ಯಕ್ಷಗಾನ ವೇಷಧಾರಿ ಮೇಲೆ ದೈವದ ಆವೇಶ ; ದೀವಟಿಗೆ ಹಿಡಿದು ಆರ್ಭಟಿಸಿದ ಕೋಟೆರಾಯ ಪಾತ್ರಧಾರಿ ! 

28-01-22 02:24 pm       HK Desk news   ಕರಾವಳಿ

ಯಕ್ಷಗಾನದ ನಡೆಯುತ್ತಿದ್ದಾಗ ವೇಷಧಾರಿಗೆ, ಮೈಮೇಲೆ ದೈವದ ಆವೇಶ ಬಂದು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.  

ಉಡುಪಿ, ಜ.28 : ಯಕ್ಷಗಾನದ ನಡೆಯುತ್ತಿದ್ದಾಗ ವೇಷಧಾರಿಗೆ, ಮೈಮೇಲೆ ದೈವದ ಆವೇಶ ಬಂದು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.  

ಹೆಬ್ರಿ ಸಮೀಪದ ಬೆಪ್ದೆ ಎಂಬಲ್ಲಿ ಗುರುವಾರ ರಾತ್ರಿ ಮಡಾಮಕ್ಕಿ ಮೇಳದವರಿಂದ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯುತ್ತಿತ್ತು. ಮೇಳದ ಕಲಾವಿದ ವೀರಭದ್ರ ಸ್ವಾಮಿ ಎಂಬವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದಂತೆ, ದೈವದ ಆವೇಶ ಆಗಿದೆ. ಐದು ನಿಮಿಷದ ವರೆಗೆ ಪ್ರೇಕ್ಷಕರು ಪಾತ್ರಧಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ.‌ ಕೈಯಲ್ಲಿದ್ದ ದೀವಟಿಗೆ ಹಿಡಿದುಕೊಂಡು ಆವೇಶ ತೋರಿದ ಪ್ರಸಂಗ ನಡೆದಿದೆ. 

ಕೊನೆಗೆ ಚೌಕಿಯಿಂದ ದೇವರ ತೀರ್ಥ ತಂದು ಪ್ರೋಕ್ಷಣೆ ಮಾಡಿದಾಗ ಕಲಾವಿದ ಕೈಯಲ್ಲಿದ್ದ ದೀವಟಿಗೆಯ ಮೇಲಿನ ಹಿಡಿತ ಸಡಿಲಿಸಿದ್ದಾನೆ. ಆನಂತರ ಹಿಡಿತ ಕೈಬಿಟ್ಟು ನೆಲಕ್ಕೆ ಒರಗಿದ್ದಾರೆ. ಸಾಮಾನ್ಯವಾಗಿ ದೈವದ ಆವೇಶ ಬಂದವರ ರೀತಿಯಲ್ಲೇ ಯಕ್ಷಗಾನ ಪಾತ್ರಧಾರಿ ವರ್ತಿಸಿದ್ದಾರೆ. ಘಟನೆಯನ್ನು ಅಲ್ಲಿದ್ದ ಪ್ರೇಕ್ಷಕರೊಬ್ಬರು ಮೊಬೈಲ್‌‌ನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Video, Udupi Daiva arrives upon yakshagana artist during play at Udupi. The video of this has gone viral on Social Media.