ಬ್ರೇಕಿಂಗ್ ನ್ಯೂಸ್
29-12-21 03:44 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಡಿ.29 : ಕೊರಗಜ್ಜನ ಕಟ್ಟೆ ಅಪವಿತ್ರ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಕಳೆದ ಐದಾರು ತಿಂಗಳಲ್ಲಿ ಮಂಗಳೂರು ಪೊಲೀಸರ ತಲೆಕೆಡಿಸಿದ್ದ ದೈವಸ್ಥಾನ ಅಪವಿತ್ರ ಕೃತ್ಯದ ಹಿಂದಿನ ಪ್ರವರವನ್ನು ಹೊರಗೆಡವಿದ್ದಾರೆ. ಮಂಗಳೂರಿನ ವಿವಿಧೆಡೆ ಹಿಂದುಗಳು ಪೂಜಿಸುವ ಕೊರಗಜ್ಜನಕಟ್ಟೆ, ಕಲ್ಲುರ್ಟಿ ಗುಡಿ, ಮಲರಾಯ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ ಸೇರಿದಂತೆ 18ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಡೋಮ್ ಇರಿಸಿ ಅಪವಿತ್ರಗೊಳಿಸಿದ್ದ ಕೃತ್ಯವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಹುಬ್ಬಳ್ಳಿ ಮೂಲದವನಾಗಿದ್ದು ಕ್ರಿಸ್ತಿಯನ್ ಆಗಿ ಮತಾಂತರಗೊಂಡಿರುವ, ಸದ್ಯಕ್ಕೆ ಉಳ್ಳಾಲದ ಕೋಟೆಕಾರು ಬಳಿಯ ಮಿತ್ರ ನಗರದಲ್ಲಿ ವಾಸವಿರುವ ದೇವದಾಸ್ ದೇಸಾಯಿ(62) ಎಂಬಾತ ಬಂಧಿತ ವ್ಯಕ್ತಿ. ಈ ಜಗತ್ತಿನಲ್ಲಿ ಏಸು ಮಾತ್ರ ಒಬ್ಬನೇ ದೇವರು. ಜಗತ್ತು ಅಂತ್ಯವಾಗುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಎಲ್ಲ ಮಹಿಳೆಯರು, ಪುರುಷರು ಏಸುವನ್ನು ಮಾತ್ರ ನಂಬಬೇಕು ಎಂದು ಬೈಬಲ್ ನಲ್ಲಿ ಬರೆದಿದ್ದು, ಅದರಂತೆ ನಾನು ಏಸುವಿನ ವಾಕ್ಯಗಳನ್ನು ಬರೆದು ವಿವಿಧ ಕಡೆಗಳಲ್ಲಿ ಹಾಕುತ್ತಿದ್ದೇನೆ. ದಾರಿಯಲ್ಲಿ ಹೋಗುವಾಗ ಸಿಕ್ಕಿದ ಕಾಂಡೋಮ್ ಗಳನ್ನು ಹೆಕ್ಕಿ ಕಾಣಿಕೆ ಡಬ್ಬಿಗಳಲ್ಲಿ ಹಾಕಿದ್ದೇನೆ ಎಂಬುದಾಗಿ ನಿರ್ಲಿಪ್ತನಾಗಿ ಹೇಳಿದ್ದಾನೆ.

ಎರಡು ದಿನಗಳ ಹಿಂದೆ ನಂದಿಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯ ಮೇಲ್ಭಾಗದಲ್ಲಿ ಬಳಸಿದ ಕಾಂಡೋಮ್ ಇಟ್ಟು ಅಪವಿತ್ರಗೊಳಿಸಿದ ಘಟನೆ ನಡೆದಿದ್ದು, ಹಿಂದು ಸಂಘಟನೆಗಳ ಆಕ್ರೋಶ ಕೇಳಿಬರುತ್ತಿದ್ದಂತೆ ತನಿಖೆಗೆ ಪೊಲೀಸ್ ತಂಡ ರಚಿಸಲಾಗಿತ್ತು. ಕೊರಗಜ್ಜನ ಕಟ್ಟೆಯ ಆಸುಪಾಸಿನಲ್ಲಿ ರಾತ್ರಿ ವೇಳೆ ವ್ಯಕ್ತಿಯೊಬ್ಬ ಓಡಾಡಿದ ಚಹರೆ ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಅದನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ವಿವಿಧ ಕಡೆಗಳಲ್ಲಿ ಈತ ಸೈಕಲ್ ನಲ್ಲಿ ಹೋಗುವ ಚಹರೆ ಪತ್ತೆಯಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೆಲಸವನ್ನು ಒಪ್ಪಿಕೊಂಡಿದ್ದಾನೆ. ವಿಶೇಷ ಅಂದ್ರೆ, ಇದು ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ, ಏಸು ಮಾತ್ರ ದೇವರು. ಅವರನ್ನು ಬಿಟ್ಟು ಬೇರೆ ದೇವರಿಲ್ಲ. ಹಾಗಾಗಿ ಜನರಿಗೆ ತಿಳಿಸುವುದಕ್ಕಾಗಿ ಇದನ್ನು ಮಾಡುತ್ತಿದ್ದೆ. ಏನೆಲ್ಲಾ ಮಾಡಿದ್ದೇನೆ, ಅನ್ನುವುದರ ಲಿಸ್ಟ್ ಇಟ್ಟುಕೊಂಡಿದ್ದೇನೆ ಎಂದು ತನ್ನಲ್ಲಿದ್ದ ಬುಕ್ ತೆರೆದು ತಾನು ಮಾಡಿದ್ದು ಮಹತ್ಕಾರ್ಯ ಎನ್ನುವಂತೆ ಪೊಲೀಸರಿಗೆ ತೋರಿಸಿದ್ದಾನೆ.

ಮಂಗಳೂರಿನಲ್ಲಿ ಸಿಖ್ಖರ ಗುರುದ್ವಾರ, ಮುಸ್ಲಿಮರ ಮಸೀದಿ, ಹಿಂದುಗಳ ದೇವಸ್ಥಾನ, ದೈವಸ್ಥಾನ ಎಲ್ಲ ಶ್ರದ್ಧಾಕೇಂದ್ರಗಳಲ್ಲಿಯೂ ಏಸುವಿನ ವಾಕ್ಯಗಳನ್ನು ಬರೆದು ಹಾಕಿದ್ದಾನೆ. ಅಲ್ಲದೆ, ಚರಂಡಿಯಲ್ಲಿ ಬಿದ್ದಿರುವ ಕಾಂಡೋಮ್ ಗಳನ್ನು ಹೆಕ್ಕಿ ತಂದು ವಿವಿಧ ಕಾಣಿಕೆ ಡಬ್ಬಿಗಳಿಗೆ ಸುರಿಯುತ್ತಿದ್ದ. ಭೂಮಿ ಅಂತ್ಯವಾಗುತ್ತಾ ಬಂದಿದೆ, ಈ ಜಗತ್ತಿನಲ್ಲಿ ಏಸು ಒಬ್ಬನೇ ದೇವ. ಅವನನ್ನು ಪೂಜಿಸಿದರೆ ಮಾತ್ರ ಜೀವ ಉಳಿಯಲು ಸಾಧ್ಯ. ಇಲ್ಲಿರುವ ದೈವ, ದೇವರುಗಳಿಗೆ ತಮ್ಮನ್ನು ಉಳಿಸಿಕೊಳ್ಳುವುದಕ್ಕೇ ಸಾಧ್ಯವಾಗುತ್ತಿಲ್ಲ, ಇತರರನ್ನು ಹೇಗೆ ಕಾಪಾಡುತ್ತಾನೆ ಎಂಬ ಪ್ರಶ್ನೆ ಮುಂದಿಟ್ಟು ಇತರ ಧರ್ಮೀಯರ ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸಲು ಹೊರಟಿದ್ದ.


ಹುಬ್ಬಳ್ಳಿ ಬಿಟ್ಟು ಸುತ್ತಾಡಿ ಸೇರಿದ್ದು ಇಲ್ಲಿಗೆ..
ದೇವದಾಸ್ ಮೂಲತಃ ಹುಬ್ಬಳ್ಳಿ ಸಮೀಪದ ಉಣ್ಕಳ್ ನಿವಾಸಿ. ತಂದೆ ಜಾನ್ ದೇಸಾಯಿ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸದಲ್ಲಿದ್ದು, 1983ರಲ್ಲಿ ರಿಟೈರ್ ಆಗಿದ್ದರು. ತಂದೆಯ ಕಾಲದಲ್ಲಿಯೇ ಇವರ ಕುಟುಂಬ ಮತಾಂತರ ಆಗಿದ್ದು ಜೆಹೋವಾ ವಿಟ್ನೆಸ್ ಎಂಬ ಪಂಗಡಕ್ಕೆ ಸೇರಿದ್ದಾನೆ. ತಂದೆಗೆ ದೇವದಾಸ್ ಸೇರಿ ನಾಲ್ವರು ಮಕ್ಕಳಿದ್ದು, ಈತ ಮಾತ್ರ ಚಿಕ್ಕಮಗಳೂರು, ಕೊಡಗು, ಮಂಗಳೂರು ಹೀಗೆ ಹಲವೆಡೆ ಸುತ್ತಾಡಿಕೊಂಡಿದ್ದ. ಚಿಕ್ಕಮಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದು, 15 ವರ್ಷಗಳ ಹಿಂದೆ ಆಕೆ ಬಿಟ್ಟು ಹೋದ ಬಳಿಕ ಮಂಗಳೂರಿನಲ್ಲಿ ಒಂಟಿಯಾಗಿದ್ದ. ಕೋಟೆಕಾರು ಬಳಿಯ ಮಿತ್ರ ನಗರ ಎಂಬಲ್ಲಿ ಸ್ವಂತ ಮನೆಯನ್ನು ಮಾಡಿಕೊಂಡು ಒಬ್ಬಂಟಿಯಾಗಿಯೇ ವಾಸ ಮಾಡುತ್ತಿದ್ದಾನೆ. ಈ ಹಿಂದೆ ಮಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ದೇವದಾಸ್ ಗೆ ಮಂಗಳೂರಿನ ಗಲ್ಲಿ ಗಲ್ಲಿಯ ಪರಿಚಯ ಇದೆ. ಆನಂತರ ಗುಜಿರಿ ಹೆಕ್ಕುವ ಕೆಲಸ ಮಾಡುತ್ತಿದ್ದ. ಈಗ ಸೈಕಲ್ ನಲ್ಲಿ ಹೋಗುತ್ತಾ ಗುಜಿರಿ ಸಂಗ್ರಹಿಸಿ, ಬಂದರಿನಲ್ಲಿ ಮಾರಾಟ ಮಾಡುತ್ತಿದ್ದ. ಈ ನಡುವೆ, ಕಾಂಡೋಮ್ ಸಿಕ್ಕಿದ್ದನ್ನು ಹಗಲು, ರಾತ್ರಿ ಎನ್ನುವ ಭೇದ ಇಲ್ಲದೆ ರಸ್ತೆ ಬದಿಯ ದೈವಸ್ಥಾನದ ಕಾಣಿಕೆ ಡಬ್ಬಿಗಳಿಗೆ ಹಾಕುತ್ತಿದ್ದ.

ಏಸುವನ್ನು ಮನಸ್ಸಿಗೆ ಹಚ್ಚಿಕೊಂಡು ಮತಿಗೆಟ್ಟ !
ಬೈಬಲ್ ಮತ್ತು ಏಸುವಿನ ಬಗ್ಗೆ ವಿಶೇಷವಾಗಿ ಮನಸ್ಸಿಗೆ ಹಚ್ಚಿಕೊಂಡಿರುವ ದೇವದಾಸ್, ಯೆಹೋವನ ಸಾಕ್ಷಿಗಳ (ಜೆಹೋವಾ ವಿಟ್ನೆಸ್ ಅನ್ನುವುದು ಕ್ರಿಸ್ತಿಯನ್ನರಲ್ಲಿ ಖಟ್ಟರ್ ಪಂಗಡ) ಹೆಸರಲ್ಲಿ ಬರೆದಿದ್ದ ಬೈಬಲ್ ಪುಸ್ತಕವನ್ನು ಸದಾ ಓದುತ್ತಿದ್ದ. ಇದರಿಂದಾಗಿ ಏಸುವಿನ ಬಗ್ಗೆ ಅತಿಯಾದ ನಂಬಿಕೆ, ತನ್ನದೇ ಅತಿಶ್ರೇಷ್ಠ ದೇವರು ಎಂಬ ಮನಸ್ಥಿತಿಯಿಂದಾಗಿ ಮತಿಗೆಟ್ಟು ಈ ಕೃತ್ಯ ಮಾಡುತ್ತಿದ್ದ ಅನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದಲ್ಲದೆ, ತನ್ನ ಕೃತ್ಯಗಳ ಬಗ್ಗೆ ಯಾವುದೇ ಅಂಜಿಕೆ ಇಲ್ಲದೆ ಮಾಧ್ಯಮಕ್ಕೂ ಹೇಳಿಕೆ ನೀಡಿದ್ದಾನೆ.

ಮಂಗಳಾದೇವಿ ಸೇರಿ 18 ಕಡೆ ಹರಾಮಿ ಕೆಲಸ
ಆತನ ಹೇಳಿಕೆ ಪ್ರಕಾರ, ಮಾರ್ನಮಿಕಟ್ಟೆ ಕೊರಗಜ್ಜ ದೈವಸ್ಥಾನ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯ ರಿಕ್ಷಾ ಪಾರ್ಕ್ ಬಳಿಯಿರುವ ಕಾಣಿಕೆ ಡಬ್ಬಿ, ಪಂಪ್ವೆಲ್ ಓಮೆಗಾ ಆಸ್ಪತ್ರೆ ಬಳಿಯ ಕಲ್ಲುರ್ಟಿ ದೈವಸ್ಥಾನ, ಉಳ್ಳಾಲ ದರ್ಗಾ ಬಳಿಯ ಮಸೀದಿಯ ಕಾಣಿಕೆಡಬ್ಬಿ, ಕಲ್ಲಾಪು ನಾಗನಕಟ್ಟೆ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೈವಸ್ಥಾನದ ಕಾಣಿಕೆಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ, ನಂದಿಗುಡ್ಡೆಯ ಕೊರಗಜ್ಜನ ಗುಡಿ, ಎಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ, ಬಂಗ್ರ ಕುಳೂರಿನ ಸಿಖ್ ಗುರುದ್ವಾರ, ಮಂಕಿಸ್ಟಾಂಡ್ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಜೆಪ್ಪು ಮಹಾಕಾಳಿ ಪಡ್ಪು ಆದಿಮಹೇಶ್ವರಿ ದೇವಸ್ಥಾನ ಭಜನಾ ಮಂಡಳಿಯ ಕಾಣಿಕೆ ಡಬ್ಬಿ ಹೀಗೆ 18 ಕಡೆಗಳಲ್ಲಿ ಕಾಂಡೋಮ್, ಏಸುವಿನ ಬರಹಗಳನ್ನು ಹಾಕಿದ್ದೇನೆ ಎಂಬುದನ್ನು ದೇವದಾಸ್ ಒಪ್ಪಿಕೊಂಡಿದ್ದಾನೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ವಿಕ್ಷಿಪ್ತ ಮನಸ್ಸಿನವನಾಗಿದ್ದು, ಈತನ ಮಾನಸಿಕ ಸ್ಥಿಮಿತದ ಬಗ್ಗೆ ವೈದ್ಯರಲ್ಲಿ ವರದಿ ಪಡೆಯುತ್ತೇವೆ. ಪೊಲೀಸ್ ಕಸ್ಟಡಿ ತೆಗೆದು ಇನ್ನಷ್ಟು ವಿಚಾರಣೆ ಮಾಡಲಿದ್ದೇವೆ. ದೈವಸ್ಥಾನ ಅಪವಿತ್ರ ಪ್ರಕರಣ ಪೊಲೀಸರಿಗೆ ಬಹಳಷ್ಟು ಸವಾಲು ಸೃಷ್ಟಿಸಿತ್ತು. ಕಡೆಗೂ ಒಂದು ಸುಳಿವು ಆಧರಿಸಿ ಹೋದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿಸಿದರು.


ಆರು ತಿಂಗಳ ಹಿಂದೆ ಮಂಗಳೂರು, ಉಳ್ಳಾಲ ಸೇರಿದಂತೆ ಹಲವೆಡೆ ಕೊರಗಜ್ಜನ ಕಟ್ಟೆ ಸೇರಿ ವಿವಿಧ ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಪದೇ ಪದೇ ಕಾಂಡೋಮ್ ಪತ್ತೆ, ಏಸುವಿನ ಬರಹದ ನೋಟುಗಳು, ಏಸುವೇ ದೇವರು ಎಂಬ ಬಗ್ಗೆ ಬರೆದಿದ್ದ ಕರಪತ್ರಗಳು ದೊರಕಿದ್ದವು. ಈ ಬಗ್ಗೆ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಮಂಗಳೂರಿನಿಂದ ಉಳ್ಳಾಲಕ್ಕೆ ಕಾಲ್ನಡಿಗೆ ಯಾತ್ರೆ ಪ್ರತಿಭಟನೆಯನ್ನೂ ಮಾಡಿದ್ದವು.
ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರ ಅಪವಿತ್ರ ಯತ್ನ ; ಭಾರೀ ಆಕ್ರೋಶ
ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲೂ ಅಪಮಾನ ಕೃತ್ಯ ! ಕಾಂಡೋಮ್ ಪತ್ತೆ
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
Mangalore condoms in temple offering box in 18 places, christian Jehovah Witness member arrested. Devadas Desai (62), resident of Mitra Nagara, Kotekar of the city was taken into custody on the accusation of placing objectionable items in the offertory boxes of Daivasthanas as well as putting derogatory letters. He has confessed to all the crimes. In his self-confession, Devadas said that he is a native of Unkal in Hubballi. His wife and daughter had deserted him. He used to drive auto-rickshaw earlier. Later he bought a house at K C Road in 2006 and was living alone. As he did not have proper livelihood, he used to pick scrap paper box etc and selling the same in order to earn his livelihood.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm