ಬ್ರೇಕಿಂಗ್ ನ್ಯೂಸ್
26-02-22 05:55 pm Mangalore Correspondent ಕರಾವಳಿ
ಮಂಗಳೂರು, ಫೆ.26 : ಧರ್ಮಸ್ಥಳ ಬಳಿಯ ಕನ್ಯಾಡಿ ಎಂಬಲ್ಲಿ ದಲಿತ ವ್ಯಕ್ತಿ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ನಾಯ್ಕನನ್ನು ಬಜರಂಗದಳ ಜಿಲ್ಲಾ ಸಂಚಾಲಕ : ಮುಖಂಡನೊಬ್ಬನ ತಮ್ಮ ಹಲ್ಲೆಗೈದು ಕೊಲೆ ಮಾಡಿದ್ದಾನೆ. ಮಾತನಾಡಲು ಬಂದಿದ್ದ ವ್ಯಕ್ತಿಯನ್ನು ರಸ್ತೆಯ ಬದಿಯಲ್ಲಿ ಅಟ್ಟಿಸಿಕೊಂಡು ಹೋಗಿ ತುಳಿದು ದೊಣ್ಣೆಯಲ್ಲಿ ಬಡಿದು ಹಲ್ಲೆ ನಡೆಸಿದ್ದಾನೆ. ಎರಡು ದಿನಗಳ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶಿವಮೊಗ್ಗದಲ್ಲಿ ಹಿಂದುವೊಬ್ಬ ಸತ್ತಾಗ ರಾಜಕೀಯ ಮಾಡಿದ ಬಿಜೆಪಿಯವರು ದಿನೇಶ್ ನಾಯ್ಕನನ್ನು ಯಾಕೆ ನೋಡಲು ಬಂದಿಲ್ಲ. ಈತನೂ ಹಿಂದು ಅಲ್ಲವೇ.. ಈತನಿಗೆ ಪರಿಹಾರ ಕೊಡುವುದಿಲ್ಲವೇ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಪ್ರಶ್ನಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಸಂತ ಬಂಗೇರ, ದಿನೇಶ್ ನಾಯ್ಕ ಬಡ ಕೂಲಿ ಕಾರ್ಮಿಕ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಆದರೆ ಕ್ಷುಲ್ಲಕ ಕಾರಣಕ್ಕೆ ಆತನಿಗೆ ಹೊಡೆದು ಹಲ್ಲೆ ಮಾಡಲಾಗಿದೆ. ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಮತ್ತು ಆತನ ಸೋದರರು ಉಜಿರೆ, ಧರ್ಮಸ್ಥಳದಲ್ಲಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಇದೇ ರೀತಿ ಹಲವರಿಗೆ ಹಲ್ಲೆ ನಡೆಸಿದ್ದಾರೆ. ಈಗ ಅಮಾಯಕ ಹಿಂದುವೊಬ್ಬ ಇವರದ್ದೇ ಗೂಂಡಾಗಿರಿಯಿಂದ ಸತ್ತಿದ್ದು, ದಿನೇಶ್ ನಾಯ್ಕನ ತಾಯಿಗೆ ರಾಜ್ಯ ಸರಕಾರ 25 ಲಕ್ಷ ಪರಿಹಾರ ಕೊಡಬೇಕು. ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಬಂಗೇರ ಹೇಳಿದರು.
ಬೆಳ್ತಂಗಡಿ ಶಾಸಕರು ತಾನೊಬ್ಬ ಹಿಂದುಗಳ ಸಂರಕ್ಷಕ ಎಂದು ಹೇಳಿಕೊಂಡು ತಿರುಗುತ್ತಾರೆ. ಆದರೆ, ಈಗ ಹಿಂದುವೊಬ್ಬ ಸತ್ತಾಗ ಯಾಕೆ ಈತನ ಬಳಿಗೆ ಬಂದಿಲ್ಲ. ಕುಟುಂಬಸ್ಥರಿಗೆ ಸಾಂತ್ವನ ಹೇಳಿಲ್ಲ. ಪುಣ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವರಿಗೆ ಅಭಿನಂದನೆ ಹೇಳುತ್ತೇನೆ. ಆರೋಪಿ ಕೃಷ್ಣ ಅಲಿಯಾಸ್ ಕಿಟ್ಟ ರಸ್ತೆ ಬದಿಯಲ್ಲಿ ಅಟ್ಟಿಸಿಕೊಂಡು ಹೋಗುವುದು, ಮರದ ಸಲಾಕೆಯಲ್ಲಿ ಹೊಟ್ಟೆಗೆ ತಿವಿದು ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ ಎಂದರು ಬಂಗೇರ.
ಸುದ್ದಿಗೋಷ್ಠಿಯಲ್ಲಿ ಕೊಲೆಯಾದ ದಿನೇಶ್ ನಾಯ್ಕನ ತಾಯಿಯೂ ಉಪಸ್ಥಿತರಿದ್ದರು. ಮಗ ಬೆಳಗ್ಗೆ ಭಟ್ರ ಮನೆಗೆ ಕೆಲಸಕ್ಕೆಂದು ಹೋಗಿದ್ದ. ಆನಂತರ, ಅಲ್ಲಿ ಚಹಾ ಕುಡಿದು ಕಿಟ್ಟನ ಅಂಗಡಿ ಬಳಿಗೆ ಬಂದಿದ್ದ. ಕಿಟ್ಟನಿಗೆ ಸೇರಿದ ಜಾಗದ ಆರ್ ಟಿಸಿಯನ್ನು ತಾನು ವಸಂತ ಬಂಗೇರರಿಗೆ ಹೇಳಿಸಿ ಮಾಡಿಕೊಟ್ಟಿದ್ದು ಅನ್ನುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು. ನೀನು ಕಾಂಗ್ರೆಸಿಗರ ವಿಷಯ ತೆಗೆಯಬಾರದು ಎಂದು ಕಿಟ್ಟ ಆಕ್ಷೇಪಿಸಿದ್ದು, ನಿನಗೆ ಕಾಂಗ್ರೆಸಿಗರ ಸಹಾಯ ಆಗುತ್ತದೆ, ಅವರ ಹೆಸರು ಯಾಕೆ ತೆಗೀಬಾರದು ಎಂದು ದಿನೇಶ್ ಪ್ರಶ್ನೆ ಮಾಡಿದ್ದ. ಅಷ್ಟಕ್ಕೇ ಅಟ್ಟಿಸಿಕೊಂಡು ಹೋಗಿ ದೊಣ್ಣೆಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾನೆ. ಆಬಳಿಕ ಅಲ್ಲಿಯೇ ರಸ್ತೆ ಬದಿ ಮಲಗಿದ್ದವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ. ಉಜಿರೆಯಲ್ಲಿ ಪರೀಕ್ಷೆ ನಡೆಸಿ, ಮಂಗಳೂರಿಗೆ ಒಯ್ಯಬೇಕು ಎಂದಿದ್ದಕ್ಕೆ, ಮರುದಿನ ಕರೆತರಲಾಗಿತ್ತು ಎಂದು ಹೇಳಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಗೆ ತುಳಿದು ಹಲ್ಲೆ, ಸಾವು ; ಧರ್ಮಸ್ಥಳದ ಬಿಜೆಪಿ ಕಾರ್ಯಕರ್ತನ ಮೇಲೆ ಕೊಲೆಕೇಸು
Dharmasthala Murder case congress Dinesh Nayak alleges that Bajarang dal members are goons. A Dalit man was attacked and Murdered by a BJP member but so far the police haven't arrested him.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm