ಪ್ರತಿಭಟನೆ ನಡೆಸಿದರೂ ವೇತನ ಹೆಚ್ಚಿಸದ ಕೊರಗು ; ಉಡುಪಿಯಲ್ಲಿ ಅತಿಥಿ ಉಪನ್ಯಾಸಕ ಆತ್ಮಹತ್ಯೆ

24-12-21 05:10 pm       HK Desk news   ಕರಾವಳಿ

13 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ವೃತ್ತಿ ಮಾಡುತ್ತಿದ್ದರೂ, ವೃತ್ತಿ ಭದ್ರತೆಯಿಲ್ಲ. ಸೂಕ್ತ ವೇತನ ಸಿಗುತ್ತಿಲ್ಲ ಎಂಬ ಕೊರಗಿನಲ್ಲಿ ಉಪನ್ಯಾಸಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಎಂಜಿಎಂ ಕಾಲೇಜು ಸಿಬಂದಿಯ ಕ್ವಾಟ್ರಸ್ ನಲ್ಲಿ ನಡೆದಿದೆ.

ಉಡುಪಿ, ಡಿ.24 : 13 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ವೃತ್ತಿ ಮಾಡುತ್ತಿದ್ದರೂ, ವೃತ್ತಿ ಭದ್ರತೆಯಿಲ್ಲ. ಸೂಕ್ತ ವೇತನ ಸಿಗುತ್ತಿಲ್ಲ ಎಂಬ ಕೊರಗಿನಲ್ಲಿ ಉಪನ್ಯಾಸಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಎಂಜಿಎಂ ಕಾಲೇಜು ಸಿಬಂದಿಯ ಕ್ವಾಟ್ರಸ್ ನಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಫಸ್ಟ್ ಗ್ರೇಡ್ ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಶ್ರೀಹರ್ಷ ಶಾನುಭೋಗ್ (38) ಸಾವನ್ನಪ್ಪಿದ ದುರ್ದೈವಿ. ಶ್ರೀಹರ್ಷ ಉಡುಪಿಯ ಎಂಜಿಎಂ ಕಾಲೇಜಿನ ಸಿಬಂದಿಯ ಕ್ವಾಟ್ರಸ್ ನಲ್ಲಿ ಸಾವಿಗೆ ಶರಣಾಗಿದ್ದಾರೆ. ಅವರ ಪತ್ನಿ ಶಿಲ್ಪಾ ಶಾನುಭೋಗ್ ಎಂಜಿಎಂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.

13 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿದ್ದ ಶ್ರೀಹರ್ಷ ತನ್ನ ವೃತ್ತಿ ಖಾಯಂ ಆಗಿಲ್ಲ. ಮತ್ತು ಸೂಕ್ತ ವೇತನ ಸಿಗುತ್ತಿಲ್ಲ ಎಂಬ ಬಗ್ಗೆ ತೀವ್ರ ಕೊರಗಿನಲ್ಲಿದ್ದರು. ಇದರಿಂದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೊಳಗಾಗಿದ್ದರು. ಈ ಬಗ್ಗೆ ತನ್ನ ಸ್ನೇಹಿತರಲ್ಲಿ ಹೇಳಿಕೊಂಡು ಜಿಗುಪ್ಸೆ ವ್ಯಕ್ತಪಡಿಸುತ್ತಿದ್ದರು. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿ ಇತ್ತೀಚೆಗೆ ವೈದ್ಯರಿಂದ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು ಎಂದು ಅವರ ಪತ್ನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನ ನಡೆಯುತ್ತಿದ್ದಾಗಲೇ ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರು ತಮಗೆ ವೃತ್ತಿ ಭದ್ರತೆ ನೀಡಬೇಕು, ವೇತನ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅಧಿವೇಶನ ಮುಗಿಯುತ್ತ ಬಂದರೂ, ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳದ ಬೇಸರದಲ್ಲಿ ಶ್ರೀಹರ್ಷ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

At a time when guest lecturers have been boycotting classes all over the state and holding protests demanding confirmation of jobs, job security, increase in honorarium and such other demands, a guest lecturer ended his life. Sriharsha Shanbhogue (38), who died by suicide, was a guest lecturer of computer section of the government first grade college in Thirthahalli, Shivamogga district.