ಉಳ್ಳಾಲ ರಾಜರಸ್ತೆಗೆ ಅಬ್ಬಕ್ಕ ಹೆಸರು, ಉಳ್ಳಾಲ ಪ್ರವೇಶಕ್ಕೆ ವೀರರಾಣಿ ಹೆಸರಲ್ಲಿ ಸ್ವಾಗತ ಕಮಾನು ನಿರ್ಮಿಸಲು ಆಗ್ರಹ 

28-01-22 09:22 pm       Mangalore Correspondent   ಕರಾವಳಿ

ಹದಿನಾರನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿ ವೀರ ಮರಣ ಕಂಡಿದ್ದ ವೀರರಾಣಿ ಅಬ್ಬಕ್ಕಳ ಹೆಸರನ್ನು ಉಳ್ಳಾಲ ರಾಜರಸ್ತೆಗೆ ಇಡುವುದರೊಂದಿಗೆ ಉಳ್ಳಾಲ ಪ್ರವೇಶ ಭಾಗದ ಓವರ್ ಬ್ರಿಡ್ಜ್ ನಲ್ಲಿ ಅಬ್ಬಕ್ಕ ಹೆಸರಿನ ಸ್ವಾಗತ ಕಮಾನು ನಿರ್ಮಿಸಬೇಕೆಂದು ವಿಶ್ವ ಹಿಂದು ಪರಿಷತ್ ಉಳ್ಳಾಲ ನಗರಸಭೆಯನ್ನು ಆಗ್ರಹಿಸಿದೆ. 

Photo credits : Headline Karnataka

ಉಳ್ಳಾಲ, ಜ.28 : ಹದಿನಾರನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿ ವೀರ ಮರಣ ಕಂಡಿದ್ದ ವೀರರಾಣಿ ಅಬ್ಬಕ್ಕಳ ಹೆಸರನ್ನು ಉಳ್ಳಾಲ ರಾಜರಸ್ತೆಗೆ ಇಡುವುದರೊಂದಿಗೆ ಉಳ್ಳಾಲ ಪ್ರವೇಶ ಭಾಗದ ಓವರ್ ಬ್ರಿಡ್ಜ್ ನಲ್ಲಿ ಅಬ್ಬಕ್ಕ ಹೆಸರಿನ ಸ್ವಾಗತ ಕಮಾನು ನಿರ್ಮಿಸಬೇಕೆಂದು ವಿಶ್ವ ಹಿಂದು ಪರಿಷತ್ ಉಳ್ಳಾಲ ನಗರಸಭೆಯನ್ನು ಆಗ್ರಹಿಸಿದೆ. 

ವೀರರಾಣಿ ಅಬ್ಬಕ್ಕ ವಸಾಹತುಶಾಹಿ ಪೋರ್ಚುಗೀಸರ ವಿರುದ್ಧ ಸೆಣಸಾಡಿ ಹಿಮ್ಮೆಟಿಸಿದ್ದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ. ಉಳ್ಳಾಲದ ಸರ್ವ ಜನಾಂಗದವರು ಗೌರವಿಸುವ ಅಬ್ಬಕ್ಕಳ ಹೆಸರು ಚಿರಕಾಲ ಜನಮಾನಸದಲ್ಲಿ ಉಳಿಯಬೇಕು. ಆ ನಿಟ್ಟಿನಲ್ಲಿ ಉಳ್ಳಾಲದ ರಾಜ ರಸ್ತೆಗೆ ವೀರರಾಣಿ ಅಬ್ಬಕ್ಕ ರಸ್ತೆ ಎಂದು ನಾಮಕರಣ ಮಾಡಬೇಕು. ಉಳ್ಳಾಲ ನಗರ ಪ್ರವೇಶ ಪ್ರದೇಶವಾದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ "ವೀರ ರಾಣಿ ಅಬ್ಬಕ್ಕನ ನಾಡು ಉಳ್ಳಾಲಕ್ಕೆ ಸ್ವಾಗತ" ಎಂದು ಬರೆದಿರುವ ಸ್ವಾಗತ ಕಮಾನು ನಿರ್ಮಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಉಳ್ಳಾಲ ನಗರಸಭೆಗೆ ಆಗ್ರಹಿಸಿದೆ. 

ವಿ.ಹಿಂ.ಪ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷರಾದ ನಾರಾಯಣ ಕುಂಪಲ, ಕಾರ್ಯದರ್ಶಿ ಶೈಲೇಶ್ ಅಡ್ಕ, ಸಂಯೋಜಕರಾದ ಅರ್ಜುನ್ ಮಾಡೂರು ಈ ಬಗ್ಗೆ ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ, ಪೌರಾಯುಕ್ತ ರಾಯಪ್ಪರಿಗೆ ಮನವಿ ಸಲ್ಲಿಸಿದ್ದಾರೆ.

Mangalore Ullal highway should be named after Abakka, VHP requests municipality.