ಬ್ರೇಕಿಂಗ್ ನ್ಯೂಸ್
15-03-22 03:22 pm Mangalore Correspondent ಕರಾವಳಿ
ಮಂಗಳೂರು, ಮಾ.15: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಂಗಳೂರಿನಿಂದ ಕಾರ್ಕಳದ ವರೆಗೆ ವಿಸ್ತರಣೆ ಕಾಮಗಾರಿಗೆ ಭೂಸ್ವಾಧೀನ ನಡೆಯುತ್ತಿದ್ದು, ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಹೆದ್ದಾರಿಯ ಅಗಲೀಕರಣಕ್ಕೆ ಭೂಸ್ವಾಧೀನ ನಡೆಯುತ್ತಿದ್ದು, ಲಂಚ ಕೊಟ್ಟಲ್ಲಿ ಹೆದ್ದಾರಿಯ ರೂಟನ್ನೇ ಬದಲಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾಧೀನ ಹೆಸರಲ್ಲಿ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಅವರಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭೂಮಾಲೀಕರ ಹೋರಾಟ ಸಮಿತಿಯ ಮುಖಂಡ ಬೃಜೇಶ್ ಶೆಟ್ಟಿ ಮಿಜಾರ್ ಆರೋಪಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಬೃಜೇಶ್ ಶೆಟ್ಟಿ, ಹೆದ್ದಾರಿಗೆ ಭೂಮಿಯನ್ನು ಬಿಟ್ಟುಕೊಟ್ಟವರಿಗೆ ಮಾರುಕಟ್ಟೆ ದರಕ್ಕಿಂತ ಹತ್ತರಿಂದ ಹನ್ನೆರಡು ಪಟ್ಟು ಕಡಿಮೆಗೆ ದರ ವಿಧಿಸಿದ್ದಾರೆ. ಸೆಂಟ್ಸ್ ಗೆ ಮೂರೂವರೆ ಲಕ್ಷ ಬೆಲೆ ಇರುವ ಭೂಮಿಗೆ ಕೇವಲ 15-20 ಸಾವಿರ ರೂ. ದರ ವಿಧಿಸುತ್ತಿದ್ದಾರೆ. ಅದರ ಮೇಲೆ 12 ಪರ್ಸೆಂಟ್ ಜಿಎಸ್ಟಿ ಹಾಕುತ್ತಿದ್ದಾರೆ. ನಾವು ಹೆದ್ದಾರಿಗೆ ಭೂಮಿ ಬಿಟ್ಟು ಕೊಡುತ್ತಿದ್ದರೂ, ಅದರ ಮೇಲೆ ಜಿಎಸ್ ಟಿ ತೆರಿಗೆ ಹೇಗೆ ವಿಧಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ. ನಾವು ಭೂಮಿ ಮಾರಾಟ ಮಾಡುತ್ತಿಲ್ಲ. ಹೆದ್ದಾರಿಗೆ ಅತ್ಯಂತ ಕನಿಷ್ಠ ಬೆಲೆಗೆ ನೀಡುತ್ತಿದ್ದರೂ, ಇವರು ಜಿಎಸ್ಟಿ ತೆರಿಗೆ ಹೇಗೆ ವಿಧಿಸುತ್ತಿದ್ದಾರೆ. ಅದರಲ್ಲೂ ಒಂದು ಕಡೆ 12 ಪರ್ಸೆಂಟ್, ಮತ್ತೊಂದು ಕಡೆ 24 ಪರ್ಸೆಂಟ್ ಜಿಎಸ್ಟಿ ಹಾಕುತ್ತಿದ್ದಾರೆ. ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನಿಂದ ಕಾರ್ಕಳದ ವರೆಗಿನ ಹೆದ್ದಾರಿಯನ್ನು 2014ರಲ್ಲಿ ಮೇಲ್ದರ್ಜೆಗೇರಿಸಿದ್ದು ಚತುಷ್ಪಥ ಕಾಮಗಾರಿಗೆ ನೋಟಿಫಿಕೇಶನ್ ಆಗಿತ್ತು. ಆದರೆ, ಈವರೆಗೆ ನಾಲ್ಕೈದು ಬಾರಿ ಹೆದ್ದಾರಿಯ ರೂಟ್ ಬದಲಿಸಿ, ಸ್ಥಳೀಯ ಕೃಷಿಕರನ್ನು ವಂಚಿಸಲು ತೊಡಗಿದ್ದಾರೆ. ನಾವು 250 ಮಂದಿಯಷ್ಟು ಸೇರಿ ಭೂಸ್ವಾಧೀನಕ್ಕೆ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದೇವೆ. ಆದರೆ ಹೆದ್ದಾರಿ ಅಧಿಕಾರಿಗಳು ಹೈಕೋರ್ಟ್ ನಲ್ಲಿ ಈವರೆಗೂ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ವಿಳಂಬ ಧೋರಣೆ ತೋರುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ, ಮನವಿ ನೀಡಿದ್ದೇವೆ. ಆದರೆ ಇಲ್ಲಿಯ ಸಂಸದ ನಳಿನ್ ಕುಮಾರ್ ನಿರ್ಲಕ್ಷ್ಯದಿಂದಾಗಿ ನಮಗೆ ಅನ್ಯಾಯ ಆಗುತ್ತಿದೆ ಎಂದು ರತ್ನಾಕರ ಶೆಟ್ಟಿ ಬೆಳುವಾಯಿ ಹೇಳಿದರು.
ಇಲ್ಲಿ ಕೆಲವು ಪ್ರಭಾವಿಗಳು ಜನಪ್ರತಿನಿಧಿಗಳು ಮತ್ತು ಹೈವೇ ಅಧಿಕಾರಿಗಳ ಜೊತೆ ಸೇರಿ, ಭೂಮಾಫಿಯಾ ನಡೆಸುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯ ಹೆಸರಲ್ಲಿ ಹಗಲು ದರೋಡೆ ನಡೆಯುತ್ತಿದೆ. ಕಿಶೋರ್ ಕುಮಾರ್ ಎನ್ನುವ ಭೂಸ್ವಾಧೀನಧಿಕಾರಿ ಮಹಮ್ಮದ್ ನಜೀಂ ಎಂಬವರಿಗೆ ಕರೆ ಮಾಡಿ, ಹೆದ್ದಾರಿ ಗುರುತು ಹಾಕಿದ್ದನ್ನು ಬದಲಿಸಲು 5 ಲಕ್ಷ ಕೇಳಿದ್ದು, ಇದರ ರೆಕಾರ್ಡ್ ನಮ್ಮಲ್ಲಿದೆ. ಪದೇ ಪದೇ ಕರೆ ಮಾಡಿ, ಹಣ ಅಡ್ವಾನ್ಸ್ ನೀಡುವಂತೆ ಕೇಳುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಕೆಲವರು ದೊಡ್ಡ ಮಟ್ಟಿನಲ್ಲಿ ಭೂಮಿಯನ್ನು ಖರೀದಿಸಿಟ್ಟಿದ್ದು ಅವರ ಜಾಗದ ಮೂಲಕ ಹೆದ್ದಾರಿ ಹೋದಲ್ಲಿ ಭೂಮಿಯ ದರ ದುಪ್ಪಟ್ಟಾಗುವುದರಿಂದ ಅದರ ಬಗ್ಗೆ ಲಾಬಿ ನಡೆಸುತ್ತಿದ್ದಾರೆ.

ಸುಮಾರು 20 ವರ್ಷಗಳಿಂದ ಈ ಹೆದ್ದಾರಿಯ ಅಕ್ಕಪಕ್ಕದಲ್ಲಿ ಭೂಪರಿವರ್ತನೆಗೆ ಅವಕಾಶ ಇರಲಿಲ್ಲ. ಆದರೆ 2016ರಲ್ಲಿ ಹೆದ್ದಾರಿಗೆ 3ಎ ಅಧಿಸೂಚನೆ ಹೊರಡಿಸಿದ ಬಳಿಕ ಕೆಲವು ಪ್ರಭಾವಿ ವ್ಯಕ್ತಿಗಳ ಭೂಮಿಯನ್ನು ಪರಿವರ್ತಿಸಲು ಅನುಮತಿ ನೀಡಲಾಗಿದೆ. ಇದರಿಂದ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಇದನ್ನು ನೋಡಿಯೂ ಸುಮ್ಮನಿದ್ದಾರೆ. ಹೆದ್ದಾರಿ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದು ಬೆಳಕಿಗೆ ಬರಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ, ಅವರು ಅಸಹಾಯಕರಾಗಿ ವರ್ತಿಸುತ್ತಿದ್ದಾರೆ ಎಂದು ಬೃಜೇಶ್ ಶೆಟ್ಟಿ ಮಿಜಾರ್ ಹೇಳಿದ್ದಾರೆ.
Mangalore Full time corruption in the name of extension of Mangalore Karkala highway exposed by organisation lead by Baijesh Sheety during a press meet held in Mangalore.
19-11-25 02:16 pm
Bangalore Correspondent
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
19-11-25 06:47 pm
HK News Desk
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
19-11-25 01:01 pm
Mangalore Correspondent
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
19-11-25 06:07 pm
Bangalore Correspondent
ಕೆಂಪುಕೋಟೆ ಕಾರು ಸ್ಫೋಟಕ್ಕೆ ಉಮರ್ ಶೂನಲ್ಲಿತ್ತು ಟ್ರ...
18-11-25 09:09 pm
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm