ಪ್ರಮೋದ್ ಮಧ್ವರಾಜ್ ಪಕ್ಷದಲ್ಲೇ ಉಳಿಸಲು ಕಸರತ್ತು ; ಬಿಜೆಪಿ ಕದ ತಟ್ಟಿರುವ ನಾಯಕನಿಗೆ ಡಿಕೆಶಿ, ಸುರ್ಜೇವಾಲಾ ಫೋನ್ ಕರೆ, ಅಸ್ತಿತ್ವ ಕಳಕೊಂಡ ಕಾಂಗ್ರೆಸಿಗೆ ಬಲ ತರಲು ಪ್ಲಾನ್ !

27-02-22 08:25 pm       Udupi Correspondent   ಕರಾವಳಿ

ಬಿಜೆಪಿ ಸೇರುತ್ತಾರೆಂದು ಸುದ್ದಿಗೆ ಗ್ರಾಸವಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರು ಮಾತನಾಡಿದ್ದು ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಉಡುಪಿ, ಫೆ.27 : ಬಿಜೆಪಿ ಸೇರುತ್ತಾರೆಂದು ಸುದ್ದಿಗೆ ಗ್ರಾಸವಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರು ಮಾತನಾಡಿದ್ದು ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಕಾಂಗ್ರೆಸ್ ಘಟಕದಿಂದ ದೂರವುಳಿದಿರುವ ಪ್ರಮೋದ್ ಮಧ್ವರಾಜ್ ಅವರ ಇತ್ತೀಚಿನ ನಡೆಗಳು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗೆ ಕಾರಣವಾಗಿದ್ದವು. ಕೆಲವು ಕಡೆ ಭಾಷಣಗಳಲ್ಲಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿ ಮಾತನಾಡಿದ್ದು, ಅವರು ಬಿಜೆಪಿ ಸೇರುತ್ತಾರೆಂದು ಸುದ್ದಿ ಹರಿದಾಡುವಂತೆ ಮಾಡಿತ್ತು.

Lockdown-like curfew' not good: D K Shivakumar

ಆದರೆ, ಕೆಪಿಸಿಸಿ ಮಟ್ಟದ ನಾಯಕರು ಮತ್ತು ಪಕ್ಷದ ಕೇಂದ್ರ ನಾಯಕರು ಪ್ರಮೋದ್ ಮಧ್ವರಾಜ್ ಅವರಿಗೆ ಕರೆ ಮನವೊಲಿಸಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಕರೆ ಮಾಡಿ, ಪಕ್ಷದಲ್ಲಿಯೇ ಉಳಿಯುವಂತೆ ಮನವೊಲಿಸಿದ್ದಲ್ಲದೆ, ಪಕ್ಷದಲ್ಲಿ ಮಹತ್ವದ ಹುದ್ದೆ ನೀಡುವ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಸಂಘಟಿಸುವಲ್ಲಿ ಮುಂದಾಗಬೇಕು, ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಬಗ್ಗೆ ಟಾಸ್ಕ್ ಕೊಟ್ಟಿದ್ದಾರೆ.

K C Venugopal made AICC general secretary

ಅಲ್ಲದೆ, ಪ್ರಮೋದ್ ಅವರನ್ನು ಆದಷ್ಟು ಬೇಗ ಬೆಂಗಳೂರಿಗೆ ಬಂದು ಮಾತನಾಡುವಂತೆ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಕೂಡ ಮಾತನಾಡಿದ್ದು, ಪಕ್ಷದಲ್ಲಿ ಉನ್ನತ ಸ್ಥಾನ ಕೊಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್ ನಡೆಯ ಬಗ್ಗೆ ಕುತೂಹಲ ಉಂಟಾಗಿದೆ. ಇತ್ತೀಚೆಗೆ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಶಾಸಕ ರಘುಪತಿ ಭಟ್, ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಬರುವುದಿದ್ದರೆ ಸ್ವಾಗತ ಎಂದಿದ್ದರು. ಆದರೆ, ಉಡುಪಿ ಬಿಜೆಪಿ ಒಳಗೆ ಕೆಲವು ನಾಯಕರು ಪ್ರಮೋದ್ ಮಧ್ವರಾಜ್ ಪಕ್ಷ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಕ್ಷ ಸೇರಲು ಪ್ರಮೋದ್ ತುದಿಗಾಲಲ್ಲಿ ಇದ್ದರೂ, ಅವರ ಸೇರ್ಪಡೆ ಸಾಧ್ಯವಾಗಿರಲಿಲ್ಲ.

Udupi MLA Raghupathi Bhat seeks NIA probe into hijab row

ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದರೆ, ರಘುಪತಿ ಭಟ್ ಅವರಿಗೇ ಪ್ರತಿಸ್ಪರ್ಧಿಯಾಗುತ್ತಾರೆ. ಉಡುಪಿ ಅಥವಾ ಕಾಪು ಕ್ಷೇತ್ರದ ಬಗ್ಗೆ ಕಣ್ಣಿರಿಸಿಕೊಂಡೇ ಪಕ್ಷ ಸೇರುವ ಪ್ರಮೋದ್ ಅವರನ್ನು ಅರಗಿಸಿಕೊಳ್ಳಲು ಬಿಜೆಪಿ ನಾಯಕರು ತಯಾರಿಲ್ಲ. ಇತ್ತ ಈಗಾಗಲೇ ಕಾಪು ಕ್ಷೇತ್ರದ ಮೇಲೆ ಯಶಪಾಲ್ ಸುವರ್ಣ ಕಣ್ಣಿಟ್ಟಿದ್ದಾರೆ. ಉಡುಪಿ ನಗರದಲ್ಲಿ ರಘುಪತಿ ಭಟ್ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಇವರ ನಡುವೆ, ಪಕ್ಷ ಸೇರಿದರೂ ಇವರೆಡು ಬಿಟ್ಟು ಬೇರೆ ಕಡೆಗೆ ಕಣ್ಣು ಹಾಕಬೇಕು. ಆದರೆ ಪ್ರಮೋದ್ ಮಧ್ವರಾಜ್, ಇವರೆಡು ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ಹೋಗಲು ತಯಾರಿಲ್ಲ. ಬಿಜೆಪಿಯ ಉನ್ನತ ನಾಯಕರ ಜೊತೆ ಸಂಪರ್ಕದಲ್ಲಿದ್ದರೂ, ಸ್ಥಳೀಯ ಕೆಲವರ ವಿರೋಧದಿಂದಾಗಿ ಪ್ರಮೋದ್ ಸೇರ್ಪಡೆ ಕಷ್ಟವಾಗಿದೆ.

ಕಾಂಗ್ರೆಸಿನ ಮಟ್ಟಿಗೆ ಪ್ರಮೋದ್ ಮಧ್ವರಾಜ್ ಬಿಟ್ಟರೆ ಉಡುಪಿಯಲ್ಲಿ ಅನುಭವಿ ಮತ್ತು ವರ್ಚಸ್ಸು ಇಟ್ಟುಕೊಂಡಿರುವ ನಾಯಕರೇ ಇಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಶಾಸಕ ಸ್ಥಾನಗಳನ್ನು ಬಾಚಿಕೊಂಡ ಬಳಿಕ ಕಾಂಗ್ರೆಸಿಗರು ಅಸ್ತಿತ್ವ ಕಳಕೊಂಡು ತಮ್ಮ ಪ್ರಾಬಲ್ಯವನ್ನೇ ಕಳಕೊಂಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ಹೊತ್ತಿಗೆ ಬಹುತೇಕ ಹಳಬರನ್ನು ಬಿಟ್ಟು ಹೊಸ ಮುಖಗಳು ಪಕ್ಷದಲ್ಲಿ ಮುಂಚೂಣಿಗೆ ಬರುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್ ನೇಪಥ್ಯಕ್ಕೆ ಸರಿಯುತ್ತಿರುವುದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗಿರುವ ಎಸ್ಡಿಪಿಐ, ಮುಸ್ಲಿಂ ಪ್ರಾಬಲ್ಯ ಇರುವಲ್ಲಿ ಪಕ್ಷದ ಚಚುವಟಿಕೆ ಆರಂಭಿಸಿದೆ. ಹಿಜಾಬ್ ವಿಚಾರದ ನೆಪದಲ್ಲಿ ಕ್ಯಾಂಪಸ್ ಫ್ರಂಟ್, ಪಿಎಫ್ಐ ಮೂಲಕ ಮುಸ್ಲಿಂ ಮತಗಳ ಧ್ರುವೀಕರಣಕ್ಕೆ ಮುಂದಾಗಿದ್ದು, ರಾಜಕೀಯವಾಗಿ ಎಸ್ಡಿಪಿಐ ಅಸ್ತಿತ್ವ ಗಳಿಸಲು ಪ್ಲಾನ್ ಹಾಕಿದೆ.

Udupi former congress minister Pramod Madhwaraj has plans to shift to BJP party for which congress leaders from state as well as from High command are in the urge of convincing to some how not to leave the party.