ಬ್ರೇಕಿಂಗ್ ನ್ಯೂಸ್
30-12-21 10:14 am Mangalore Correspondent ಕರಾವಳಿ
ಉಳ್ಳಾಲ, ಡಿ.30 : ಕಳೆದ ಕೆಲವು ತಿಂಗಳಿಂದ ಜಿಲ್ಲೆಯ ಕಾರಣಿಕ ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವ, ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದು ಸಿಕ್ಕಿಬಿದ್ದ ದೇವದಾಸ್ ದೇಸಾಯಿ ಉಳಿದುಕೊಂಡಿದ್ದ ಕೋಟೆಕಾರಿನ ಮನೆಗೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ.
ಮಂಗಳೂರು ಆಸುಪಾಸಿನ ಕೊರಗಜ್ಜನ ಕ್ಷೇತ್ರ ಸೇರಿದಂತೆ ದೈವ, ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಮಿಷನರಿ ಪ್ರೇರಿತ ಕರಪತ್ರಗಳನ್ನ ಇರಿಸಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಹುಬ್ಬಳ್ಳಿ ಮೂಲದ ದೇವದಾಸ್ ದೇಸಾಯಿಯನ್ನ ಪೊಲೀಸರು ಬಂಧಿಸಿದ್ದರು. ಕ್ರೈಸ್ತನಾಗಿ ಮತಾಂತರಗೊಂಡಿದ್ದ ದೇವದಾಸ್ ಕೋಟೆಕಾರು ಗ್ರಾಮದ ಮಿತ್ರನಗರ ಎಂಬಲ್ಲಿ ಮನೆ ಹೊಂದಿದ್ದು ಒಬ್ಬಂಟಿಯಾಗಿ ವಾಸಿಸುತ್ತಿದ್ದ.
ಕೊರಗಜ್ಜ ದೈವಕ್ಕೆ ನಿರಂತರ ಅಪಚಾರ ಎಸಗುತ್ತಿದ್ದ ಆರೋಪಿ ದೇವದಾಸ್ ಬಂಧನವಾಗುತ್ತಿದ್ದಂತೆ ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು. ನಿನ್ನೆ ಸಂಜೆ ಮಿತ್ರನಗರದಲ್ಲಿರುವ ದೇವದಾಸ್ ಮನೆಗೆ ಉದ್ರಿಕ್ತ ಹಿಂದು ಕಾರ್ಯಕರ್ತರು ಕಲ್ಲೆಸೆದಿದ್ದು ಮನೆಯ ಆವರಣ ಗೋಡೆಯ ಸಿಮೆಂಟ್ ನಿರ್ಮಿತ ಗೋಲದ ಆಕೃತಿಯನ್ನ ಪುಡಿಗೈದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉಳ್ಳಾಲ ಪೊಲೀಸ್ ಠಾಣಾ ಪಿಐ ಸಂದೀಪ್, ಪಿಎಸ್ ಐ ಪ್ರದೀಪ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಆರೋಪಿ ದೇವದಾಸ್ ಮನೆಗೆ ಬಂದೋಬಸ್ತ್ ನೀಡಿದ್ದಾರೆ. ಆರೋಪಿ ದೇವದಾಸನ್ನ ಮಹಜರಿಗಾಗಿ ಮನೆಗೆ ಕರೆತರುವ ಬಗ್ಗೆ ಸ್ಥಳೀಯರಿಗೆ ತಿಳಿದಿದ್ದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಪೊಲೀಸರು ಎಲ್ಲರನ್ನೂ ಚದುರಿಸಿದ್ದಾರೆ.
Condoms in temples of Mangalore VHP pelt stones to the house of accused at Kotekar. Mangalore condoms in temple offering box in 18 places, christian Jehovah Witness member arrested. Devadas Desai (62), resident of Mitra Nagara, Kotekar of the city was taken into custody on the accusation of placing objectionable items in the offertory boxes of Daivasthanas as well as putting derogatory letters. He has confessed to all the crimes. In his self-confession, Devadas said that he is a native of Unkal in Hubballi. His wife and daughter had deserted him. He used to drive auto-rickshaw earlier. Later he bought a house at K C Road in 2006 and was living alone. As he did not have proper livelihood, he used to pick scrap paper box etc and selling the same in order to earn his livelihood.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm