ಇಬ್ಬರ ಜಗಳದಲ್ಲಿ ಕೂಸು ಪ್ರಾಣವನ್ನೇ ಬಿಡ್ತು! ಅದಲು ಬದಲು ಪ್ರಕರಣದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಗು ಸಾವು

16-11-21 01:57 pm       Mangaluru Correspondent   ಕರಾವಳಿ

ಲೇಡಿಗೋಷನ್ ಆಸ್ಪತ್ರೆಯ ಸಿಬಂದಿಯ ನಿರ್ಲಕ್ಷ್ಯದಿಂದ ಮಗು ಅದಲು ಬದಲಾಗಿದೆ ಎಂಬ ಆರೋಪಕ್ಕೀಡಾಗಿದ್ದ ಮಗು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಮಂಗಳೂರು, ನ.16: ಲೇಡಿಗೋಷನ್ ಆಸ್ಪತ್ರೆಯ ಸಿಬಂದಿಯ ನಿರ್ಲಕ್ಷ್ಯದಿಂದ ಮಗು ಅದಲು ಬದಲಾಗಿದೆ ಎಂಬ ಆರೋಪಕ್ಕೀಡಾಗಿದ್ದ ಮಗು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಕಳೆದ ಅಕ್ಟೋಬರ್ 15ರಂದು ಮಗು ಅದಲು ಬದಲಾಗಿರುವ ಬಗ್ಗೆ ಕುಂದಾಪುರದ ಕುಟುಂಬವೊಂದು ಬಂದರು ಠಾಣೆಯಲ್ಲಿ ದೂರು ದಾಖಲಿಸಿತ್ತು. ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವಿಗೆ ಅನಾರೋಗ್ಯ ಇತ್ತೆಂದು 17 ದಿನ ಆಸ್ಪತ್ರೆಯಲ್ಲಿ ದಾಖಲಾಗಿ, ಹುಷಾರಾಗಲಿಲ್ಲ ಎಂದು ಡಿಸ್ಚಾರ್ಜ್ ಮಾಡಿ ಬ್ರಹ್ಮಾವರಕ್ಕೆ ಒಯ್ದಿದ್ದರು. ಅಲ್ಲಿ ನೋಡಿದರೆ, ಹೆಣ್ಣು ಎಂದು ಹೇಳಿದ್ದ ಮಗು ಗಂಡು ಆಗಿತ್ತು. ಅಲ್ಲದೆ, ಮಗುವಿನ ಮಲದ್ವಾರ ಇಲ್ಲದೇ ಇದ್ದು ಪ್ರಬಲ ಸಮಸ್ಯೆಯಿಂದ ಬಳಲುತ್ತಿತ್ತು.

ತಮಗೆ ಹೆಣ್ಣು ಮಗುವೆಂದು ತಿಳಿಸಿದ್ದಲ್ಲದೆ, ಗಂಭೀರ ಸಮಸ್ಯೆ ಇದ್ದ ಬಗ್ಗೆ ಆಸ್ಪತ್ರೆ ಸಿಬಂದಿ ತಿಳಿಸಿರಲಿಲ್ಲ ಎಂಬ ಆರೋಪ ಮಗುವಿನ ಪೋಷಕರದ್ದಾಗಿತ್ತು. ಗಂಡು ಮಗುವನ್ನು ನೀಡಿದ್ದು, ಇದರ ಹಿಂದೆ ಏನೋ ಮಸಲತ್ತು ನಡೆದಿದೆ ಎಂದು ಮಗುವಿನ ತಂದೆ ಬಂದರು ಠಾಣೆಗೆ ದೂರು ನೀಡಿದ್ದರು. ಆನಂತರ, ಮಗುವನ್ನು ಮರಳಿ ಲೇಡಿಗೋಷನ್ ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿತ್ತು. ಹಿಂದಿನಂತೇ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಈ ನಡುವೆ, ಕುಟುಂಬಸ್ಥರು ಮಗು ಮತ್ತು ಪೋಷಕರ ಡಿಎನ್ಎ ಟೆಸ್ಟ್ ಮಾಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್ ಆದೇಶದಂತೆ ಮಗುವಿಗೆ ಒಂದು ತಿಂಗಳು ಆಗುತ್ತಿದ್ದಂತೆ ಡಿಎನ್ಎ ಟೆಸ್ಟ್ ಕೂಡ ಮಾಡಲಾಗಿತ್ತು. ಅದರ ವರದಿ ಹೈದರಾಬಾದ್ ಪ್ರಯೋಗಾಲಯಕ್ಕೆ ಹೋಗಿದ್ದು, ವರದಿ ಇನ್ನೂ ಬಂದಿಲ್ಲ. ಈ ನಡುವೆ, ನ.15ರಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಹೆತ್ತವರ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂತೆ, ತಮ್ಮ ಮಗು ಅಲ್ಲವೆಂದು ಹೆತ್ತವರು ಒಂದೆಡೆ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದು ಕಡೆ ನಿರ್ಲಕ್ಷ್ಯವೂ ಎದುರಾಗಿತ್ತು. ಇದರ ಪರಿಣಾಮವೋ ಏನೋ, ಮಗು ಈಗ ಸಾವು ಕಂಡಿದೆ.

ಹೆರಿಗೆ ವೇಳೆ ಹೆಣ್ಣಾಗಿದ್ದ ಮಗು ಡಿಸ್ಚಾರ್ಜ್ ವೇಳೆ ಗಂಡು ! ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಶಂಕೆ, ಪೋಷಕರ ಆಕ್ರೋಶ 

ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲು ಪ್ರಕರಣ ; ಪೋಷಕರ ಡಿಎನ್ಎ ಪರೀಕ್ಷೆಗೆ ಕೋರ್ಟ್ ಅನುಮತಿ 

Mangalore Family alleges exchange of baby at Lady Goschen Hospital, the baby dies after unsuccessful treatment . A family from Kundapur had alleged bungling by the doctors of Lady Goschen Hospital here. The parents claim that the hospital had issued records during the delivery, confirming that the newborn was female. However, after 18 days, when the child was taken to another hospital for advanced treatment, they came to know that their baby was male. This has given rise to a sense of indignation and suspicion in them.