ಬ್ರೇಕಿಂಗ್ ನ್ಯೂಸ್
18-12-21 10:38 pm HK Desk news ಕರಾವಳಿ
ಮಂಗಳೂರು, ಡಿ.19: ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆಯಲ್ಲಿ ಲಸಿಕೆ ಪಡೆಯಬೇಕಿದ್ದರೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬೇಕು. ಆಸ್ಪತ್ರೆಗೆ ಹೋದರೂ ದಾಖಲೆ ಪತ್ರಗಳಿಲ್ಲದಿದ್ದರೆ ಲಸಿಕೆ ನೀಡಲು ಆಗಲ್ಲ ಎನ್ನುತ್ತಾರೆ. ಹಾಗಿದ್ದರೆ, ಅನಾಥರು, ನಿರ್ಗತಿಕರು ದಾಖಲೆ ಪತ್ರಗಳಿಗಾಗಿ ಎಲ್ಲಿ ಹೋಗಬೇಕು. ಅಂಥವರಿಗೆ ಲಸಿಕೆ ಹೇಗೆ ನೀಡಬೇಕು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿತ್ತು.
ಇಂಥ ಉತ್ತರ ಇಲ್ಲದ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯೇ ಉತ್ತರ ನೀಡಿದ್ದರು. ಸ್ಪೆಷಲ್ ಡ್ರೈವ್ ಮೂಲಕ ಅಂಥ ವಿಭಾಗದವರಿಗೆ ಲಸಿಕೆ ನೀಡಲು ಕೇಂದ್ರ ಸರಕಾರವೇ ಅವಕಾಶ ಕೊಟ್ಟಿತ್ತು. ಕಳೆದ ಬಾರಿ ಸೆ.17ರಂದು ಪ್ರಧಾನಿ ಮೋದಿ ಜನ್ಮದಿನದಂದು ಇದೇ ವಿಶೇಷ ಅವಕಾಶವನ್ನು ಬಳಸ್ಕೊಂಡು ಮಂಗಳೂರಿನ ಸಮರ್ಥನಾ ಫೌಂಡೇಶನ್ ಅನಾಥರು, ನಿರ್ಗತಿಕರಿಗೂ ಕೊರೊನಾ ಲಸಿಕೆ ನೀಡಲು ಮುಂದಾಗಿತ್ತು.
ಮಂಗಳೂರಿನ ನೆಹರು ಮೈದಾನದ ಆಸುಪಾಸಿನಲ್ಲಿ ನೂರಾರು ಮಂದಿ ನಿರ್ಗತಿಕರು ಇದ್ದಾರೆ. ಅನಾಥರು, ಭಿಕ್ಷುಕರು ಕೂಡ ಇದರಲ್ಲಿದ್ದಾರೆ. ಅವರಲ್ಲಿ ಯಾರಿಗೂ ದಾಖಲೆ ಪತ್ರಗಳಿಲ್ಲ. ಮೊಬೈಲುಗಳಿಲ್ಲ. ಆಧಾರ್ ಕಾರ್ಡ್ ಇಲ್ಲ. ಬೇರೆ ಬೇರೆ ಊರುಗಳಿಂದ, ಎಲ್ಲೋ ರಾಜ್ಯದ ಮೂಲೆಯಿಂದ ಬಂದು ಇಲ್ಲಿ ಉಳಿದುಕೊಂಡವರಿದ್ದಾರೆ. ಭಾಷೆ, ತಮ್ಮ ಕುಟುಂಬ, ಊರಿನ ಪರಿವೇ ಇಲ್ಲದವರೂ ಇದ್ದಾರೆ. ಅವರನ್ನು ಪತ್ತೆ ಮಾಡಿ, ಕೊರೊನಾ ಲಸಿಕೆ ನೀಡುವ ಕೆಲಸವನ್ನು ಸಮರ್ಥನಾ ಫೌಂಡೇಶನ್ ಮಾಡಿದೆ. ಕಳೆದ ಬಾರಿ 83 ಜನಕ್ಕೆ ಈ ರೀತಿ ಲಸಿಕೆ ನೀಡಲಾಗಿತ್ತು. ಈಗ 84 ದಿನಗಳ ನಂತರ ಡಿ.17ರಂದು ಎರಡನೇ ಡೋಸ್ ನೀಡಲಾಗಿದ್ದು, ಈ ಬಾರಿ 55 ಜನರು ಎರಡನೇ ಹಂತದ ಡೋಸ್ ಪಡೆದಿದ್ದಾರೆ.
ಕೋವಿನ್ ಏಪ್ ನಲ್ಲಿ ಒಂದೇ ಮೊಬೈಲ್ ನಂಬರಿನಲ್ಲಿ ಸ್ಪೆಷಲ್ ಡ್ರೈವ್ ಬಗ್ಗೆ ರಿಜಿಸ್ಟರ್ ಮಾಡಿಕೊಂಡು ಅವಕಾಶ ನೀಡಲಾಗಿತ್ತು. ಈ ರೀತಿ ವಿಶೇಷ ಆದ್ಯತೆಯಲ್ಲಿ ಲಸಿಕೆ ನೀಡಲು ಮಂಗಳೂರಿನಲ್ಲಿ ಕೆಎಂಸಿ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ಸರಕಾರದ ಉಚಿತ ಲಸಿಕೆಯನ್ನು ಪಡೆದು ಸಮರ್ಥನಾ ಫೌಂಡೇಶನ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಸಿಬಂದಿ ಲಸಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ತುಂಬ ಸಂತಸಗೊಂಡಿರುವ ಅನಾಥರು, ನಾವು ಲಸಿಕೆ ಪಡೆಯುವುದಕ್ಕಾಗಿ ಆಸ್ಪತ್ರೆಗಳಿಗೆ ಹೋಗಿದ್ದಾಗ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಕೇಳುತ್ತಿದ್ದರು. ಆದರೆ ನಾವು ಮನೆ ಬಿಟ್ಟು ಎಷ್ಟೋ ವರ್ಷಗಳಾಗಿವೆ. ನಮ್ಮಲ್ಲಿ ಮೊಬೈಲ್ ಎಲ್ಲಿಂದ ಬರಬೇಕು. ಜೀವ ಮಾತ್ರ ಇದೆ, ಉಳಿದಿದ್ದು ಯಾವುದೂ ಇಲ್ಲ. ನಮ್ಮ ಕಷ್ಟ ಕಂಡು ಲಸಿಕೆ ನೀಡಿದ್ದಕ್ಕಾಗಿ ಧನ್ಯವಾದ ಎನ್ನುತ್ತಿದ್ದರು.
ನಿರ್ಗತಿಕರೇ ಆಗಿದ್ದರೂ, ಅವರಿಗೆ ಲಸಿಕೆ ಪಡೆದಿರುವುದಕ್ಕಾಗಿ ಕೆಎಂಸಿ ಆಸ್ಪತ್ರೆಯಿಂದ ಕೊರೊನಾ ಲಸಿಕೆ ಕಾರ್ಡ್ ಅನ್ನು ನೀಡಲಾಗಿದೆ. ಸಮಾಜಮುಖಿ ಕೆಲಸ ಮಾಡಿರುವ ಸಮರ್ಥನಾ ಫೌಂಡೇಶನ್ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ, ಟ್ರಸ್ಟಿ ಸುಜಿತ್ ಪ್ರತಾಪ್, ಪ್ರೀತಮ್ ರೈ, ಸಚಿನ್ ಶೆಟ್ಟಿ, ಅನಿಲ್ ಪ್ರಸಾದ್, ಕೆಎಂಸಿ ಆಸ್ಪತ್ರೆಯ ಸಿಂಧು ಪ್ರಸಾದ್, ಜಯರಾಮ ಪೂಜಾರಿ ಒಡಗೂಡಿ ಈ ಕೆಲಸ ಮಾಡಿದ್ದಾರೆ.
Mangalore Covid vaccine special drive for the poor and needy by Samarthana Foundation, wins hearts of people. Also a Health card from Kmc hospital has been issued by the foundation to the needy and poor for their medical benefits.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm