ಬೃಜೇಶ್ ಚೌಟರ ರಾಮ ಲಕ್ಷ್ಮಣ ಕಂಬಳ ; ಶಾಸಕ ಭರತ್ ಶೆಟ್ಟಿ ಹೆಸರಲ್ಲಿ ಓಡಿಸಿದ್ದ ಮಿಜಾರಿನ ಕೋಣಗಳಿಗೆ ಅದೃಷ್ಟದ ಗೆಲುವು!

27-03-22 07:14 pm       Mangalore Correspondent   ಕರಾವಳಿ

ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದಲ್ಲಿ ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ರಾಮ ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೆಸರಲ್ಲಿ ಓಡಿಸಿದ್ದ ಕೋಣಗಳ ಜೋಡಿ ಹಗ್ಗ ಹಿರಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದೆ.

ಮಂಗಳೂರು, ಮಾ.27: ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದಲ್ಲಿ ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ರಾಮ ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೆಸರಲ್ಲಿ ಓಡಿಸಿದ್ದ ಕೋಣಗಳ ಜೋಡಿ ಹಗ್ಗ ಹಿರಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದೆ.

ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ಅವರಿಗೆ ಸೇರಿದ್ದ ಕೋಣಗಳ ಜೋಡಿಯನ್ನು ಎಡ್ತೆರೆ ಗುತ್ತು ಭರತ್ ಶೆಟ್ಟಿ ಹೆಸರಲ್ಲಿ ಈ ಕಂಬಳದಲ್ಲಿ ಓಡಿಸಲಾಗಿತ್ತು. ಭರತ್ ಶೆಟ್ಟಿಯ ಅದೃಷ್ಟವೋ ಏನೋ, ಅದೇ ಕೋಣಗಳ ಜೋಡಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. ಇದೇ ಕೋಣಗಳ ಜೋಡಿ ಈ ಬಾರಿಯ ಪ್ರತೀ ಕಂಬಳದಲ್ಲಿ ಸೆಮಿ ಮತ್ತು ಫೈನಲ್ ಸುತ್ತಿಗೆ ಬಂದಿದ್ದು ಗೆಲ್ಲುವ ಜೋಡಿಯಾಗಿ ಹೊರಹೊಮ್ಮಿತ್ತು. ಮಾ.12ರಂದು ಕಡಪಾಡಿ ಬೀಡಿನಲ್ಲಿ ನಡೆದಿದ್ದ ಮೂಡು-ಪಡು ಕಂಬಳದಲ್ಲಿ ಮಿಜಾರು ಶಕ್ತಿಪ್ರಸಾದ್ ಶೆಟ್ಟಿಯವರ ಇದೇ ಕೋಣಗಳ ಜೋಡಿ ಹಗ್ಗ ಹಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಈ ಕೋಣಗಳನ್ನು ಪ್ರಶಸ್ತಿ ವಿಜೇತ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಓಡಿಸಿದ್ದಾರೆ.

May be an image of 2 people, people standing and outdoors

ಉಳಿದಂತೆ ಕನೆಹಲಗೆ ವಿಭಾಗದಲ್ಲಿ ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರ ಕೋಣಗಳ ಜೋಡಿ ಪ್ರಥಮ(ಓಡಿಸಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ), ಬಾರಕೂರು ಶಾಂತರಾಮ ಶೆಟ್ಟಿಯವರ ಕೋಣಗಳು(ಓಡಿಸಿದ್ದು ಮಂದಾರ್ತಿ ಶಿರೂರು ಗೋಪಾಲ ನಾಯ್ಕ) ದ್ವಿತೀಯ ಸ್ಥಾನಿಯಾಗಿವೆ. ಹಗ್ಗ ಹಿರಿಯ ವಿಭಾಗದಲ್ಲಿ ಎಡ್ತೆರೆಗುತ್ತು ಭರತ್ ಶೆಟ್ಟಿ ಅವರ ಕೋಣ ಪ್ರಥಮ(12.89 ಸೆಕೆಂಡ್), ಪದವು ಕಾನಡ್ಕ ಪ್ಲೇವಿ ಡಿಸೋಜರ ಕೋಣ(13.02) ದ್ವಿತೀಯ ಸ್ಥಾನಿಯಾಗಿದೆ. ಹಗ್ಗ ಹಿರಿಯ ವಿಭಾಗದಲ್ಲಿ 17 ಜೊತೆ ಕೋಣಗಳಿದ್ದವು.

May be an image of 7 people, people standing and outdoors

ಹಗ್ಗ ಕಿರಿಯ ವಿಭಾಗದಲ್ಲಿ 21 ಜೊತೆ ಕೋಣಗಳಿದ್ದು ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಪ್ರಥಮ (12.61 ಸೆ.), ಗುರುಪುರ ಕಾರಮುಗೇರ ಗುತ್ತು ಯಶ್ ಜಗದೀಶ ಆಳ್ವ ದ್ವಿತೀಯ (13.12 ಸೆ.) ಸ್ಥಾನ ಪಡೆದಿದೆ. ಅಡ್ಡ ಹಲಗೆ ವಿಭಾಗದಲ್ಲಿ ಎಂಟು ಜೊತೆ ಕೋಣಗಳಿದ್ದು ವಾಲ್ಪಾಡಿ ಹಾಲಾಜೆ ಲೂಯಿಸ್ ಲೋರೆನ್ಸ್ ಸಲ್ದಾನ ಅವರ ಕೋಣ ಪ್ರಥಮ(12.53 ಸೆ.), ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿಯವರ ಕೋಣ ದ್ವಿತೀಯ (13.05 ಸೆ.) ಸ್ಥಾನಿಯಾಗಿದೆ.

May be an image of one or more people, people standing and outdoors

ನೇಗಿಲು ಹಿರಿಯ ವಿಭಾಗದಲ್ಲಿ 27 ಜೊತೆ ಕೋಣಗಳಿದ್ದು, ಬೋಳದಗುತ್ತು ಜಗದೀಶ ಶೆಟ್ಟಿ ಅವರ ಕೋಣಗಳು ಪ್ರಥಮ (12.57 ಸೆ.), ಸಿದ್ದಕಟ್ಟೆ ಪೊಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ ದ್ವಿತೀಯ (12.81 ಸೆ.) ಸ್ಥಾನ ಪಡೆದಿದೆ. ನೇಗಿಲು ಕಿರಿಯ ವಿಭಾಗದಲ್ಲಿ 66 ಜೊತೆ ಕೋಣಗಳಿದ್ದು ಕಾಂತಾವರ ಬೇಲಾಡಿ ಬಾವ ಅಶೋಕ ಶೆಟ್ಟಿ ಪ್ರಥಮ (13.03), ಪಡೀಲು ಕಬತ್ತಾರು ಗುತ್ತು ದಿನಕರ ಜಯರಾಮ ಶೆಟ್ಟಿ ದ್ವಿತೀಯ (13.22 ಸೆ.) ಸ್ಥಾನ ಪಡೆದಿದೆ. ಕಂಬಳದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.

Mangalore fifth annual Mangaluru Kambala at Goldfinch City Grounds, buffalo bulls named after Bharath sheety wins race. Captain Brijesh Chowta, president of Rama Lakshmana Joodukare Kambla, said that nearly 150 pairs of buffalo bulls took part in the event.