ಬ್ರೇಕಿಂಗ್ ನ್ಯೂಸ್
22-12-21 04:57 pm Mangalore Correspondent ಕರಾವಳಿ
ಉಳ್ಳಾಲ, ಡಿ.22 : ಉಳ್ಳಾಲ ಕೋಟೆಪುರ ಬಳಿಯ ಕಡಲ ತೀರದಲ್ಲಿ ಕಸದ ರಾಶಿ ಬಿದ್ದಿದ್ದು ಕೊಂಪೆ ಸೃಷ್ಟಿಯಾಗಿದೆ. ಒಂದೆಡೆ ಫಿಶ್ ಮೀಲ್ ಫ್ಯಾಕ್ಟರಿ ತ್ಯಾಜ್ಯ, ಮತ್ತೊಂದೆಡೆ ತೀರದಲ್ಲಿ ತಂದು ಸುರಿಯುತ್ತಿರುವ ಕಸದ ರಾಶಿ ಸಮುದ್ರಕ್ಕೆ ಸೇರುತ್ತಿದ್ದು ರಾಡಿ ಸೃಷ್ಟಿಸಿದರೂ ಸಂಬಂಧಪಟ್ಟ ಉಳ್ಳಾಲ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆಂದು ಉಳ್ಳಾಲ ನಗರಸಭೆಯು ಮೈಕಲ್ಲಿ ಊರಿಡೀ ಡಂಗುರ ಬಾರಿಸಿದ್ದೇ ಬಂತು. ಕೋಟೆಪುರ ಫಿಶ್ ಮೀಲ್ ಫ್ಯಾಕ್ಟರಿ ಬಳಿಯ ಸಮುದ್ರ ತೀರದಲ್ಲಿ ಟನ್ ಗಟ್ಟಲೆ ಕಸವನ್ನು ಸಭ್ಯತೆ ಮೀರಿದ ಮಂದಿ ಸುರಿಯುತ್ತಿದ್ದು ಇದರಿಂದಾಗಿ ಅಲ್ಲಿನ ಪ್ರದೇಶವು ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ತೀರದಲ್ಲಿ ರಾಶಿ ಬಿದ್ದಿರುವ ಕಸಗಳು ನೇರವಾಗಿ ಸಮುದ್ರದ ಒಡಲು ಸೇರುತ್ತಿದ್ದು ವಿಶಾಲ ಕಡಲಲ್ಲಿ ಕಸವೇ ತೇಲುತ್ತಿರುವ ದೃಶ್ಯ ಕಂಡುಬಂದಿದೆ.


ಕೆಲವು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಲಾರಿಯಲ್ಲಿ ಕಸ ಸುರಿಯುತ್ತಿದ್ದ ಚಾಲಕನನ್ನ ತರಾಟೆಗೆ ತೆಗೆದ ಸ್ಥಳೀಯರು ವೀಡಿಯೋ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವೈರಲ್ ಆದ ವಿಡಿಯೋ ಆಧರಿಸಿ ಉಳ್ಳಾಲ ನಗರಸಭೆ ಆಯುಕ್ತ ರಾಯಪ್ಪ ಅವರು ಕಸ ಸುರಿದ ಲಾರಿಯನ್ನ ಜಪ್ತಿ ಮಾಡಿ ದಂಡ ಹಾಕಿದ್ದರು. ಇದೀಗ ಕೋಟೆಪುರ ಕಡಲ ತೀರದಲ್ಲಿ ಕಸದ ಕೊಂಪೆಯೇ ಸೃಷ್ಟಿಯಾಗಿದ್ದು ಕಸ ಸಮುದ್ರದಲ್ಲಿ ತೇಲುತ್ತಿದ್ದರೂ ಇದನ್ನು ಕೇಳುವ ಒಬ್ಬನೇ ಅಧಿಕಾರಿ ಇಲ್ಲದಂತಾಗಿದೆ.

ಈ ಬಗ್ಗೆ ಆಯುಕ್ತ ರಾಯಪ್ಪರಲ್ಲಿ ಕೇಳಿದರೆ ತನ್ನ ಗಮನಕ್ಕೆ ಬಂದಿಲ್ಲ, ಪರಿಶೀಲಿಸುವುದಾಗಿ ಹೇಳಿದ್ದಾರೆ. ಕೋಟೆಪುರ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಅದು ಎರಡೇ ದಿವಸ. ಮತ್ತೆ ಅದನ್ನ ಕಿತ್ತು ಬಿಸಾಡ್ತಾರೆ ಅಂತ ರಾಯಪ್ಪ ಹೇಳಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಹಾಕಿದರೆ ಸಮುದ್ರ ತೀರದಲ್ಲಿ ನಡೆಯುವ ಮಿಡ್ ನೈಟ್ ಮರಳು ಮಾಫಿಯಾಕ್ಕೆ ತೊಂದರೆ ತಪ್ಪಿದಲ್ಲ.

ನಾಗರಾಜ್ ಬಜಾಲ್ ನೇತೃತ್ವದ ಎನ್ ಜಿಓ ಒಂದು ಕಳೆದ ಕೆಲವು ತಿಂಗಳ ಹಿಂದೆ ನೇತ್ರಾವತಿ ನದಿ ಒಡಲು ಸೇರುತ್ತಿದ್ದ ಟನ್ ಗಟ್ಟಲೆ ಕಸವನ್ನ ಮೇಲಕ್ಕೆತ್ತಿ ಅಭಿಯಾನ ನಡೆಸಿತ್ತು. ಎಷ್ಟು ಅಭಿಯಾನ ನಡೆಸಿದರೆ ನಮಗೇನು ಅನ್ನುವ ಅನಾಗರಿಕರು ಮತ್ತೆ ಮತ್ತೆ ನದಿ, ಕಡಲನ್ನ ಮಲಿನಗೊಳಿಸುವ ಚಾಲಿಯನ್ನ ಬಿಟ್ಟಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸಮುದ್ರ ಕಲುಷಿತಗೊಳ್ಳುತ್ತಿರುವುದನ್ನ ತಡೆಯಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಫಿಶ್ ಮೀಲ್ ಫ್ಯಾಕ್ಟರಿ ಕಾರುಬಾರು !
ಕೋಟೆಪುರದಲ್ಲಿ ಹತ್ತಕ್ಕೂ ಅಧಿಕ ಫಿಶ್ ಮೀಲ್ ಫ್ಯಾಕ್ಟರಿಗಳು ಹಣ, ಅಧಿಕಾರದ ಪ್ರಭಾವ ಬಳಸಿ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಾಚರಿಸುತ್ತಿವೆ. ಫಿಶ್ ಮೀಲ್ ಫ್ಯಾಕ್ಟರಿಗಳ ರಾಸಾಯನಿಕ ತ್ಯಾಜ್ಯಗಳು ಸಮುದ್ರಕ್ಕೆ ಹರಿಯುವುದರ ಪರಿಣಾಮ ಜಲಚರಗಳ ಅವನತಿಯಾಗುತ್ತಿದೆ. ಇಷ್ಟಲ್ಲದೆ ಇಲ್ಲಿನ ಎಲ್ಲಾ ಫ್ಯಾಕ್ಟರಿಗಳು ತಮ್ಮ ಬಾಯ್ಲರ್ ಗಳಿಗೆ ಬಳಸುವ ಭಾರೀ ಪ್ರಮಾಣದ ಕಟ್ಟಿಗೆಗಳನ್ನು ಶೇಖರಿಸಿಡಲು ಸೀಆರ್ ಝಡ್ ಪ್ರದೇಶವನ್ನೂ ಆಕ್ರಮಿಸಿಕೊಂಡಿವೆ.
Ullal Kotepura Beach Road in Mangalore turns dumping yard for garbage, Ullal Municipal town corporation leaders and members least bothered about the issue. Recently a truck was seized by the police for dumping garbage into the sea.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm