ಬ್ರೇಕಿಂಗ್ ನ್ಯೂಸ್
28-01-22 08:45 pm Mangalore Correspondent ಕರಾವಳಿ
ಮಂಗಳೂರು, ಜ.28 : ನಾರಾಯಣ ಗುರುಗಳಿಗೆ ಮಾಡಿರುವ ಅವಮಾನವನ್ನು ಬಿಲ್ಲವ ಸಮಾಜ ಎಂದೂ ಮರೆಯುವುದಿಲ್ಲ. ಅಸಮಾನತೆ, ಮೇಲ್ವರ್ಗದವರ ತುಳಿತದ ವಿರುದ್ಧ ನಾರಾಯಣ ಗುರುಗಳು ಹೋರಾಟ ಮಾಡಿದ್ದರು. ಅದೇ ರೀತಿಯ ಹೋರಾಟವನ್ನು ನಾವು ಈಗ ಆರಂಭಿಸಿದ್ದೇವೆ. ಬಿಲ್ಲವ ಸಮುದಾಯದ ಪರ ಹೋರಾಟವಾಗಿದ್ದು ಇದು ಆರಂಭ ಅಷ್ಟೇ. ಸಮುದಾಯದ ಕಲ್ಯಾಣಕ್ಕಾಗಿ ಈ ಹೋರಾಟ ನಿರಂತರ ಇರಲಿದೆ ಎಂದು ವಕೀಲ, ಬಿಲ್ಲವ ಮುಖಂಡ, ಕುದ್ರೋಳಿ ದೇವಸ್ಥಾನದ ಟ್ರಸ್ಟಿ ಪದ್ಮರಾಜ್ ಆರ್. ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ನಮ್ಮದು ಜಾಗೃತಿಯ ನಡಿಗೆಯಾಗಿತ್ತು. ಅದು ಯಾವುದೇ ಸರಕಾರದ ಅಥವಾ ಪಕ್ಷದ ವಿರುದ್ಧ ಅಲ್ಲ. ಗುರುಗಳ ಸ್ವಾಭಿಮಾನವನ್ನು ಎತ್ತಿಹಿಡಿಯುವ ಪ್ರಯತ್ನ ಅಷ್ಟೇ. ಇದರಲ್ಲಿ ಮತ, ರಾಜಕೀಯ ಭೇದ ಮರೆತು ಎಲ್ಲರೂ ಭಾಗಿಯಾಗಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಹಿರಿಯರಾದ ಜನಾರ್ದನ ಪೂಜಾರಿಯವರ ಕರೆಗೆ ಓಗೊಟ್ಟು ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲೆಯ ಎಲ್ಲ ಕಡೆಯಿಂದ ಬಿಲ್ಲವ ಸಂಘಟನೆಗಳ ನಾಯಕರು ಬಂದಿದ್ದಾರೆ. ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಬಂದಿದ್ದಾರೆ. ಆದರೆ ಕೆಲವು ವಿಘ್ನ ಸಂತೋಷಿಗಳು ಸ್ವಾಭಿಮಾನದ ನಡಿಗೆಗೆ ರಾಜಕೀಯ ಲೇಪ ಹಚ್ಚಲು ಯತ್ನಿಸಿದ್ದಾರೆ. ಅವರಿಗೆ ನಾರಾಯಣ ಗುರುಗಳೇ ಒಳ್ಳೆ ಬುದ್ಧಿ ಕೊಡಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸತ್ಯಜಿತ್ ಸುರತ್ಕಲ್ ಮಾತನಾಡಿ, ಕರಾವಳಿ ಸೇರಿದಂತೆ ರಾಜ್ಯದ ನಾಲ್ಕಾರು ಜಿಲ್ಲೆಗಳಲ್ಲಿ ಬಿಲ್ಲವ, ಈಳವ, ತೀಯಾ, ದೇವಾಂಗ ಸೇರಿದಂತೆ ನಾರಾಯಣ ಗುರುಗಳನ್ನು ತಮ್ಮ ಕುಲಗುರುವೆಂದು ನಂಬುವ ಸುಮಾರು 20ಕ್ಕೂ ಜಾತಿಗಳಲ್ಲಿ ಗುರುತಿಸಿಕೊಂಡವರಿದ್ದಾರೆ. ಸುಮಾರು 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾರಾಯಣ ಗುರುಗಳನ್ನು ನಿರಾಕರಣೆ ಮಾಡಿದ್ದು ಈ ಜನರಿಗೆ ಮಾಡಿದ ಅವಮಾನ. ನಾರಾಯಣ ಗುರುಗಳು ಕೇವಲ ಜಾತಿಗೆ ಸೀಮಿತರಾದವರಲ್ಲ. ಇಡೀ ಹಿಂದು ಸಮಾಜಕ್ಕೆ ಸೇರಿದವರು. ಈ ರೀತಿಯ ಅನ್ಯಾಯ ಆಗಿದ್ದರೂ, ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಅಧಿಕಾರದಲ್ಲಿದ್ದವರು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದರು.
ರಾಜ್ಯದಲ್ಲಿ ಒಬ್ಬೊಬ್ಬರು ತಮಗೆ ತೋಚಿದಂತೆ ಹೇಳಿಕೆ ನೀಡಿ ಸಮರ್ಥನೆ ನೀಡಲು ಯತ್ನಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರೇ 13 ವರ್ಷಗಳಿಂದ ಟ್ಯಾಬ್ಲೋ ಪಾಲ್ಗೊಳ್ಳುತ್ತಿರುವ ಬಗ್ಗೆ ಟ್ವೀಟ್ ಮಾಡಿ, ಆನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಈ ಸಮುದಾಯಕ್ಕೆ ಸೇರಿದ ಸುನಿಲ್ ಕುಮಾರ್ ಮೂರು ವರ್ಷಗಳಿಗೊಮ್ಮೆ ರಾಜ್ಯಗಳಿಗೆ ಅವಕಾಶ ಎನ್ನುವ ಮೂಲಕ ಹೊಸ ಶೋಧನೆಯನ್ನು ಮಾಡಿದ್ದರು. ಇದು ಮೂರು ಬಾರಿ ಶಾಸಕರಾಗಿರುವವರ ಪ್ರಬುದ್ಧತೆ ಮತ್ತು ಸಣ್ಣತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಇದರ ಹಿಂದೆ ರಾಜಕೀಯ ಉದ್ದೇಶ ಇದೆಯೇ, ನಾರಾಯಣ ಗುರುಗಳ ಸಾಮಾಜಿಕ ನ್ಯಾಯದ ಹೋರಾಟ ಅನ್ನುವುದು ರಾಜಕೀಯ ಪ್ರಾತಿನಿಧ್ಯ ಇಲ್ಲದೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸತ್ಯಜಿತ್, ನಮ್ಮ ಹೋರಾಟದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ನಮ್ಮದು ಕೇವಲ ಸಮುದಾಯದ ಏಳ್ಗೆ, ಸಮಾಜದ ಹಿಂದುಳಿದವರ ಅಭಿವೃದ್ಧಿಗಾಗಿ ಹೋರಾಟ ಮಾತ್ರ. ಬಿಲ್ಲವರಿಗೆ ಪ್ರತ್ಯೇಕ ನಿಗಮ ಆಗಬೇಕು. ಅದರ ಮೂಲಕ ಇತರ ಸಮುದಾಯಗಳಿಗೆ ನೀಡಿದಂತೆ 500 ಕೋಟಿ ಅನುದಾನ ನೀಡಬೇಕು. ನಾರಾಯಣ ಗುರುಗಳ ಪ್ರತಿಮೆಯನ್ನು ಸಂಸತ್ತಿನ ಮುಂದೆ ಪ್ರತಿಷ್ಠಾಪಿಸಬೇಕು ಅನ್ನುವುದು ನಮ್ಮ ಬೇಡಿಕೆ. ಬ್ರಾಹ್ಮಣ, ಮರಾಠರು, ಲಿಂಗಾಯತ ಹೀಗೆ ಜಾತಿಗೊಂದು ನಿಗಮ ಸ್ಥಾಪಿಸಿದ್ದರೆ, ಬಿಲ್ಲವರಿಗೆ ಯಾಕೆ ಸಾಧ್ಯವಿಲ್ಲ. ಬಿಲ್ಲವ ಸಮಾಜ ಪ್ರಬಲ ಇದೆ. ಈ ಬಗ್ಗೆ ಹಲವು ಬಾರಿ ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೆ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಿದರು.
Mangalore Our fight for justice to Narayana Guru will continue says Satyajit Surathkal.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm