ಬ್ರೇಕಿಂಗ್ ನ್ಯೂಸ್
17-12-21 03:34 pm HK Desk news ಕರಾವಳಿ
ಉಡುಪಿ, ಡಿ.17 : ಇಲ್ಲೊಬ್ಬ ತನ್ನ ನಾಲ್ಕು ಮಕ್ಕಳನ್ನು ಬೀದಿಪಾಲು ಮಾಡಿ, ವಿವಾಹಿತ ಮಹಿಳೆಯೊಬ್ಬಳ ಜೊತೆ ಎರಡನೇ ಮದುವೆಗೆ ಮುಂದಾಗಿರುವ ಘಟನೆ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಕಿಗೆ ಬಂದಿದ್ದು ಮಕ್ಕಳು ಸೇರಿದಂತೆ ಸಮಾಜದ ಮುಖಂಡರು ಆಕ್ಷೇಪ ಎತ್ತಿದ್ದಾರೆ.
ಉಡುಪಿ ಮಧ್ವ ನಗರದ ನಿವಾಸಿಗಳಾದ ಮಹಮದ್ ಅಶ್ಫಕ್ ಹಾಗೂ ಜಯಲಕ್ಷ್ಮೀ ಪ್ರೀತಿಸಿ ಮದುವೆಯಾಗಲು ಹೊರಟ ಜೋಡಿಯಾಗಿದ್ದು ಉಡುಪಿಯ ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದರು. ಅಶ್ಫಾಕ್, ತನ್ನ ನಿಜ ಬಣ್ಣವನ್ನು ಮರೆಮಾಚಿ ನಕಲಿ ದಾಖಲೆ ಸಲ್ಲಿಸಿ ಮದುವೆಯಾಗಲು ಹೊರಟಿದ್ದಾನೆ.
ಉಡುಪಿಯ ಮಧ್ವ ನಗರದ ನಿವಾಸಿಯಾಗಿದ್ದರೂ ಅಶ್ಫಾಕ್, ಮಂಗಳೂರು ತಾಲೂಕಿನ ಪಡು ಪೆರಾರದ ವಿಳಾಸ ನೀಡಿದ್ದಾನೆ. ಅಲ್ಲದೆ, ತಾನೊಬ್ಬ ಅವಿವಾಹಿತ ಎಂದು ಬಿಂಬಿಸಲು ನಕಲಿ ದಾಖಲೆಯನ್ನೂ ಕೊಟ್ಟಿದ್ದ. ಈತನಿಗೆ 2002ರಲ್ಲಿ ಆಸೀಫಾ ಬಾನು ಎಂಬಾಕೆ ಜೊತೆಗೆ ಮದುವೆಯಾಗಿದ್ದು ನಾಲ್ಕು ಮಕ್ಕಳನ್ನು ಹೊಂದಿದ್ದಾನೆ.
ಆದರೆ ಮೊದಲ ಪತ್ನಿ ಆಸೀಫಾ ಬಾನು ಕೊರೋನಾದಿಂದಾಗಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು ಆಬಳಿಕ ಮಕ್ಕಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ದೂರವಾಗಿದ್ದ. 18 ವರ್ಷದ ಹಿರಿ ಮಗಳು, 16 ವರ್ಷದ ಮಗ ಹಾಗೂ ಎರಡೂವರೆ ವರ್ಷದ ಇಬ್ಬರು ಅವಳಿ ಮಕ್ಕಳನ್ನು ಹೊಂದಿದ್ದು ಅವರಿಗೆ ತಿಳಿಯದಂತೆ ಬೇರೊಂದು ಮದುವೆಯಾಗಲು ಮುಂದಾಗಿದ್ದಾನೆ. ನಾಲ್ಕು ಮಕ್ಕಳನ್ನ ಬಿಟ್ಟು ಬೀದಿಪಾಲು ಮಾಡಿ ವಿವಾಹಿತೆಯ ಜೊತೆ ಸಂಪರ್ಕ ಬೆಳೆಸಿ, ಮದುವೆಗೆ ತಯಾರಿ ನಡೆಸಿದ್ದಾನೆ. ಈ ಬಗ್ಗೆ ಅಶ್ಪಕ್ ಮಕ್ಕಳು, ತಮಗೆ ಯಾವುದೇ ದಿಕ್ಕಿಲ್ಲದಂತೆ ಮಾಡಿ ಬೇರೆ ಮದುವೆಗೆ ಹೊರಟಿದ್ದಾರೆ. ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರು ಕೂಡ ಬುದ್ದಿವಾದ ಹೇಳಿದ್ದಾರೆ. ವಿಷಯ ತಿಳಿದ ಹಿಂದೂ ಮಹಾಸಭಾ ಮುಖಂಡರು ಹಾಗೂ ಅಶ್ಪಾಕ್ ಮಕ್ಕಳು ವಿವಾಹ ನೋಂದಣಿ ಕಚೇರಿಗೆ ಬಂದಿದ್ದು ಆಕ್ಷೇಪ ಸೂಚಿಸಿದ್ದಾರೆ. ಮದುವೆ ಅರ್ಜಿ ಅನೂರ್ಜಿತಗೊಳಿಸುವಂತೆ ವಿವಾಹ ನೋಂದಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಬಗ್ಗೆ ಅಶ್ಪಾಖ್ ಕುಟುಂಬಸ್ಥರು, ಮಕ್ಕಳು, ಹಿಂದು ಮಗಾಸಭಾ ಮುಖಂಡರು ಸೇರಿದ್ದು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹಿಂದು - ಮುಸ್ಲಿಂ ಮದುವೆ ಚರ್ಚೆಗೆ ಕಾರಣವಾಗಿದೆ.
Udupi Man plans for second wedding by putting his four children out of house. Hindu leaders and Muslim family demanded justice at the sub registrar office in Udupi.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm