ಬ್ರೇಕಿಂಗ್ ನ್ಯೂಸ್
22-03-22 05:41 pm Mangalore Correspondent ಕರಾವಳಿ
ಮಂಗಳೂರು, ಮಾ.22: ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯ ಉತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಲ್ಲ ಎಂದು ಅಲ್ಲಿನ ದೈವಸ್ಥಾನದ ಆಡಳಿತ ಸಮಿತಿ ನಿರ್ಧಾರಕ್ಕೆ ಬಂದ ಬೆನ್ನಲ್ಲೇ ಇದೇ ರೀತಿಯ ಪ್ರತಿಧ್ವನಿ ಇತರ ಕಡೆಗಳಲ್ಲೂ ಕೇಳಿಬಂದಿದೆ. ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲೂ ಅನ್ಯಧರ್ಮೀಯರನ್ನು ವ್ಯಾಪಾರದಿಂದ ನಿರ್ಬಂಧಿಸಲು ನಿರ್ಧಾರಕ್ಕೆ ಬರಲಾಗಿದೆ.
ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರಾವಳಿ ಭಾಗದ ಮುಸ್ಲಿಮರು ತಮ್ಮ ವ್ಯಾಪಾರ ಕೇಂದ್ರಗಳನ್ನು ಬಂದ್ ಮಾಡಿ ಮುಷ್ಕರ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಹಿಂದುಗಳ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದು ಸಂಘಟನೆಗಳು ಆಗ್ರಹಿಸಿದ್ದವು. ಇದೇ ಹಿನ್ನೆಲೆಯಲ್ಲಿ ಕಾಪು ಮಾರಿಯಮ್ಮ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ಬಹಿಷ್ಕರಿಸಿ ದೈವಸ್ಥಾನದ ಆಡಳಿತ ಕಮಿಟಿ ನಿರ್ಧಾರಕ್ಕೆ ಬಂದಿತ್ತು.
ಇದೀಗ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿಯೂ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧಿಸಲು ಅಲ್ಲಿನ ದೇಗುಲ ಆಡಳಿತ ಮುಂದಾಗಿದೆ. ಪುತ್ತೂರು ದೇವಸ್ಥಾನದ ವಾರ್ಷಿಕ ಜಾತ್ರೆ ಎಪ್ರಿಲ್ 10ರಿಂದ 25ರ ವರೆಗೆ ನಡೆಯಲಿದ್ದು, ವ್ಯಾಪಾರ ಕೇಂದ್ರಗಳನ್ನು ಹಾಕುವುದಕ್ಕೂ ಅಲ್ಲಿ ಪ್ರತಿವರ್ಷ ಏಲಂ ಪ್ರಕ್ರಿಯೆ ನಡೆಯುತ್ತದೆ. ಈ ಬಗ್ಗೆ ದೇವಸ್ಥಾನದಿಂದ ಏಲಂ ನೋಟೀಸ್ ಪತ್ರಿಕೆಯಲ್ಲಿ ನೀಡಲಾಗಿದ್ದು ಹಿಂದುಯೇತರರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ದೇವಸ್ಥಾನ ಕಮಿಟಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ನಾವು ಮುಜರಾಯಿ ಇಲಾಖೆಯ ಕಾನೂನು ಪ್ರಕಾರ 2014ರಿಂದಲೂ ಈ ನಿಮಯ ಅನುಸರಿಸುತ್ತಿದ್ದೇವೆ. ಈ ಬಾರಿ ಹೊಸತಾಗಿ ಮಾಡುವುದಲ್ಲ ಎಂದು ತಿಳಿಸಿದ್ದಾರೆ.
ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವೂ ಮುಜರಾಯಿ ಇಲಾಖೆಯ ವ್ಯಾಪ್ತಿಯದಾಗಿದ್ದರೂ, ಅಲ್ಲಿನ ದೇಗುಲ ಕಮಿಟಿ ಈ ಬಗ್ಗೆ ನಿರ್ಧಾರಕ್ಕೆ ಬಂದಿಲ್ಲ. ಆದರೆ ದೇವಸ್ಥಾನದ ಆವರಣದಲ್ಲಿ ಹಿಂದು ಸಂಘಟನೆಗಳ ಹೆಸರಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂಬುದಾಗಿ ಬ್ಯಾನರ್ ಹಾಕಲಾಗಿದೆ. ಕಾಪು ಮಾರಿಗುಡಿ ದೈವಸ್ಥಾನದ ಅಪಸ್ವರ ಬೆನ್ನಲ್ಲೇ ಬಪ್ಪನಾಡಿನಲ್ಲಿಯೂ ಬ್ಯಾನರ್ ಕಂಡುಬಂದಿದೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿಯೂ ಇದೇ ರೀತಿ ಹಿಂದು ಸಂಘಟನೆಗಳು ಬ್ಯಾನರ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಹಿಜಾಬ್ ಸಂಘರ್ಷದ ಬಳಿಕ ಕರಾವಳಿಯಲ್ಲಿ ಉತ್ಸವದ ಸಂದರ್ಭದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಮೂಲಕ ಸಾಮರಸ್ಯ ಕದಡುವ ಯತ್ನ ನಡೆದಿದೆ. ಹಿಜಾಬ್ ಬಗ್ಗೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿದ ಮುಸ್ಲಿಮರಿಗೆ ಪ್ರತೀಕಾರ ತೀರಿಸುವ ಸಲುವಾಗಿ ಬಹಿಷ್ಕಾರ ಹಾಕಲಾಗುತ್ತಿದೆ ಎಂದು ಹಿಂದು ಸಂಘಟನೆಗಳು ಹೇಳುತ್ತಿದ್ದರೂ, ಈ ರೀತಿಯ ಬಹಿಷ್ಕಾರ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಎನ್ನುವ ಚರ್ಚೆ ಸಾಮಾಜಿಕ ವಲಯದಲ್ಲಿ ನಡೆದಿದೆ.
After Muslims in the coastal region shut down their shops on March 17 to protest against the Karnataka High Court’s decision on the hijab issue, the managing committee of Hosa Marigudi Temple in Kaup, Udupi district, has decided not to allow Muslims to bid for the auction to allocate shops for the annual ‘Suggi Mari Pooje’ (annual fair). According to the reports, Ramesh Hegde, president of the temple administration committee, said that they have passed a resolution allowing only Hindus to participate in the auction of shops. The auction to allot shops to sell flowers, coconuts, hens, and other products will be open for Hindus.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm