ಬ್ರೇಕಿಂಗ್ ನ್ಯೂಸ್
05-11-26 10:45 pm HK News Desk ಕ್ರೈಂ
ಮಂಗಳೂರು, ನ.5: ಜಾಗದ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಗಲಾಟೆ ನಡೆದು ಬಿಲ್ಡರ್ ವ್ಯಕ್ತಿಯೊಬ್ಬರು ತನ್ನ ಸ್ವ ರಕ್ಷಣೆಗಾಗಿ ಇರಿಸಿಕೊಂಡಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿ ಇನ್ನೊಂದು ತಂಡದ ವ್ಯಕ್ತಿಯ ಕೊಲೆಗೆ ಯತ್ನಿಸಿದ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಎರಡೂ ತಂಡಗಳ ವಿರುದ್ಧ ದೂರು, ಪ್ರತಿ ದೂರು ದಾಖಲಾಗಿದ್ದು ಕಾವೂರಿನಲ್ಲಿ ಬಿಲ್ಡರ್ ಆಗಿರುವ ವೀರೇಂದ್ರ ಶೆಟ್ಟಿ ಎಂಬವರು ತನ್ನ ರಿವಾಲ್ವರ್ ಬಳಸಿ ಗುಂಡು ಹಾರಿಸಿದ್ದಾಗಿ ದೂರು ದಾಖಲಾಗಿದೆ. ಮಂಗಳೂರಿನ ಅಶೋಕನಗರದ ಫಲ್ಗುಣಿ 3ನೇ ಅಡ್ಡರಸ್ತೆಯಲ್ಲಿ ವೀರೇಂದ್ರ ಶೆಟ್ಟಿ ಮತ್ತು ಅವರ ಪಾಲುದಾರ 36 ಸೆಂಟ್ಸ್ ಜಾಗವನ್ನು ಎರಡು ವರ್ಷಗಳ ಹಿಂದೆ ಖರೀದಿಸಿದ್ದು, ಸದರಿ ಜಾಗದಲ್ಲಿ ಲೇಔಟ್ ಮಾಡಿ ಸೈಟ್‌ಗಳನ್ನು ಮಾರಾಟ ಮಾಡಿರುತ್ತಾರೆ.
ನ.4ರಂದು ಮಧ್ಯಾಹ್ನ 12 ಗಂಟೆಗೆ ವೀರೇಂದ್ರ ಶೆಟ್ಟಿ ಹಾಗೂ ಲೇಔಟ್ ಸೈಟ್ ಖರೀದಿಸಿದ ಪೃಥ್ವಿ ಶೇಟ್ ಅವರು ಮಾರಾಟವಾಗದೆ ಉಳಿದಿದ್ದ ಜಾಗಕ್ಕೆ ಕಾಂಪೌಂಡ್ ಹಾಕಲು ಜೆಸಿಬಿ ಮತ್ತು ಕಾರ್ಮಿಕರೊಂದಿಗೆ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದಾಗ, ಸ್ಥಳೀಯ ನಿವಾಸಿ ಪ್ರೆಸ್ಟನ್ ಎಂಬಾತ ತನ್ನ ಹತ್ತು ಜನ ಸಹಚರರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು ತಡೆಯಲು ಬಂದ ಪೃಥ್ವಿ ಶೇಟ್ ಅವರಿಗೂ ಆರೋಪಿ ಹಲ್ಲೆ ಮಾಡಿರುತ್ತಾನೆ. ಸದರಿ ಘಟನೆಯನ್ನು ವೀರೇಂದ್ರ ಶೆಟ್ಟಿ ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತಿದ್ದುದನ್ನು ಆಕ್ಷೇಪಿಸಿ ಮೊಬೈಲ್ ಫೋನ್ ಕಸಿದುಕೊಂಡಿದ್ದು, ಪ್ರೆಸ್ಟನ್ ಹಾಗೂ ಆತನ ಸಹಚರರು ಒಟ್ಟು ಸೇರಿ ವೀರೇಂದ್ರ ಶೆಟ್ಟಿಗೆ ಕೈ ಮತ್ತು ಕಾಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ, ವೀರೇಂದ್ರ ಶೆಟ್ಟಿ ತನ್ನ ಆತ್ಮ ರಕ್ಷಣೆಗಾಗಿ ಇರಿಸಿದ್ದ ಪರವಾನಗಿ ಹೊಂದಿದ ಪಿಸ್ತೂಲ್‌ನಿಂದ ನೆಲಕ್ಕೆ ಒಂದು ಸುತ್ತು ಗುಂಡು ಹಾರಿಸಿರುತ್ತಾರೆ. ಗುಂಡಿನ ಶಬ್ದ ಕೇಳಿ ಆರೋಪಿಗಳು ಹಲ್ಲೆ ನಿಲ್ಲಿಸಿ ದೂರ ಸರಿದಿದ್ದು, ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಿಸಿರುತ್ತಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿ ದೂರಿನಲ್ಲಿ ಪ್ರೆಸ್ಟನ್ ಎಂಬವರು, ಮಂಗಳೂರಿನಲ್ಲಿ ಈವೆಂಟ್ ಆರ್ಗನೈಸರ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಘಟನೆ ನಡೆದಿದೆ ಎಂದು ದೂರು ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುಮನಾ ರಾವ್ ಎಂಬವರು ಈ ಜಾಗ ತಮ್ಮದೆಂದು ಹಕ್ಕು ಸಾಧಿಸಿ, ಫೋನ್ ಮತ್ತು ನೇರ ಭೇಟಿಯಾಗಿ ದಾಖಲೆಗಳನ್ನು ಕೇಳುತ್ತಿದ್ದರು. ನಂತರ ಎರಡೂ ಕಡೆಯವರು ಜಂಟಿಯಾಗಿ ನಡೆಸಿದ ಸರ್ವೆಯಲ್ಲಿ, ಎರಡೂ ಕಡೆಯ ಸರ್ವೇಯರ್‌ಗಳು ಸದರಿ ಜಾಗವು ಪ್ರೆಸ್ಟನ್ ಗೆ ಸೇರಿದ್ದು ಎಂದು ಸ್ಪಷ್ಟಪಡಿಸಲಾಗಿತ್ತು. ಸದ್ರಿ ಜಾಗದಲ್ಲಿ ನ.04 ರಂದು ಜೆಸಿಬಿ ಕೆಲಸ ಮಾಡುವ ಶಬ್ದ ಕೇಳಿ, ಸ್ನೇಹಿತರೊಂದಿಗೆ ಸ್ಥಳಕ್ಕೆ ಹೋಗಿದ್ದರು. ಅಲ್ಲಿ ರೇಖಾ, ಜೆಸಿಬಿ ಮಾಲೀಕ ಪರಶುರಾಮ, ಸೈಟ್ ಖರೀದಿಸಿದ ಪೃಥ್ವಿ ಹಾಗೂ ಇನ್ನಿಬ್ಬರು ಯುವಕರಿದ್ದು, ಪ್ರೆಸ್ಟನ್ ಹಾಕಿದ್ದ ಸರ್ವೆ ಕಲ್ಲುಗಳನ್ನು ಕಿತ್ತು ಬಿಸಾಕಿದ್ದರು. ಇದನ್ನು ಪ್ರಶ್ನಿಸಿದಾಗ ಸುಮನಾ ರಾವ್ ಜೊತೆಯಲ್ಲಿದ್ದವರು ಹೊಡೆಯಲು ಬಂದಿದ್ದು, ದಾಖಲೆ ತೋರಿಸುವಂತೆ ಬೆದರಿಸಿದ್ದಾರೆ. ಒಬ್ಬ ಯುವಕ ಮಾತ್ರ ಪ್ರೆಸ್ಟನ್ ಮೇಲೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದ್ದು, ಒಂದು ಗುಂಡು ನೆಲಕ್ಕೆ ಹಾಗೂ ಮತ್ತೊಂದು ಗಾಳಿಗೆ ಹೋಗಿರುತ್ತದೆ.
ಸದರಿ ಜಾಗಕ್ಕೆ ನುಗ್ಗಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ವಿರೇಂದ್ರ ಶೆಟ್ಟಿ ಮತ್ತು ಸರ್ವೆ ಕಲ್ಲುಗಳನ್ನು ಕಿತ್ತು ಹಾಕಿ, ಬೆದರಿಕೆ ಹಾಕಿದ ಸುಮನಾ ರಾವ್, ರೇಖಾ, ಜೆಸಿಬಿ ಮಾಲೀಕ ಪರಶುರಾಮ, ಸೈಟ್ ಖರೀದಿಸಿದ ಪೃಥ್ವಿ ಎಂಬುವರ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
05-11-26 09:42 pm
HK News Desk
ಬೆಂಗಳೂರಿನಿಂದ LSD ಡ್ರಗ್ಸ್ ಸಪ್ಲೈ: ಮಂಗಳೂರಿನ ವಿದ...
05-11-26 03:23 pm
ಕುಮಾರಧಾರಾ ನದಿಗೆ ಹಾರಿದ ಮಹಿಳೆ ಮೊಸಳೆ ನೋಡಿ ದುರಂತದ...
05-11-26 02:07 pm
‘ಎಸ್ಐಆರ್ ಬಗ್ಗೆ ಸುಳ್ಳು ಹೇಳಿ ದೇಶದಲ್ಲಿ ಅರಾಜಕತೆ ಸ...
04-11-26 10:30 pm
ಸಿಡಿಪಿ ಹೆಸರಲ್ಲಿ ಮುಡಾದಿಂದ ಕರಾಳ ನಿಯಮ, ಸಾಮಾನ್ಯ ಮ...
04-11-26 10:12 pm
05-11-26 10:45 pm
HK News Desk
ಬಾಳೆಕುದ್ರು ಮಠದ ಸಾವಿರಾರು ವರ್ಷ ಹಿನ್ನೆಲೆಯ ವಿಗ್ರಹ...
05-11-26 07:51 pm
ಸುರತ್ಕಲ್ ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ...
04-11-26 10:00 am
ಸ್ಟಿಂಗ್ ಆಪರೇಷನ್ ಬಗ್ಗೆ ರಾಹುಲ್ ಗಾಂಧಿಗೆ ದೂರು ಹೇಳ...
03-11-26 10:44 am
15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಖತರ್ನಾಕ್...
02-11-26 09:48 pm