ಡಯಟ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯರಿಗೆ ಕತ್ತಿ ಬೀಸಿದ್ದ ಮಾನಸಿಕ ಅಸ್ವಸ್ಥ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನ

08-11-21 06:51 pm       Mangaluru Correspondent   ಕರಾವಳಿ

ಒಂದೂವರೆ ತಿಂಗಳ ಹಿಂದೆ ಕೊಡಿಯಾಲಬೈಲಿನ ಡಯಟ್ ಶಿಕ್ಷಣ ಸಂಸ್ಥೆಗೆ ನುಗ್ಗಿ ಅಲ್ಲಿದ್ದ ಸಿಬಂದಿ ಮೇಲೆ ಕತ್ತಿಯಿಂದ ಕಡಿದು ಹಾಕಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಇಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಂಗಳೂರು, ನ.8: ಒಂದೂವರೆ ತಿಂಗಳ ಹಿಂದೆ ಕೊಡಿಯಾಲಬೈಲಿನ ಡಯಟ್ ಶಿಕ್ಷಣ ಸಂಸ್ಥೆಗೆ ನುಗ್ಗಿ ಅಲ್ಲಿದ್ದ ಸಿಬಂದಿ ಮೇಲೆ ಕತ್ತಿಯಿಂದ ಕಡಿದು ಜೈಲು ಪಾಲಾಗಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಇಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕುಂದಾಪುರ ಮೂಲದ ನವೀನ್ ಕುಮಾರ್ (28) ಎಂಬಾತ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಕತ್ತಿಯಿಂದ ಕಡಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಜೈಲಿನಲ್ಲಿದ್ದ ಈತನಿಗೆ ದೈಹಿಕ ಅನಾರೋಗ್ಯ ಎದುರಾಗಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಕೈದಿಯನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಡ್ ನಲ್ಲಿ ಮಲಗಿದ್ದ ವ್ಯಕ್ತಿ ಇಂದು ಸಂಜೆ ಕಿಟಕಿಗೆ ಬೆಡ್ ಶೀಟನ್ನು ಕಟ್ಟಿ ಕುತ್ತಿಗೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಆದರೆ ಅಷ್ಟರಲ್ಲಿ ಸಿಬಂದಿ ಗಮನಿಸಿದ್ದು, ಆತನನ್ನು ಬಚಾವ್ ಮಾಡಿದ್ದಾರೆ. ನವೀನ್ ಕುಮಾರ್ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಸೆಪ್ಟಂಬರ್ 20ರಂದು ಕೊಡಿಯಾಲ್ ಬೈಲಿನ ಜಿಲ್ಲಾ ಕಾರಾಗೃಹದ ಬಳಿಯ ಡಯಟ್ ಶಿಕ್ಷಣ ಸಂಸ್ಥೆಯಲ್ಲಿ ದುರಂತವೇ ನಡೆದುಹೋಗಿತ್ತು. ಮಧ್ಯಾಹ್ನ ವೇಳೆ ಬಂದಿದ್ದ ಆಗಂತುಕನೊಬ್ಬ ಮೂವರು ಸಿಬಂದಿಯ ಮೇಲೆ ಕತ್ತಿಯಿಂದ ಏಕಾಏಕಿ ದಾಳಿ ನಡೆಸಿದ್ದ.

ಆನಂತರ, ಜೈಲಿನ ಪೊಲೀಸ್ ಸಿಬಂದಿ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತಿಸಿದ್ದ ಯುವಕ ತನ್ನ ಪರಿಚಯವನ್ನೂ ಹೇಳಿಕೊಂಡಿರಲಿಲ್ಲ. ಕೊನೆಗೆ, ಕುಂದಾಪುರದ ನವೀನ್ ಕುಮಾರ್ ಎಂದು ತಿಳಿದುಬಂದಿದ್ದಲ್ಲದೆ, ಕುಂದಾಪುರದ ಕೋರ್ಟಿನಲ್ಲಿ ಅಟೆಂಡರ್ ಆಗಿ ಕೆಲಸದಲ್ಲಿದ್ದಾನೆಂದು ಗೊತ್ತಾಗಿತ್ತು. ಆತನಿಗೆ ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆ ಇದ್ದ ಬಗ್ಗೆ ಮತ್ತು ಉಡುಪಿಯ ಆಸ್ಪತ್ರೆ ಒಂದರಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದುದೂ ತಿಳಿದುಬಂದಿತ್ತು.

ಡಯಟ್ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕಿಯರು ಮತ್ತು ಸಿಬಂದಿ ಬಗ್ಗೆ ಈ ಹಿಂದೆ ಅಲ್ಲಿ ಕಲಿಯುತ್ತಿದ್ದಾಗ ಏನೋ ವಿಚಾರದಲ್ಲಿ ದ್ವೇಷ ಇಟ್ಟುಕೊಂಡಿದ್ದು, ಅದನ್ನೇ ಮನಸ್ಸಿನಲ್ಲಿ ಹಚ್ಚಿಕೊಂಡು ಕೊರಗುತ್ತಿದ್ದ. ತನ್ನನ್ನು ಕ್ಲಾಸ್ ನಲ್ಲಿ ಹೀಗಳೆಯುತ್ತಿದ್ದರು ಎಂಬ ದ್ವೇಷದಲ್ಲಿ ಆ ಶಿಕ್ಷಕಿಯನ್ನು ಕೊಲ್ಲಬೇಕೆಂದು ಕತ್ತಿ ಹಿಡಿದುಕೊಂಡೇ ಅಂದು ಬಂದಿದ್ದ. ಆದರೆ, ಅಂದು ಆ ಶಿಕ್ಷಕಿ ಇಲ್ಲದೇ ಇದ್ದುದರಿಂದ ಬಚಾವಾಗಿದ್ದರು. ಇತರೇ ಮೂವರು ಮಹಿಳಾ ಸಿಬಂದಿ ಮೇಲೆ ಕತ್ತಿ ಬೀಸಿದ್ದು, ಒಬ್ಬರಿಗೆ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.

ಡಯಟ್ ದಾಂಧಲೆ ; ಬಿಎಡ್ ಕಲೀತಿದ್ದಾಗ ಶಿಕ್ಷಕಿ ಕೀಟಲೆ ಮಾಡುತ್ತಿದ್ದರಂತೆ ! ಮಹಿಳಾ ಸಿಬಂದಿ ಮೇಲೆ ಕತ್ತಿ ಬೀಸಿದ್ದ ಆತನಿಗಿತ್ತು ಸ್ಕಿಜೋಫ್ರೀನಿಯಾ !

Mangalore DIET institute attack on staffs accused attempts to suicide in Wenlock hospital and is said to be out of Danger.  A 35-year-old man who allegedly attacked three women employees of District Institute of Education and Training (DIET), off Jail Road in Mangaluru on September 20, had been taken into custody. Police Commissioner N. Shashi Kumar told reporters that the assailant went to DIET, which is adjoining the Mangaluru district prison, around 1 p.m. He asked for a teacher in DIET saying he had to deliver a gift. When staff members of the institute questioned him, the man allegedly attacked them with a machete, injuring Reena Rai, 45, Nirmala, 43, and Gunavati, 58