ಬ್ರೇಕಿಂಗ್ ನ್ಯೂಸ್
15-09-20 07:30 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 15: ಏಕಕಾಲಕ್ಕೆ ಎರಡೂ ಕೈಗಳಿಂದ ಬರೆಯಲು ಸಾಧ್ಯವೇ..? ಬರೆಯಲು ಸಾಧ್ಯ. ಅಷ್ಟೇ ಅಲ್ಲ, ಬಲಗೈಯಷ್ಟೇ ಎಡಗೈನಲ್ಲೂ ಒಂದೇ ಪ್ರಕಾರವಾಗಿ ಬರೆಯಬಹುದು ಎಂಬುದನ್ನು ತೋರಿಸಿದ್ದಾರೆ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಮಕ್ಕಳು. ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್- ಸುಮಾಡ್ಕರ್ ದಂಪತಿಯ ಪುತ್ರಿ 16 ವರ್ಷದ ಆದಿ ಸ್ವರೂಪ ಎರಡು ಕೈಗಳಿಂದ ಬರೆಯುವುದರಲ್ಲಿ ಜಗತ್ತಿನಲ್ಲೇ ವಿಶಿಷ್ಟ ದಾಖಲೆ ಮಾಡಿದ್ದಾರೆ.
ಎರಡು ವರ್ಷಗಳಿಂದ ಎರಡು ಕೈಗಳಲ್ಲಿ ಬರೆಯಲು ಆರಂಭಿಸಿದ ಆದಿ, ಈಗ ಪೂರ್ಣ ಮಟ್ಟದ ಬರಹಗಾರ್ತಿ. ಸಾಮಾನ್ಯರು ಒಂದು ನಿಮಿಷಕ್ಕೆ 35 ಪದಗಳನ್ನು ಬರೆಯೋದಾದ್ರೆ ಈಕೆ ನಿಮಿಷದಲ್ಲಿ 45 ಪದಗಳನ್ನು ಬರೆಯುವ ಮೂಲಕ ದಾಖಲೆ ಮಾಡಿದ್ದಾರೆ. ಇದನ್ನು ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಎಂದು ಘೋಷಿಸಿದೆ.
ಎರಡೂ ಕೈಯಲ್ಲಿ ಹತ್ತು ವಿಭಾಗದಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿರುವ ಈಕೆಯದ್ದು ಊಹೆಗೆ ನಿಲುಕದ ಜ್ಞಾನ. ಯುನಿ ಡೈರೆಕ್ಷನಲ್, ಒಪೋಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ವಿಧಾನಗಳಲ್ಲಿ ವೇಗವಾಗಿ ಬರೆಯುತ್ತಾಳೆ. ಇದಲ್ಲದೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಮಿಮಿಕ್ರಿ, ಬೀಟ್ ಬಾಕ್ಸ್, ಅದ್ಭುತ ನೆನಪುಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಮುಂತಾದ ವಿಷಯಗಳ ಜೊತೆಗೆ ಈವರೆಗೂ ಶಾಲೆಗೇ ಹೋಗದೇ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಕತೆ, ಕವನಗಳನ್ನು ಬರೆಯುವ ಸಾಮರ್ಥ್ಯ ಪಡೆದಿದ್ದಾಳೆ. ಈ ಬಾರಿ ಹತ್ತನೇ ತರಗತಿಯ ಪರೀಕ್ಷೆಯನ್ನು ವಿಶೇಷವಾಗಿ ಎರಡೂ ಕೈಗಳಲ್ಲಿ ಬರೆದು ಅತಿ ವೇಗದಿಂದ ಮುಗಿಸುವ ಇರಾದೆ ಹೊಂದಿದ್ದಾಳೆ.
ನೆನಪು ಶಕ್ತಿಗೂ ವಿಶೇಷ ತಂತ್ರ ಬಳಸುವ ಸ್ವರೂಪ ಅಧ್ಯಯನ ಕೇಂದ್ರ, ಈಕೆಗೆ ಜ್ಞಾನದ ಧಾರೆಯನ್ನೇ ಎರೆದಿದ್ದಾರೆ. ರಾಜ್ಯ, ದೇಶದ ಎಲ್ಲ ತಾಲೂಕು, ಜಿಲ್ಲೆಗಳ ಹೆಸರನ್ನು ಪಟಪಟನೇ ಹೇಳುವುದಲ್ಲದೆ, 64 ವಿದ್ಯೆ, ಸಂವತ್ಸರ, ರಾಮಾಯಣ, ಮಹಾಭಾರತದ ವಿಚಾರಗಳನ್ನೂ ಹೇಳಬಲ್ಲಳು. ವಿಶ್ವಲ್ ಮೆಮೊರಿ ಆರ್ಟ್ ಮೂಲಕ ಇಡೀ ಪಠ್ಯ ಪುಸ್ತಕವನ್ನು ಒಂದೇ ಹಾಳೆಗೆ ಇಳಿಸಿದ್ದು ಈಕೆಯ ಮತ್ತೊಂದು ದಾಖಲೆ. ಇವೆಲ್ಲದರ ಜೊತೆಗೆ ಏಕಕಾಲಕ್ಕೆ 13 ಮಂದಿ ಹೇಳಿದ್ದನ್ನು ಕ್ಷಣದಲ್ಲಿ ನೆನಪಿನಲ್ಲಿ ದಾಖಲಿಸಿ, ಸ್ಮರಣೆ ಮಾಡಿ ಹೇಳುವ ವಿಶಿಷ್ಟ ತ್ರಯೋದಶ ಅವಧಾನವನ್ನೂ ಈಕೆ ಅಭ್ಯಾಸ ಮಾಡಿಕೊಂಡಿದ್ದಾಳೆ. ಒಟ್ಟಿನಲ್ಲಿ ಈಕೆಯ. ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡನ್ನು ಮೀರಿಸುವ ರೀತಿಯಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ.
Join our WhatsApp group for latest news updates
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm