ಮಹಾಮಳೆಗೆ ದಿಕ್ಕನ್ನೇ ಬದಲಿಸಿದ ನದಿ, ಕಾಪು ಲೈಟ್ ಹೌಸ್ ಆವರಿಸಿದ ನೆರೆ !

21-09-20 06:26 pm       Udupi Correspondent   ಕರಾವಳಿ

ಕಾಪು ಬೀಚ್ ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ನದಿ ಸಮುದ್ರ ಸೇರ್ತಾ ಇತ್ತು. ಭಾರೀ  ಮಳೆಯಿಂದಾಗಿ ನದಿ ಪಾತ್ರವೇ ಬದಲಾಗಿದ್ದು, ನೆರೆ ನೀರು ತನ್ನ ಪಥವನ್ನೇ ಬದಲಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಉಡುಪಿ, ಸೆಪ್ಟಂಬರ್ 21: ಉಡುಪಿಯಲ್ಲಿ ಎರಡು ದಿನಗಳಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆ ಯಾವೆಲ್ಲ ಅನಾಹುತಗಳನ್ನು ಮಾಡಿದೆ ಅಂದರೆ ಅದನ್ನು ಊಹಿಸೋಕು ಸಾಧ್ಯವಿಲ್ಲ. ಅದಕ್ಕೆ ಒಂದು ಸಣ್ಣ ಉದಾಹರಣೆ ಕಾಪು ಬೀಚ್ ನಲ್ಲಿದ್ದ ಬ್ರಿಟಿಷರ ಕಾಲದ ದೀಪಸ್ತಂಭ ಬಳಿಯ ದೃಶ್ಯ.  

ಕಾಪು ಬೀಚ್ ಬಳಿಯ ಲೈಟ್ ಹೌಸ್ ಕನ್ನಡ, ತುಳು ಸಿನಿಮಾ ಚಿತ್ರೀಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಜಾಗ. ಅಪೂರ್ವ ಸೌಂದರ್ಯದಿಂದ ವೀವ್ ಸ್ಪಾಟ್ ಆಗಿದ್ದ ಕಾಪು ದೀಪಸ್ತಂಭದತ್ತ ಇನ್ನು ಸುಳಿದಾಡುವುದು ಬಿಡಿ. ಅದರ ಬಳಿಗೆ ಹೋಗುವುದೇ ಡೇಂಜರ್ ಅನ್ನುವಂತಾಗಿದೆ. ಯಾಕಂದ್ರೆ, ಎರಡು ದಿನಗಳ ಮಳೆಯಿಂದ ಭೋರ್ಗರೆದ ನದಿಗಳು ಸಮುದ್ರ ಸೇರಲು ಜಾಗ ಸಾಲದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಮುದ್ರದತ್ತ ನುಗ್ಗಿದೆ. ಲೌಟ್ ಹೌಸ್ ಹಿಂಭಾಗದಿಂದ ಸಮುದ್ರ ಸೇರುತ್ತಿದ್ದ ನದಿ ತನ್ನ ಪಥವನ್ನೇ ಬದಲಿಸಿದ್ದು ದೀಪಸ್ತಂಭದತ್ತ ತೆರಳುವ ಕಾಲುದಾರಿಯನ್ನೇ ಕಬಳಿಸಿಕೊಂಡು ಮುಂಭಾಗದಿಂದ ಹರಿಯಲಾರಂಭಿಸಿದೆ. ಕಾಲು ದಾರಿ ಕೊಚ್ಚಿಹೋಗಿದ್ದು, ಎರಡೂ ಭಾಗಗಳಿಂದ ಸಮುದ್ರ ಕೊರೆತ ಉಂಟಾದಲ್ಲಿ ದೀಪಸ್ತಂಭವೇ ಸಮುದ್ರ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಾಪು ಬೀಚ್ ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ನದಿ ಸಮುದ್ರ ಸೇರ್ತಾ ಇತ್ತು. ಭಾರೀ  ಮಳೆಯಿಂದಾಗಿ ನದಿ ಪಾತ್ರವೇ ಬದಲಾಗಿದ್ದು, ನೆರೆ ನೀರು ತನ್ನ ಪಥವನ್ನೇ ಬದಲಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾಪು ಬಳಿಯ ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತುತೋಟ ಸೇರಿದಂತೆ ಆಸುಪಾಸಿನ ಭಾಗದಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿರುವ ನದಿ ನೀರು ಲೈಟ್ ಹೌಸ್ ಮುಂಭಾಗದಿಂದಲೇ ಸಮುದ್ರ ಸೇರುತ್ತಿದೆ. ಇದರಿಂದ ದೀಪಸ್ತಂಭದತ್ತ ಹೋಗಲು ದಾರಿ ಇಲ್ಲದಾಗಿದ್ದು, ಅಲ್ಲದೆ ನೆರೆನೀರು ಇದೇ ರೀತಿ ಹರಿದರೆ ಲೈಟ್ ಹೌಸ್ ಏರುವ ಮೆಟ್ಟಲುಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ.

Join our WhatsApp group for latest news updates