ಬ್ರೇಕಿಂಗ್ ನ್ಯೂಸ್
17-09-20 05:58 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 17: ಕೆಎಸ್‌ಆರ್‌ಟಿಸಿ ತನ್ನ ಹಳೆ ಬಸ್ ಗಳನ್ನು ವಿಲೇವಾರಿ ಮಾಡಲು ಹೊಸ ಯೋಜನೆಗೆ ರೆಡಿಯಾಗಿದೆ. ಹತ್ತು ಲಕ್ಷ ಕಿಮೀ ಒಳಗೆ ಓಡಾಟ ನಡೆಸಿದ ಸರಕಾರಿ ಬಸ್ ಗಳನ್ನು ಖಾಸಗಿ ಶಾಲೆಗಳಿಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ. ಕೊರೊನಾ ಸಮಯದಲ್ಲಿ ಆಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಈ ಯೋಜನೆ ಜಾರಿ ಎಂಬ ಮಾತನ್ನು ಕೆಎಸ್ಸಾರ್ಟಿಸಿ ಹೇಳಿಕೊಂಡಿದೆ.
ಹತ್ತು ಲಕ್ಷ ಕಿಮೀ ಓಡಿದ ಹಳೆ ಬಸ್ ಗಳನ್ನು ನಿರುಪಯುಕ್ತ ಎಂದು ಗುಜರಿಗೆ ಹಾಕುವ ಬದಲು ಶಾಲೆಗಳಿಗೆ ನೀಡಿದರೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ಚಿಂತನೆ ಇದರ ಹಿಂದಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ರಾಜ್ಯದ ಎಲ್ಲ ಡಿಪೋಗಳಲ್ಲಿ 10 ಲಕ್ಷ ಕಿ.ಮೀ. ಸಂಚರಿಸಿರುವ ಬಸ್‌ಗಳನ್ನು ಶಾಲೆಗಳಿಗೆ ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಿದೆ. ಈ ನಿರ್ಧಾರವು ನೂರಾರು ಶಾಲೆಗಳಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ 'ಸ್ಕೂಲ್ ಬಸ್’ ಸೇವೆ ಪಡೆಯುವುದಕ್ಕೆ ವರದಾನವಾಗಲಿದೆ. ರಾಜ್ಯದ 17 ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು ಎಂಟು ವಿಭಾಗಗಳಿಂದ ಈಗಾಗಲೇ 61 ಬಸ್‌ಗಳನ್ನು ಮಾರಾಟ ಮಾಡಲಾಗಿದೆ.
ಕರಾವಳಿಯಲ್ಲಿ ಯೋಜನೆಗೆ ನಿರಾಸಕ್ತಿ
ಕೊರೊನಾ ಸಮಯದಲ್ಲಿ ಕಳೆದ ಆಗಸ್ಟ್ ತಿಂಗಳ ವರೆಗೆ ಮಂಗಳೂರು ವಿಭಾಗಕ್ಕೆ 35 ಕೋಟಿ ರೂಪಾಯಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗವೂ ಈ ಯೋಜನೆಯನ್ನು ಜಾರಿಗೊಳಿಸಿದ್ದರೂ ಯಾರು ಕೂಡ ಅಷ್ಟು ಉತ್ಸಾಹ ತೋರಿಸಿಲ್ಲ. ಮಂಗಳೂರು ವಿಭಾಗದಿಂದ ಒಂದು ಬಸ್ ಮಾತ್ರ ರಿಯಾಯಿತಿ ದರದಲ್ಲಿ ಶಾಲೆಗೆ ಮಾರಾಟವಾಗಿದೆ. ಪುತ್ತೂರು ವಿಭಾಗದಿಂದ ಕೆಲವು ವರ್ಷಗಳ ಹಿಂದೆ ಎರಡು ಶಾಲೆಗಳ ಪ್ರಮುಖರು ಕೆಎಸ್‌ಆರ್‌ಟಿಸಿಯನ್ನು ಸಂಪರ್ಕಿಸಿದ್ದರು. ಆದರೆ ಯಾವುದೇ ಬಸ್ ಮಾರಾಟವಾಗಿಲ್ಲ.
ಸರಕಾರಿ ಶಾಲೆಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈಗಾಗಲೇ ಕೊರೊನಾ ಮೊಬೈಲ್ ಕ್ಲಿನಿಕ್‌ಗೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಬಳಸಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿರುವ ಹಳೆ ಬಸ್‌ಗಳಲ್ಲಿ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸಲು ಮುಂದಾಗಿದೆ. ಇನ್ನು ಪ್ರಮುಖ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ನಡೆಸಲು ಕೆಎಸ್‌ಆರ್‌ಟಿಸಿ ಚಿಂತಿಸಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ.
ಸಾಮಾನ್ಯವಾಗಿ ಹೊಸ ಬಸ್ ಖರೀದಿಗೆ 45 ಲಕ್ಷ ರೂ. ಖರ್ಚಾಗುತ್ತದೆ. ಅದೇ ಕೆಎಸ್‌ಆರ್‌ಟಿಸಿಯಿಂದ ಹಳೆ ಬಸ್ ಗಳನ್ನು ಪಡೆದು ಅದನ್ನು ಸರ್ವೀಸ್ ಮಾಡಿದರೆ 6 ಲಕ್ಷ ರೂ.ಗೆ ಬಸ್ ರೆಡಿಯಾಗುತ್ತದೆ ಎನ್ನುತ್ತಾರೆ, ಅಲ್ಲಿನ ಸಿಬಂದಿ.
Join our WhatsApp group for latest news updates
video
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm