ಬ್ರೇಕಿಂಗ್ ನ್ಯೂಸ್
07-03-22 10:01 pm Mangalore Correspondent ಕರಾವಳಿ
ಮಂಗಳೂರು, ಮಾ.7: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ಮಂಗಳೂರಿನ ಐವರು ವೈದ್ಯಕೀಯ ವಿದ್ಯಾರ್ಥಿಗಳು ಇವತ್ತು ಹುಟ್ಟೂರಿಗೆ ಮರಳಿದ್ದು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದಾರೆ.
ಭಾರತ ಸರಕಾರದ ಆಪರೇಶನ್ ಗಂಗಾ ಕಾರ್ಯಾಚರಣೆಯಡಿ ಉಕ್ರೇನಲ್ಲಿ ಸಿಕ್ಕಿಬಿದ್ದಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನು ರಕ್ಷಿಸಿ ಮರಳಿ ಕರೆತರಲಾಗುತ್ತಿದ್ದು ಇಂದು ಮಧ್ಯಾಹ್ನ ನಾಲ್ವರು ವಿದ್ಯಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ. ಬಳಿಕ ಅವರನ್ನು ಜಿಲ್ಲಾಡಳಿತದ ಪರವಾಗಿ ಶಾಸಕರು, ಜಿಲ್ಲಾಧಿಕಾರಿಗಳು ಹುಟ್ಟೂರಿಗೆ ಸ್ವಾಗತಿಸಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಖಾರ್ಕೀವ್ ನಗರದಲ್ಲಿದ್ದ ಮಂಗಳೂರಿನ ಕ್ಲೇಟನ್ ಓಸ್ಮಂಡ್ ಡಿಸೋಜಾ,
ಅನೈನ ಅನ್ನಾ, ಅಹಮ್ಮದ್ ಸಾದ್ ಅರ್ಶದ್ ಅಪಾಯದ ದವಡೆಗೆ ಸಿಲುಕಿ ಪಾರಾಗಿ ಬಂದಿದ್ದಾರೆ. ಇದೇ ವೇಳೆ ಉಕ್ರೇನ್ ಪಶ್ಚಿಮ ಭಾಗದಲ್ಲಿದ್ದ ಮೂಡಬಿದಿರೆಯ ಶಾಲ್ವಿನ್ ಪ್ರೀತಿ ಅರಾನ್ಹ ಕೂಡ ವಿಮಾನದಲ್ಲಿ ಹುಟ್ಟೂರಿಗೆ ಆಗಮಿಸಿದ್ದಾರೆ.
ಇತ್ತ, ಬೆಂಗಳೂರಿಗೆ ವಿಮಾನದ ಮೂಲಕ ಬಂದಿದ್ದ ಮಂಗಳೂರಿನ ದೇರಳಕಟ್ಟೆ ನಿವಾಸಿ ಲಕ್ಷಿತಾ ಪುರುಷೋತ್ತಮ್ ತನ್ನ ನೆಚ್ಚಿನ ಬೆಕ್ಕಿನ ಮರಿಯೊಂದಿಗೆ ರಸ್ತೆ ದಾರಿಯಾಗಿ ತಾಯ್ನಾಡಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಆಕೆ ಉಕ್ರೇನ್ ನಾಡಿನಲ್ಲಿ ದತ್ತು ಪಡೆದು ಸಾಕಿದ್ದ ಲೀಸಾ ಹೆಸರಿನ ಬೆಕ್ಕನ್ನು ಅಲ್ಲಿ ಬಿಟ್ಟು ಬರಲಾಗದೆ ತನ್ನ ಮಡಿಲಲ್ಲಿ ಇಟ್ಟುಕೊಂಡೇ ಊರಿಗೆ ಬಂದಿದ್ದಳು. ಕೀವ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 4ನೇ ವರ್ಷದ ಎಂ.ಬಿ.ಬಿ.ಎಸ್ ಕಲಿಯುತ್ತಿದ್ದ ಲಕ್ಷಿತಾ ಯುದ್ಧ ಆರಂಭಗೊಂಡ ಬಳಿಕ ಬಂಕರಿನಡಿ ಅವಿತುಕೊಂಡಿದ್ದರು. ಈ ವೇಳೆ, ಬೆಕ್ಕಿಗೆ ಬೇಕಾದ ಆಹಾರವನ್ನೂ ಖರೀದಿಸಿ ಸ್ಟಾಕ್ ಇಟ್ಟಿದ್ದು ಬಂಕರ್ ನಲ್ಲಿ ಜೀವ ಭಯದಲ್ಲಿರುವಾಗಲೂ ಜೊತೆಗೇ ಇರಿಸಿಕೊಂಡು ಪೋಷಣೆ ಮಾಡಿದ್ದರು.
ಅಲ್ಲಿನ ರಾಜಧಾನಿಯಿಂದ ದೇಶದ ಗಡಿಭಾಗಕ್ಕೆ ರೈಲಿನಲ್ಲಿ ಬರುವಾಗಲೂ ಬೆಕ್ಕನ್ನು ತನ್ನ ಮಡಿಲಿನಲ್ಲೇ ಇರಿಸಿದ್ದರಂತೆ. ಅಲ್ಲಿಂದ ಹಿಂತಿರುಗುವಾಗಲೂ ಬೆಕ್ಕು ಮತ್ತು ತನಗೆ ಬೇಕಾದ ಫುಡ್, ಡಾಕ್ಯುಮೆಂಟ್, ಅಗತ್ಯ ಬಟ್ಟೆಯನ್ನಷ್ಟೇ ಊರಿಗೆ ತಂದಿದ್ದಾಳೆ. ತನಗಾದ ಅನುಭವದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಲಕ್ಷಿತಾ, ಫೆ.24ರಂದು ಬೆಳಗ್ಗೆ ಕಣ್ಣು ತೆರೆದದ್ದೇ ಬಾಂಬ್ ಸ್ಫೋಟದ ಶಬ್ದದೊಂದಿಗೆ. ಅತ್ತ ಬಾಂಬ್ ಸಿಡಿಯುತ್ತಿದ್ದಾಗ ನಾವು ಮರಳಿ ಮನೆ ತಲುಪುತ್ತೇವೆ ಎಂಬ ಗ್ಯಾರಂಟಿ ಇರಲಿಲ್ಲ. ಕೊನೆಗೂ ಸುರಕ್ಷಿತವಾಗಿ ತಲುಪಿರೋದಕ್ಕೆ ಖುಷಿ ಆಗ್ತಿದೆ ಎಂದು ಹೇಳಿದರು.
ರಸ್ತೆಯ ಮೂಲಕ ಬಂದರೂ ಲಕ್ಷಿತಾ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ. ತಾನು ತಂದ ಬೆಕ್ಕಿನೊಂದಿಗೆ ಬಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು ಭೇಟಿ ಮಾಡಿದ ಲಕ್ಷಿತಾ ತಮ್ಮನ್ನು ಕರೆತರಲು ಶ್ರಮಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
Shalvin Preethi Aranha from Moodbidri, Anaina from Derebail, Claton D’Souza from Padil, Lakshita Purushottama from Deralakatte, and Saad Arshad Ahmed from Morgan’s Gate reached Mangaluru International Airport.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm