾತಿಗಳನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ. ಇನ್ಶೂರೆನ್ಸ್ ಲ್ಯಾಪ್ಸ್ ಆಗಿದ್ದಲ್ಲಿ ಅಥವಾ ದಾಖಲಾತಿ ಇಲ್ಲದೇ ಇದ್ದಲ್ಲಿ 2-3 ವೀಲರ್ ವಾಹನಗಳಿಗೆ 1000, ನಾಲ್ಕು ಚಕ್ರದ ವಾಹನಗಳಿಗೆ ಎರಡು ಸಾವಿರ, ಲಾರಿ, ಟೆಂಪೋ ಇನ್ನಿತರ ಘನ ವಾಹನಗಳಿಗೆ ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಲಿದ್ದಾರೆ
ಅಕ್ಟೋಬರ್ 1ರಂದು ವಾಹನಗಳ ಮೇಲಿರುವ ಹಳೆ ಪ್ರಕರಣಗಳ ಪತ್ತೆಗೆ ಪೊಲೀಸರು ಇಳಿಯಲಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ, ಇನ್ಶೂರನ್ಸ್, ಹೆಲ್ಮೆಟ್ ರಹಿತ ಪ್ರಯಾಣಗಳಿಗೆ ಟ್ರಾಫಿಕ್ ಪೊಲೀಸರು ಆಟೋಮೆಟಿಕ್ ಪ್ರಕ್ರಿಯೆಯಲ್ಲಿ ದಂಡ ವಿಧಿಸಿ, ಬಾಕಿ ಉಳಿದಿರುವ ಪ್ರಕರಣಗಳನ್ನು ಕೆದಕಿ ಸ್ಥಳದಲ್ಲೇ ಹಣ ಪೀಕಿಸುವ ಕೆಲಸವನ್ನು ಮಾಡಲಿದ್ದಾರೆ. ಅ.2ರ ಗಾಂಧಿ ಜಯಂತಿಯಂದು ಎಮಿಶನ್ ಟೆಸ್ಟ್ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಲಿದ್ದು, ಕೋರ್ಟಿಗೆ ದಂಡ ಕಟ್ಟಲು ಶಿಫಾರಸು ಮಾಡಲಿದ್ದಾರೆ. ಒಟ್ಟಿನಲ್ಲಿ ಒಂದು ವಾರ ಪೂರ್ತಿ ಟ್ರಾಫಿಕ್ ಡ್ರೈವ್ ನಡೆಯಲಿದ್ದು, ಪೊಲೀಸರು ಸಾರ್ವಜನಿಕರಿಂದ ಟ್ರಾಫಿಕ್ ನಿಯಮಗಳ ನೆಪದಲ್ಲಿ ದಂಡ ಪೀಕಿಸುವುದಂತೂ ಖಚಿತ. ಸಿಟಿ ಪ್ರಯಾಣಿಕರು ತಮ್ಮ ವಾಹನಗಳಲ್ಲಿ ಅಡ್ಡಾಡುವಾಗ ಜಾಗ್ರತೆಯಲ್ಲಿ ಇರಬೇಕು.
— N. Shashi Kumar CP Mangaluru City (@compolmlr) September 26, 2021
September 27th to October 2nd Mangalore Police launch traffic drive huge fines for those violating traffic rules states Mangalore Police Commissioner Shashi Kumar.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
03-10-25 04:50 pm
HK News Desk
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
03-10-25 05:59 pm
Mangalore Correspondent
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm