ತಲಪಾಡಿ ದುರ್ಗೆಯ ಮಡಿಲಿಗೆ ಬ್ರಹ್ಮರಥ ಸಮರ್ಪಣೆ ; ವೈಭವದ ಶೋಭಾಯಾತ್ರೆಗೆ ಸಾಕ್ಷಿಯಾದ ಭಕ್ತ ಸಮೂಹ 

07-03-22 04:38 pm       Mangalore Correspondent   ಕರಾವಳಿ

 ಪುರಾಣ ಪ್ರಸಿದ್ಧ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನ ಭಾನುವಾರ ಸಮರ್ಪಿಸಲಾಯಿತು. ಬ್ರಹ್ಮರಥ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಮನೋಹರ ರೈ ಅವರನ್ನು ಬ್ರಹ್ಮರಥ ನಿರ್ಮಾಣ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. 

ಉಳ್ಳಾಲ, ಮಾ.7: ಪುರಾಣ ಪ್ರಸಿದ್ಧ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನ ಭಾನುವಾರ ಸಮರ್ಪಿಸಲಾಯಿತು. ಬ್ರಹ್ಮರಥ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಮನೋಹರ ರೈ ಅವರನ್ನು ಬ್ರಹ್ಮರಥ ನಿರ್ಮಾಣ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. 

ತಲಪಾಡಿ ರಾಮಮನೋಹರ್ ರೈ ಅವರ ಸಾರಥ್ಯದಲ್ಲಿ ಕೋಟೆಕಾರು -ಬೀರಿ ಗಣೇಶ ಮಂದಿರದಿಂದ ಹೊರಟ ಶೋಭಾಯಾತ್ರೆಗೆ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ತಲಪಾಡಿ ದೊಡ್ಡಮನೆ ಡಾ. ಜಯಪಾಲ ಶೆಟ್ಟಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಸಂದಿದೆ. ಐನೂರು ವರ್ಷಗಳ ಹಿಂದಿನ ರಥ ಶಿಥಿಲಗೊಂಡಿದ್ದರಿಂದ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಅಯೋಧ್ಯೆಯ ರಥ ನಿರ್ಮಾಣ ಜವಾಬ್ದಾರಿ ಹೊತ್ತ ಕೋಟೇಶ್ವರದ ಖ್ಯಾತ ಶಿಲ್ಪಿಯಿಂದ ನಿರ್ಮಾಣಗೊಂಡು ಕ್ಷೇತ್ರದ ವಾರ್ಷಿಕ ಉತ್ಸವ ಸಂದರ್ಭದಲ್ಲೇ ಸಮರ್ಪಣೆಯಾಗುತ್ತಿರುವುದು ಸಂತಸದ ವಿಚಾರ ಎಂದರು.

ಕೋಟೆಕಾರು, ಬೀರಿ, ಕೆ.ಸಿ. ರೋಡ್, ತಲಪಾಡಿ, ತಚ್ಚಾಣಿ ಮಾರ್ಗವಾಗಿ ಬ್ರಹ್ಮರಥವು ಶ್ರೀ ಕ್ಷೇತ್ರಕ್ಕೆ ಸಮರ್ಪಣೆಗೊಂಡಿತು. ಕ್ಷೇತ್ರದಲ್ಲಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ರಪ್ರಸನ್ನ‌ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ದೇವರು ನಮ್ಮ ಬದುಕಿನಲ್ಲಿ ಏನೆಲ್ಲಾ ಕೊಟ್ಟಿದ್ದಾನೆಯೋ ಅದೆಲ್ಲವೂ ದೇವತಾನುಗ್ರಹವಾಗಿದ್ದು ನಮಗೆ ಸಿಕ್ಕಿದ್ದನ್ನು ನಾವು ಬಳಸುವುದಕ್ಕಿಂತ ಮುಂಚಿತವಾಗಿ ಕಿಂಚಿತ್ತಾದರೂದೇವರಿಗೆ ಸಮರ್ಪಿಸಬೇಕು. ಆ ನಿಟ್ಟಿನಲ್ಲಿ ಬ್ರಹ್ಮರಥ ನಿರ್ಮಾಣ ಸಮಿತಿ ಹಾಗೂ ಶ್ರೀ ದೇವಿಯ ಭಕ್ತರಿಂದ ತಲಪಾಡಿ ಶ್ರೀ ಮಾತೆಗೆ ನೂತನ ಬ್ರಹ್ಮರಥದ ಮೂಲಕ ಕ್ಷೇತ್ರಕ್ಕೆ ದೊಡ್ಡ ಕಾಣಿಕೆ ಸಮರ್ಪಣೆ ಆಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಬ್ರಹ್ಮರಥ ನಿರ್ಮಾಣ ಸಮಿತಿ ಅಧ್ಯಕ್ಷ ರಾಮ್ ಮನೋಹರ್ ರೈ "ರೈ ಮಹಲ್" ತಲಪಾಡಿ ಅವರನ್ನು ಬ್ರಹ್ಮರಥ ನಿರ್ಮಾಣ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಗಣೇಶ್ ಭಟ್ ಪಂಜಾಳ ಹಾಗೂ ಉದ್ಯಮಿ ಪ್ರಭಾಕರ್ ಶೆಟ್ಟಿ ಕಿನ್ಯ ಗುತ್ತು ಅವರನ್ನು ಗೌರವಿಸಲಾಯಿತು. ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರು ರುದ್ರಾಕ್ಷಿ ಮರದ ಗಿಡವನ್ನು ಕ್ಷೇತ್ರಕ್ಕೆ  ಕೊಡುಗೆಯಾಗಿ ನೀಡಿದರು.

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ಬಿ. ರವೀಂದ್ರನಾಥ ರೈ ಕಾರ್ಯಕ್ರ‌ಮದ ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ, ವಿಶ್ವ ಹಿಂದು ಪರಿಷತ್ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಮಾಜಿ ಶಾಸಕಿ ಕೆ.‌ ಶಕುಂತಲಾ ಶೆಟ್ಟಿ, ಮುಂಬೈಯ ಉದ್ಯಮಿ ಭಾಸ್ಕರ ಶೆಟ್ಟಿ ಹೊಸಮನೆ ನಾರ್ಲ ತಲಪಾಡಿ, ಕ್ಷೇತ್ರದ ಆಡಳಿತಾಧಿಕಾರಿ ಪ್ರವೀಣ್ ಕೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ನೆತ್ತಿಲಬಾಳಿಕೆ, ಗೋಪಾಲಕೃಷ್ಣ ಮೇಲಾಂಟ, ಬ್ರಹ್ಮರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ವಸಂತ ದೇವಾಡಿಗ, ಕೋಶಾಧಿಕಾರಿ ಪ್ರದೀಪ್ ಕಿಲ್ಲೆ ಮೇಗಿನ ಪಂಜಾಳಗುತ್ತು, ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಮೊದಲಾದವರು ಉಪಸ್ಥಿತರಿದ್ದರು.

Mangalore Talapady Bhramaratha held with grandeur, thousands gather.