ಬ್ರೇಕಿಂಗ್ ನ್ಯೂಸ್
24-01-22 10:02 pm Mangalore Correspondent ಕರಾವಳಿ
ಮಂಗಳೂರು, ಜ.24 : ಭರತನಾಟ್ಯ ಸೇರಿದಂತೆ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯಲ್ಲಿ ನಾಟ್ಯ ಮಾಡುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲೇ ಜಗತ್ತಿನ ಗಮನ ಸೆಳೆದಿರುವ ಮಂಗಳೂರಿನ ಹೆಸರಾಂತ ನಾಟ್ಯಗಾತಿ ರೆಮೋನಾ ಎವೆಟ್ ಪಿರೇರಾ ಅವರನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ವರ್ಚುವಲ್ ಮಾಧ್ಯಮದ ಮೂಲಕ ಬಾಲ ಕಲಾವಿದೆಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ದೆಹಲಿಯಿಂದ ನೇರವಾಗಿ ಮಂಗಳೂರಿನ ಜಿಪಂ ಸಭಾಂಗಣದಲ್ಲಿ ಕುಳಿತಿದ್ದ 17 ವರ್ಷದ ಬಾಲ ಕಲಾವಿದೆ ರೆಮೋನಾ ಅವರನ್ನು ಪ್ರಧಾನಿ ಮೋದಿ ವರ್ಚುವಲ್ ಮೂಲಕ ಮಾತನಾಡಿಸಿದ್ದು, ಸಣ್ಣ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆ ಮಾಡಿರುವುದಕ್ಕಾಗಿ ಅಭಿನಂದಿಸಿದ್ದಾರೆ. ಕೂಚಿಪುಡಿ, ಕಥಕ್, ಸೆಮಿ ಕ್ಲಾಸಿಕಲ್, ಪಾಶ್ಚಾತ್ಯ, ಯಕ್ಷಗಾನ ಹೀಗೆ ನಾನಾ ರೀತಿಯ ನಾಟ್ಯ ಪ್ರಕಾರಗಳನ್ನು ಮಾಡುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಿಟ್ಟಿಸಿರುವ ರೆಮೋನಾ ಮುಂಬೈ, ಹೈದರಾಬಾದ್, ಬೆಂಗಳೂರು, ಪುಣೆ, ದೆಹಲಿ ಹೀಗೆ ದೇಶದ ಬಹುತೇಕ ನಗರಗಳಲ್ಲಿ ಸ್ಟೇಜ್ ಪ್ರೋಗ್ರಾಮ್ ನೀಡಿದ್ದಾರೆ. ತಮ್ಮ ಅಪೂರ್ವ ರೀತಿಯ ನಾಟ್ಯಗಳಿಂದಾಗಿ ಜನ ಮೆಚ್ಚುಗೆ ಪಡೆದಿದ್ದಾರೆ.
ಗಾಜಿನ ಮೇಲೆ ಅತ್ಯಂತ ನಾಜೂಕಿನಿಂದ ನೃತ್ಯ ಮಾಡುವ ಮೂಲಕ ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಗಾಜಿನ ಮೇಲಿನ ನಾಟ್ಯದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದು, ಆಕೆಯನ್ನು ಈ ಮಟ್ಟಿಗೆ ಬೆಳೆಸಿದ್ದಕ್ಕಾಗಿ ತಾಯಿ ಗ್ಲಾಡಿಸ್ ಸೆಲಿನ್ ಅವರನ್ನು ಪ್ರಶಂಸಿಸಿದ್ದಾರೆ. 2019ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿರುವ ರೆಮೋನಾ, ಸದ್ಯ ಶ್ರೀವಿದ್ಯಾ ಕಲಾ ಪರಿಷತ್ತಿನ ಶ್ರೀವಿದ್ಯಾ ಮುರಲೀಧರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ನಾಟ್ಯ ಪ್ರಕಾರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ತಾಯಿ ಗ್ಲಾಡಿಸ್ ಅವರು ಮಗಳಿಗೆ ಮೂರೂವರೆ ವಯಸ್ಸಿನಿಂದಲೇ ಭರತ ನಾಟ್ಯದ ಹೆಜ್ಜೆಗಳನ್ನು ಕಲಿಸಿಕೊಟ್ಟಿದ್ದರು. ಆಬಳಿಕ ಪ್ರಮೋದ್ ಕೋಡಿಕಲ್, ಪ್ರೀತೇಶ್ ಕುಮಾರ್, ನಿಕಿ ಪಿಂಟೋ, ಮನೋಜ್ ಕರಿಪಳ್ಳ, ಸಂಧ್ಯಾ ಕೆ. ಅವರಿಂದ ನಾಟ್ಯ ಪ್ರಕಾರಗಳನ್ನು ಕಲಿತಿದ್ದರು. ನಂತೂರಿನ ಪದುವಾ ಕಾಲೇಜಿನಲ್ಲಿ ಪಿಯು ಕಲಿಯುತ್ತಿರುವ ರೆಮೋನಾ ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದು, ಗ್ಲಾಡಿಸ್ ಸೆಲಿನ್ ಮತ್ತು ದಿ. ಎವರೆಸ್ಟ್ ಪಿರೇರಾ ದಂಪತಿಯ ಹಿರಿಯ ಪುತ್ರಿ. ಇನ್ನೊಬ್ಬ ಪುತ್ರ ರೊನಾಲ್ಡೋ ರಾಕ್ಸನ್ ಹೈಸ್ಕೂಲ್ ಓದುತ್ತಿದ್ದಾನೆ.
ನೀವು ನೃತ್ಯ ಕಲಿತಿದ್ದು ನಿಮ್ಮ ಇಷ್ಟದಿಂದಲೋ, ಮನೆಯವರ ಇಚ್ಚೆಯಿಂದಲೋ ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ, ನನ್ನ ತಾಯಿಗೆ ನೃತ್ಯದ ಬಗ್ಗೆ ಆಸಕ್ತಿ ಇದ್ದುದರಿಂದ ಸಣ್ಣಂದಿನಿಂದಲೇ ನೃತ್ಯ ಕಲಿಸುತ್ತಿದ್ದರು. ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ವಿಶ್ವಾದ್ಯಂತ ಪಸರಿಸುವುದು ನನ್ನ ಗುರಿಯಾಗಿದೆ ಎಂದು ರೆಮೋನಾ ಉತ್ತರಿಸಿದರು. ತನಗೆದುರಾದ ಸವಾಲುಗಳ ಬಗ್ಗೆ ಹೇಳಿದ ರೆಮೋನಾ, ತಂದೆ ನಿಧನರಾದ ಬಳಿಕ ನನಗೆ ಮತ್ತು ಸೋದರನಿಗೆ ಶಿಕ್ಷಣ ಕೊಡಿಸುವುದು ತಾಯಿಗೆ ಕಷ್ಟವಾಗಿತ್ತು. ಆದರೆ ಅದರ ನಡುವಲ್ಲೂ ನನ್ನನ್ನು ನೃತ್ಯ ಶಾಲೆಗೆ ಸೇರಿಸಿ, ಕಲಿಸಿದರು. ನನ್ನ ತಾಯಿ ಹಾಗೂ ಗುರುಗಳಿಗೆ ನೃತ್ಯ ಮೂಲಕ ಒಳ್ಳೆಯ ಹೆಸರು ತರಬೇಕು ಅನ್ನುವ ಆಸೆಯಿತ್ತು. ಅದಕ್ಕಾಗಿ ಅತೀವ ಶ್ರಮದಿಂದ ನೃತ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದರು.
ಬಾಲ ಪುರಸ್ಕಾರದ ನಗದು ಮೊತ್ತ ಒಂದು ಲಕ್ಷ ರೂ.ವನ್ನು ರೆಮೋನಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಬಾಲ ಪುರಸ್ಕಾರ ಕಾರ್ಯಕ್ರಮದ ಬಳಿಕ ಜಿಪಂ ಸಭಾಂಗಣದಲ್ಲಿ ದ.ಕ. ಜಿಪಂ ಸಿಇಓ ಡಾ.ಕುಮಾರ್ ಅವರು, ರೆಮೋನಾ ಮತ್ತು ಕಳೆಯದ ಬಾರಿ ಬಾಲ ಪುರಸ್ಕಾರ ಪಡೆದ ರಾಕೇಶ್ ಕೃಷ್ಣ ಅವರನ್ನು ಸನ್ಮಾನಿಸಿದರು.
Pradhan Manthri Rashtriya Bal Puraskar award was presented to Remona Evette Pereira for her exceptional achievements in the field of art and culture. A virtual interaction with Prime Minister Narendra Modi was held at zilla panchayat on Monday January 24. Remona is being trained in semi-classical dance for the past eight years by Manoj Karipalla and Sandhya K. She is also being trained in western, contemporary by Pramod Kodikal Preethesh Kumar and Nicky Pinto.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm