ಬ್ರೇಕಿಂಗ್ ನ್ಯೂಸ್
16-12-21 03:56 pm HK Desk news ಕರಾವಳಿ
ಮಂಗಳೂರು, ಡಿ.16 : ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಅವಹೇಳನಕಾರಿ ಮಾತುಗಳು ಕೇಳಿಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ರಾಜ್ಯಾಧ್ಯಕ್ಷರ ರಾಜಿನಾಮೆಯನ್ನು ಕೆಲವು ಕಾರ್ಯಕರ್ತರು ಕೇಳುತ್ತಿದ್ದಾರೆ. ದುರ್ಬಲ ರಾಜ್ಯಾಧ್ಯಕ್ಷ ಎಂದು ಬರೆದ ಮಾತ್ರಕ್ಕೆ ಅವರೇನು ದುರ್ಬಲರಾಗುವುದಿಲ್ಲ. ನೀವು ರಾಜಿನಾಮೆ ಕೇಳಿದ್ದಕ್ಕೆ ರಾಜಿನಾಮೆ ಕೊಡಲು ರಾಜ್ಯಾಧ್ಯಕ್ಷ ಪಟ್ಟ ಅನ್ನುವುದು ನೀವು ಕೊಟ್ಟಿರುವ ಭಿಕ್ಷೆಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧವೇ ಹರಿಹಾಯ್ದಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರಾಜಿನಾಮೆ ನೀಡುವಂತೆ ಆಗ್ರಹಿಸಿ ಅಭಿಯಾನ ನಡೆಸುತ್ತಿದ್ದಾರೆ. ಬಹಿರಂಗವಾಗಿ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಬಿಜೆಪಿ ನಾಯಕರು ತೀವ್ರ ಇರಿಸು ಮುರಿಸಿಗೆ ಒಳಗಾಗಿದ್ದರು. ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುದರ್ಶನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ನಳಿನ್ ಕುಮಾರ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಿದ್ದರೂ, ಅವರ ಬಗ್ಗೆ ಕ್ಷುಲ್ಲಕವಾಗಿ ಬರೆಯುತ್ತಿರುವುದರ ಹಿನ್ನೆಲೆಯನ್ನು ಗಮನಿಸಿದಾಗ, ಕೆಲವು ಅಂಶಗಳು ಗಮನಕ್ಕೆ ಬಂದಿವೆ. ಇದರ ಹಿಂದೆ ಕೆಲವು ಅತೃಪ್ತ ಆತ್ಮಗಳು ಕೆಲಸ ಮಾಡುತ್ತಿವೆ. ಕಾಣದ ಕೈಗಳು ಕೆಲಸ ಮಾಡುತ್ತಾ ಇದೆ. ಬಿಜೆಪಿ ಮತ್ತು ನಮ್ಮ ಜಿಲ್ಲೆಯ ಹಿಂದು ಸಂಘಟನೆ ಮಧ್ಯೆ ಒಡಕನ್ನು ಮೂಡಿಸಬೇಕು. ಆಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಬೇಕು ಎನ್ನುವ ಹುನ್ನಾರ ಅಡಗಿರುವುದು ಕಂಡುಬಂದಿದೆ.

ಈ ಹಿಂದೆ ಬಜರಂಗದಳ ಜಿಲ್ಲಾ ಘಟಕದ ಜವಾಬ್ದಾರಿ ಹೊಂದಿದ್ದು, ಆನಂತರ ಬಿಜೆಪಿಗೆ ಬಂದಿದ್ದೇನೆ. ಬಜರಂಗದಳ ಕಾರ್ಯಕರ್ತರ ಜವಾಬ್ದಾರಿಗಳೇನು, ಅಲ್ಲಿನ ನೈಜ ಕಾರ್ಯಕರ್ತರು ಯಾರು ಅನ್ನುವುದು ಗೊತ್ತಿದೆ. ಕಾರ್ಯಕರ್ತರಿಗೆ ಯಾವ ರೀತಿಯ ನೆರವು ನೀಡಬೇಕು ಅನ್ನುವುದು ತಿಳಿದಿದೆ. ಅದನ್ನು ನಾನಾ ಪ್ರಕಾರಗಳಲ್ಲಿ ಮಾಡಿದ್ದೇವೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಹೊಗಳಿ ಬರೆದಿದ್ದಾರೆ. ಈಗ ತೆಗಳಿ ಬರೆಯುತ್ತಿದ್ದಾರೆ. ಈ ಪೈಕಿ ಕೆಲವರು ಒಮ್ಮೆ ಬಿಜೆಪಿ, ಆನಂತರ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರಿದ್ದಾರೆ.
ಕೆಲವರು ಬಿಜೆಪಿಯಲ್ಲಿ ಜವಾಬ್ದಾರಿ, ಪದವಿ ಮೇಲೆ ಕಣ್ಣಿಟ್ಟು ಈ ರೀತಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದು ಎಂಪಿ, ಎಂಎಲ್ಎ ಆಗಬಹುದು ಅನ್ನುವ ಕನಸು ಕಾಣುತ್ತಿದ್ದಾರೆ. ಇದೊಂದು ಮೂರ್ಖತನದ ಪರಮಾವಧಿ. ಸೋಶಿಯಲ್ ಮೀಡಿಯಾದಿಂದ ಹಿಂದು ಸಂಘಟನೆ ಮಾಡಬಹುದು ಅನ್ನುವುದು ಮೂರ್ಖತನ. ಹಿಂದು ಸಂಘಟನೆಗಾಗಿ ಬಹಳಷ್ಟು ಮಂದಿ ಬೆವರು ಸುರಿಸಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಹಿಂದು ಸಂಘಟನೆ ಆಗುವುದಿಲ್ಲ. ಅಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದೂ ಇಲ್ಲ. ಆದರೆ, ಏನೋ ದುರುದ್ದೇಶ ಇಟ್ಟುಕೊಂಡು ಬರೆಯುತ್ತಿದ್ದಾರೆ. ನೈಜ ಕಾರ್ಯಕರ್ತರು ಈ ರೀತಿ ಬರೆಯುವುದಿಲ್ಲ.
ತಮ್ಮ ಜವಾಬ್ದಾರಿ ಏನು, ಹಿಂದು ಸಂಘಟನೆಯ ಕೆಲಸ ಏನು ಅನ್ನುವುದನ್ನು ಅರಿತು ಮಾಡಬೇಕು. ನಾವು ರಾಮ ಮಂದಿರ, ಕಾಶಿ ವಿಶ್ವನಾಥ ದೇಗುಲದ ಬಗ್ಗೆ ಘೋಷಣೆ ಮಾತ್ರ ಹಾಕಿಲ್ಲ. ನಾವದನ್ನು ಮಾಡಿ ತೋರಿಸಿದ್ದೇವೆ. ಲವ್ ಜಿಹಾದ್, ಮತಾಂತರದ ಬಗ್ಗೆ ಕಾನೂನು ತರುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದ ಮಾತ್ರಕ್ಕೆ ಯಾವುದೇ ಸಾಧನೆ ಆಗಲ್ಲ. ಆ ಬಗ್ಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಮುಂದಡಿ ಇಡುತ್ತಿದ್ದೇವೆ. ರಾಷ್ಟ್ರೀಯ ವಿಚಾರಧಾರೆ ಇರುವ ಪ್ರಮುಖರು, ನಾಯಕರು ಶಾಸಕಾಂಗ ಪ್ರವೇಶ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಕ್ಷುಲ್ಲಕವಾಗಿ ನಡೆದುಕೊಂಡು ರಾಜ್ಯಾಧ್ಯಕ್ಷರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಸುದರ್ಶನ್ ಮೂಡುಬಿದ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಧೀರ್ ಶೆಟ್ಟಿ ಕಣ್ಣೂರು, ವಕ್ತಾರ ರಾಧಾಕೃಷ್ಣ , ಕಸ್ತೂರಿ ಪಂಜ ಇದ್ದರು.
Mangalore Nalin Kumar Kateel is BJP president not by begging slams Sudarshan Moodbidri to VHP leaders. The Bajarang Dal and VHP members are constantly making campaigns on social media demanding the resignation of BJP state president Nalin Kumar Kateel.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm