ಬ್ರೇಕಿಂಗ್ ನ್ಯೂಸ್
26-01-22 10:50 pm Mangalore Correspondent ಕರಾವಳಿ
ಮಂಗಳೂರು, ಜ.26 : ನಾರಾಯಣ ಗುರುಗಳಿಗೆ ಅವಮಾನ ಆಗಿದೆಯೆಂದು ಬಿಲ್ಲವ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ನಾಯಕರು, ವಿವಿಧ ಸಂಘಟನೆಗಳು ಸೇರಿಕೊಂಡು ಜನವರಿ 26ರ ಗಣರಾಜ್ಯ ದಿನವೇ ಮಂಗಳೂರಿನಲ್ಲಿ ಸ್ವಾಭಿಮಾನಿ ನಡಿಗೆಯ ಯಾತ್ರೆ ನಡೆಸಿದ್ದು, ಕೇಂದ್ರ ಸರಕಾರಕ್ಕೆ ಎಚ್ಚರಿಕೆ ರವಾನಿಸಿದೆ.
ಕಾಂಗ್ರೆಸ್ ವತಿಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಗರೋಡಿ ಕ್ಷೇತ್ರದಲ್ಲಿ ನಾರಾಯಣ ಗುರುಗಳಿಗೆ ಪ್ರಾರ್ಥನೆ ನೆರವೇರಿಸಿ, ಟ್ಯಾಬ್ಲೋ ಆರಂಭಿಸಲಾಗಿತ್ತು. ಆ ಟ್ಯಾಬ್ಲೋ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸುತ್ತಾಡಿ, ಸಂಜೆ ಉರ್ವಾ ಸ್ಟೋರಿಗೆ ಬಂದಿದ್ದು ಅಲ್ಲಿಂದ ಕಾಂಗ್ರೆಸ್ ನಾಯಕರು ಕಾಲ್ನಡಿಗೆಯಲ್ಲಿ ಕುದ್ರೋಳಿಗೆ ಆಗಮಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಬಿಲ್ಲವ ಸಂಘಟನೆಗಳ ನಾರಾಯಣ ಗುರು ಟ್ಯಾಬ್ಲೋ ಮಧ್ಯಾಹ್ನ ಮೂರು ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರ ತಲುಪಿದ್ದು, ಅಲ್ಲಿಂದ ನಗರದಲ್ಲಿ ಸಂಚರಿಸುತ್ತಾ ಸಂಜೆ ಐದು ಗಂಟೆ ಸುಮಾರಿಗೆ ಲಾಲ್ ಬಾಗಿನತ್ತ ಬಂದಿದೆ. ಅತ್ತ ಕಾಂಗ್ರೆಸಿಗರ ಕಾಲ್ನಡಿಗೆ ಯಾತ್ರೆ, ಇತ್ತ ಬಿಲ್ಲವ ಸಂಘಟನೆಗಳ ಸ್ತಬ್ಥಚಿತ್ರ ಮೆರವಣಿಗೆ ಎಲ್ಲವೂ ಲೇಡಿಹಿಲ್ ಸರ್ಕಲ್ ನಲ್ಲಿ ಒಂದಾಗಿದ್ದು ಅಲ್ಲಿಂದ ಕಾಲ್ನಡಿಗೆಯಲ್ಲಿ ಬಿಲ್ಲವ ಸಂಘಟನೆಗಳ ಯುವಕರು ಮತ್ತು ಕಾಂಗ್ರೆಸ್ ನಾಯಕರು ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಸಂಜೆ ಏಳು ಗಂಟೆ ಸುಮಾರಿಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದು ಅಲ್ಲಿ ನಾರಾಯಣ ಗುರುಗಳಿಗೆ ಪೂಜೆ ನಡೆಸಲಾಗಿದೆ. ಬಿಲ್ಲವ ಸಂಘಟನೆಗಳ ನಾಯಕರು ಸೇರಿದಂತೆ ಎಲ್ಲರೂ ಅಲ್ಲಿ ಪ್ರಾರ್ಥನೆ ನೆರವೇರಿಸಿದ್ದಾರೆ. ಕೊನೆಗೆ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಸ್ವಾಭಿಮಾನದ ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಲಿದ್ದಾರೆಂದು ಬಿಲ್ಲವ ನಾಯಕರು ಸೂಚನೆ ನೀಡಿದ್ದು, ಹೊರಾಂಗಣದಲ್ಲಿ ಎಲ್ಲರನ್ನೂ ಸೇರುವಂತೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಹೊರಾಂಗಣದಲ್ಲಿ ಸೇರಿದ್ದರು.
ಮೈಕ್ ಹಿಡಿದು ಅತ್ತುಬಿಟ್ಟ ಪೂಜಾರಿ
ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಜೆಆರ್ ಲೋಬೊ, ಐವಾನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಸೇರಿದ್ದರು. ಕೊನೆಗೆ ಪೂಜಾರಿಯವರಿಗೆ ಮೈಕ್ ಕೊಟ್ಟು ಧನ್ಯವಾದ ಹೇಳುತ್ತಾರೆಂದು ಪ್ರಕಟಿಸಿದ್ದಾರೆ. ಆದರೆ ವಯಸ್ಸಿನ ಕಾರಣದಿಂದ ಬಳಲುತ್ತಿರುವ ಜನಾರ್ದನ ಪೂಜಾರಿಯವರು ಮೈಕ್ ಹಿಡಿದು ಅತ್ತರು. ಬಳಿಕ ಎಲ್ಲರಲ್ಲೂ ಕ್ಷಮೆ ಯಾಚಿಸಿ, ನಿಮ್ಮಲ್ಲಿ ಅನಾರೋಗ್ಯದಿಂದಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿ ಮಾತನಾಡುತ್ತೇನೆ ಎಂದು ಹೇಳಿ ಮೈಕ್ ನೀಡಿದರು.
ಪೂಜಾರಿಯವರಲ್ಲಿ ನಾರಾಯಣ ಗುರುಗಳನ್ನು ಕಾಣುತ್ತೇವೆ
ಆನಂತರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ನಾರಾಯಣ ಗುರುಗಳನ್ನು ನಾವು ನೋಡಿಲ್ಲ. ಗುರುಗಳನ್ನು ನಾವು ಈಗ ಜನಾರ್ದನ ಪೂಜಾರಿಯವರಲ್ಲಿ ಕಾಣುತ್ತಿದ್ದೇವೆ. ಅವರ ಕರೆಯಂತೆ ನಾವು ಇವತ್ತು ಸೇರಿದ್ದೇವೆ. ನಮಗೆಲ್ಲ ಅವರೇ ನಾರಾಯಣ ಗುರುಗಳು. ಅವರು ಮಾಡಿದ ಕಾರ್ಯಗಳೇ ನಾರಾಯಣ ಗುರುಗಳ ಆದರ್ಶದ ಪಾಲನೆ. ದೇವಸ್ಥಾನದಲ್ಲಿ ಮಾಡಿರುವ ಕ್ರಾಂತಿಕಾರಿ ನಡೆಗಳೇ ಗುರುಗಳ ತತ್ವ ಪಾಲನೆಯಾಗಿತ್ತು ಎಂದರು.
ನಾರಾಯಣ ಗುರು ಬೇಡ ಎಂದಿದ್ದು ನೋವು ತಂದಿದೆ
ಆದರೆ, ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ನಿರಾಕರಿಸಿ ಶಂಕರಾಚಾರ್ಯರ ಪ್ರತಿಮೆ ಜೋಡಿಸುವಂತೆ ಕೇಂದ್ರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಹೇಳಿದ್ದು ನಮಗೆಲ್ಲ ನೋವು ತಂದಿದೆ. ಶಂಕರಾಚಾರ್ಯರು ಬೋಧಿಸಿದ ಅದ್ವೈತ ಸಿದ್ಧಾಂತವನ್ನು ಅನುಷ್ಠಾನಕ್ಕೆ ತಂದವರು ನಾರಾಯಣ ಗುರುಗಳು. ಅಂಥವರನ್ನು ಕೀಳಾಗಿ ನೋಡಿದ್ದು ಗುರುಗಳ ಅನುಯಾಯಿಗಳಿಗೆ ನೋವು ನೀಡಿದೆ. ಶಂಕರಾಚಾರ್ಯರ ಬಗ್ಗೆ ಗೌರವ ಇದೆ, ಹಾಗೆಂದು ತಜ್ಞರ ಸಮಿತಿ ಗುರುಗಳನ್ನು ಕೀಳಾಗಿಸಿದ್ದು ಸರಿಯಲ್ಲ. ಆ ನೋವನ್ನು ತೋರಿಸುವ ಸಲುವಾಗಿ ನಾವು ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು ಮತ, ರಾಜಕೀಯ ಭೇದ ಮರೆತು ಪಾಲ್ಗೊಂಡ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮ ಸಂಘಟಿಸಿದ ಸತ್ಯಜಿತ್ ಸುರತ್ಕಲ್ ಸೇರಿದಂತೆ ಬಿಲ್ಲವ ನಾಯಕರು ಉಪಸ್ಥಿತರಿದ್ದರು. ಬಿಜೆಪಿ, ಸಂಘ ಪರಿವಾರದ ಇತರ ನಾಯಕರು ಸ್ವಾಭಿಮಾನದ ನಡಿಗೆ ಯಾತ್ರೆಗೆ ಬೆಂಬಲ ಘೋಷಿಸಿದ್ದರೂ, ಯಾವುದೇ ನಾಯಕ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ.
Mangalore Narayana Guru Tableau row protest and really held by Congress leader Janardhan Poojary
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm