ಕೊರಗಜ್ಜನಿಗೆ ಅಪಮಾನ ಪ್ರಕರಣ ; ಮತ್ತಿಬ್ಬರ ಬಂಧಿಸಿದ ಪೊಲೀಸರು, ವಿಟ್ಲ ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್, ಹಿಂದು ಸಂಘಟನೆಗಳ ಪ್ರತಿಭಟನೆ  

11-01-22 12:48 pm       Mangalore Correspondent   ಕರಾವಳಿ

ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನಿಸಲಾಗಿದೆ ಎಂಬ ಪ್ರಕರಣದಲ್ಲಿ ವಿಟ್ಲ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳ, ಜ.11 : ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನಿಸಲಾಗಿದೆ ಎಂಬ ಪ್ರಕರಣದಲ್ಲಿ ವಿಟ್ಲ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ ಅಹಮ್ಮದ್ ಮುಜ್ತಾಬ್(28), ಬಾಯಾರು ಪದವು ನಿವಾಸಿ ಮೊಯ್ದೀನ್ ಮನೀಶ್ (19) ಎಂದು ಗುರುತಿಸಲಾಗಿದೆ.

ಜ.6ರಂದು ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಅಜೀಜ್ ಎಂಬವರ ಮಗಳ ಮದುವೆ ಸಂಭ್ರಮದಲ್ಲಿ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ಕೊರಗಜ್ಜನ ರೀತಿ ವೇಷ ಧರಿಸಿ, ಇತರ ಯುವಕರ ಜೊತೆ ಕುಣಿಯುತ್ತಾ ಬಂದಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಿಂದು ಸಂಘಟನೆಗಳು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಆರೋಪಿತರ ಬಂಧನಕ್ಕೆ ಒತ್ತಾಯಿಸಿತ್ತು. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರಿಂದ ಮದುಮಗ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮರುದಿನ ಮದುಮಗ ಬಾಷಿತ್ ತಮ್ಮ ಅರ್ಷದ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬಿಜೆಪಿ ಅಲ್ಪಸಂಖ್ಯಾತ ಮುಖಂಡನ ನೆರವಿನಿಂದ ಅದೇ ದಿನ ರಾತ್ರಿ ಸ್ಟೇಶನ್ ಜಾಮೀನಲ್ಲಿ ಬಿಡುಗಡೆಯಾಗಿದ್ದ. ಈಗ ಮದುಮಗ ಸೇರಿದಂತೆ ವಿಡಿಯೋದಲ್ಲಿ ದಾಖಲಾಗಿದ್ದ ಇತರ ಯುವಕರ ಶೋಧಕ್ಕೆ ಪೊಲೀಸರು ತೊಡಗಿದ್ದಾರೆ.

ವಿಟ್ಲ ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್

ಇದೇ ವೇಳೆ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯಿಂದ ವಿಟ್ಲ ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲು ಕರೆ ನೀಡಲಾಗಿತ್ತು. ಅದರಂತೆ, ಮಂಗಳವಾರ ಬೆಳಗ್ಗೆ 10ರಿಂದ 11 ಗಂಟೆ ವರೆಗೆ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದ ವ್ಯಾಪಾರಸ್ಥರು, ಅಂಗಡಿಗಳು ಒಂದು ಗಂಟೆ ಕಾಲ ಬಂದ್ ನಡೆಸಿ, ಬೆಂಬಲ ಸೂಚಿಸಿದ್ದಾರೆ. ಆಟೋ, ಟ್ಯಾಕ್ಸಿ, ಬಸ್ ಇನ್ನಿತರ ಎಲ್ಲ ವಾಹನಗಳನ್ನೂ ವಿಟ್ಲ ಪೇಟೆಯಲ್ಲಿ ಸ್ಥಗಿತ ಮಾಡಲಾಗಿತ್ತು. ಈ ವೇಳೆ, ಹಿಂದು ಸಂಘಟನೆಯ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ 

ಮುಸ್ಲಿಂ ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ ;  ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ, ಬಂಧನ

ಅಪಹಾಸ್ಯದ ಬಗ್ಗೆ ಕೊರಗಜ್ಜನಿಗೆ ದೂರು ; ಯಾವ ರೀತಿ  ಕುಣಿಸಿದ್ದಾರೋ ಅದೇ ರೀತಿ ಬೀದಿಯಲ್ಲಿ ಅಲೆದಾಡಿಸುತ್ತೇನೆ !

ಕೊರಗಜ್ಜನಿಗೆ ಅಪಮಾನ, ಆರೋಪಿಗೆ ಸಹಕರಿಸಿದ ಬಿಜೆಪಿ ಅಲ್ಪಸಂಖ್ಯಾತ ಮುಖಂಡನಿಗೆ ಗೇಟ್ ಪಾಸ್ ; ಪಕ್ಷ ಸಿದ್ಧಾಂತ ಮೀರಿದ್ದಕ್ಕೆ ಉಚ್ಚಾಟನೆ ಶಿಕ್ಷೆ !

The police personnel of Vittal station have arrested two persons relating to the allegation of presenting themselves in the form of Koragajja, a revered divine force in whom the Tulunadu people repose faith in, and doing things which allegedly were sacrilegious in nature, have arrested two persons. The incident reportedly had took place in Salethur within the limits of Vittal police station last week.