ಬ್ರೇಕಿಂಗ್ ನ್ಯೂಸ್
17-12-21 02:02 pm HK Desk news ಕರಾವಳಿ
ಮಂಗಳೂರು, ಡಿ.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಪೊಲೀಸರ ಮೇಲೆ ನಂಬಿಕೆ, ವಿಶ್ವಾಸ ಕಳಕೊಳ್ಳುವಂತಾಗಿದೆ. ಉಪ್ಪಿನಂಗಡಿಯ ಘಟನೆ ಆಗೋದಕ್ಕೂ ಮುನ್ನ ಇಳಂತಿಲದಲ್ಲಿ ನಡೆದಿದ್ದ ಘಟನೆಗೆ ಯಾರು ಕಾರಣ ? ಏಕಾಏಕಿ 20ಕ್ಕೂ ಹೆಚ್ಚು ಜನರು ಸೇರಿ ಒಂದು ಸಮುದಾಯವನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿದ್ದು ಯಾಕೆಂದು ಪೊಲೀಸರು ಹೇಳಿಲ್ಲ. ಅದರಲ್ಲಿ ಆರೋಪಿಗಳನ್ನು ಬಂಧಿಸಿದರೆ ಶಾಸಕ ಬಿಡಿಸಿಕೊಂಡು ಹೋಗಿದ್ದರು. ಪೊಲೀಸರ ತಾರತಮ್ಯ ನೀತಿಯಿಂದಾಗಿ ಈ ರೀತಿಯ ಬೆಳವಣಿಗೆ ಆಗಿದೆ. ಇಂತಹ ಘಟನೆಗಳಿಗೆ ಪೊಲೀಸರೇ ಹೊಣೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಹುಲ್ ಹಮೀದ್, ಉಪ್ಪಿನಂಗಡಿ ಠಾಣೆಯ ಮುಂದೆ ಎಸ್ ಡಿಪಿಐ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದು ಯಾಕೆ.. ಒಂದು ಕೋಮಿನವರು ಬೆಳಗ್ಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರೆ, ಸುಮ್ಮನಿದ್ದ ಪೊಲೀಸರು ರಾತ್ರಿ ವೇಳೆ ಲಾಠಿ ಎತ್ತಿದ್ದಾರೆ. ಲೈಟ್ ಆಫ್ ಮಾಡಿ ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ, ಪೊಲೀಸರಿಗೆ ಚೂರಿ ಇರಿತ ಆಗಿದೆ ಎನ್ನುತ್ತಿದ್ದಾರೆ. ಚೂರಿ ಇರಿತ, ಪೊಲೀಸರ ಮೇಲಿನ ದಾಳಿ ಆಗಿದ್ದಕ್ಕೆ ಸಿಸಿಟಿವಿ ಸಾಕ್ಷ್ಯಗಳಿದ್ದರೆ ಬಿಡುಗಡೆ ಮಾಡಲಿ ಎಂದು ಹೇಳಿದರು.
ಪೊಲೀಸರು ಈ ರೀತಿಯ ಬೆಳವಣಿಗೆ ಸಂದರ್ಭದಲ್ಲಿ ಮೌನ ವಹಿಸುವುದು ಇದಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ. ಒಂದು ಸಂಘಟನೆಯ ಜಿಲ್ಲಾಧ್ಯಕ್ಷ ಪೊಲೀಸರ ಮೇಲೆ ಬಹಿರಂಗ ಬೆದರಿಕೆ ಹಾಕುತ್ತಾನೆ. ಜೈಲಿಗೆ ಹೋಗುವುದಕ್ಕೂ ಗೊತ್ತು, ಪೊಲೀಸರನ್ನು ಖಬರಸ್ತಾನಕ್ಕೆ ಕಳಿಸೋದಕ್ಕೂ ಗೊತ್ತು ಎಂದು ಬೆದರಿಕೆ ಹಾಕಿದರೆ ಇವರಿಗೆ ಆತನ ಮೇಲೆ ಕೇಸ್ ಹಾಕಲು ಆಗಿಲ್ಲ. ಇನ್ನೊಬ್ಬರು ಜಿಲ್ಲಾಧಿಕಾರಿಯ ಕೊರಳು ಪಟ್ಟಿ ಹಿಡಿಯುವ ಬೆದರಿಕೆ ಹಾಕಿದರೂ ಬಂಧನ ಮಾಡಿಲ್ಲ. ಮತ್ತೊಬ್ಬ ಸಣ್ಣ ಹುಡುಗಿ, ಮಸೀದಿಯಲ್ಲಿ ಆಜಾನ್ ಕೂಗುವುದನ್ನು ಹಿಂದುಗಳನ್ನು ಕೊಲ್ಲಿ ಎಂದು ಹೇಳಿ ಪ್ರಚೋದನೆ ಮಾಡುತ್ತಾಳೆ, ಅದರ ಬಗ್ಗೆ ಪೊಲೀಸರು ಮೌನ ವಹಿಸುತ್ತಾರೆ. ಇನ್ನೊಬ್ಬಾಕೆ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಕುಂಕುಮ ಇಟ್ಟು ಹಿಂದು ಧರ್ಮಕ್ಕೆ ಕರೆತರುತ್ತೇವೆ ಎಂದು ಹೇಳಿಕೆ ಕೊಟ್ಟರೂ ಮೌನ ತಾಳುತ್ತಾರೆ. ಹೀಗೆ ಬಹಿರಂಗ ಬೆದರಿಕೆ ಹಾಕುವ ಘಟನೆಗಳ ಸಂದರ್ಭದಲ್ಲಿ ಪೊಲೀಸರು ಮೌನ ವಹಿಸಿದ್ದು, ತಾರತಮ್ಯ ಧೋರಣೆ ಅನುಸರಿಸಿದ್ದು ಇಂಥ ಬೆಳವಣಿಗೆಗೆ ಕಾರಣ.
ಯಾವುದೇ ಪ್ರಕರಣದಲ್ಲಿ ಒಂದು ಸಮುದಾಯವನ್ನು ಗುರಿಯಾಗಿರಿಸಿ ಕೊಲೆಯತ್ನ ಕೇಸು ದಾಖಲಿಸಿ ಜೈಲಿಗೆ ತಳ್ಳುತ್ತಾರೆ. ಉಪ್ಪಿನಂಗಡಿ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಶಾಸಕ ಹರೀಶ್ ಪೂಂಜ, ಆರೋಪಿಗಳನ್ನು ಬಿಡಿಸಿಕೊಂಡು ಹೋಗುತ್ತಾರೆ. ಅದೇ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಗೆ ಸಂಬಂಧ ಇದ್ದಾರೆಂದು ಸಂಘಟನೆಯವರನ್ನು ಬಂಧಿಸುತ್ತಾರೆ ಅಂದ್ರೆ, ಅಲ್ಲಿ ಶಾಸಕರನ್ನೂ ಸಂಬಂಧ ಇರುವ ನೆಪದಲ್ಲಿ ಬಂಧಿಸಬೇಕಾಗುತ್ತದೆ. ಕೇಸು ಹಾಕಬೇಕಾಗುತ್ತದೆ. ಯಾಕೆ, ಇವರು ಅದನ್ನು ಮಾಡಿಲ್ಲ. ಈಗ ನಡೆಯುತ್ತಿರುವ ಘಟನೆ ಕೇವಲ ಸಂಘ ಪರಿವಾರ ಮತ್ತು ಎಸ್ ಡಿಪಿಐ ನಡುವಿನ ಜಟಾಪಟಿ ಅಷ್ಟೇ.. ಇದಕ್ಕೂ ಮುಸ್ಲಿಂ ಸಮುದಾಯಕ್ಕೂ ಸಂಬಂಧ ಇಲ್ಲ. ಇದನ್ನು ಹಿಂದು – ಮುಸ್ಲಿಂ ಎಂದು ಬಿಂಬಿಸಿ ಕೆಲವರು ಲಾಭ ಪಡೆಯಲು ಹೊರಟಿದ್ದಾರೆ ಎಂದು ಶಾಹುಲ್ ಹಮೀದ್ ಹೇಳಿದರು.
ಕಾರ್ಪೊರೇಟರ್ ರವೂಫ್, ನವೀನ್ ಡಿಸೋಜ, ಜಿ.ಎ.ಬಾವ, ಇಬ್ರಾಹಿಂ ಕೋಡಿಜಾಲ್ ಉಪಸ್ಥಿತರಿದ್ದರು.
Mangalore Why did police permit SDPI and PFI to protest in Uppinangady Congress leader Shaul Ahmed slams police department.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm