ಬ್ರೇಕಿಂಗ್ ನ್ಯೂಸ್
03-04-22 09:06 pm Udupi Correspondent ಕರಾವಳಿ
ಉಡುಪಿ, ಎ.3: ಮುಸಲ್ಮಾನರು ಹಲಾಲ್ ಮಾಂಸ ತಿನ್ನುವುದಕ್ಕೆ ನಮ್ಮದೇನು ವಿರೋಧ ಇಲ್ಲ. ಎಲ್ಲರಿಗೂ ಹಲಾಲ್ ತಿನ್ನಿಸಬೇಕು ಎಂಬ ಭಾವನೆ ಸರಿಯಲ್ಲ. ಈ ಬಗ್ಗೆ ಕೋರ್ಟ್ ನಲ್ಲಿ ಕೇಸುಗಳು ಇವೆ. ಸರಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾರ್ಕಳದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಲಾಲ್ ಒಂದು ಧರ್ಮಕ್ಕೆ ಸೀಮಿತ ವಿಚಾರ. ನಾವೆಲ್ಲರೂ ಹಲಾಲ್ ತಿನ್ನಬೇಕು ಎಂಬುದು ಸರಿಯಲ್ಲ. ವಿದೌಟ್ ಹಲಾಲ್ ನಾವು ತಿನ್ನುತ್ತಾ ಬೆಳೆದವರು. ಆದರೆ ಈಗ ಹಲಾಲ್ ಸರ್ಟಿಫಿಕೇಟ್ ಪಡೆಯಬೇಕೆಂಬ ನಿರ್ದೇಶನ ಜಾಸ್ತಿಯಾಗುತ್ತಿದೆ. ಒಂದು ವರ್ಗದವರು ಈ ರೀತಿಯ ಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಹಿಂದುತ್ವದ ಅಸ್ತ್ರ ಬಳಸಿ ಬಿಜೆಪಿ 150 ಸೀಟು ಗೆಲ್ಲಲಿದೆ ಎಂಬ ಕಾಂಗ್ರೆಸ್, ಜೆಡಿಎಸ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಶೋಭಾ, ಕಾಂಗ್ರೆಸ್ - ಜೆಡಿಎಸ್ ಜನರನ್ನು ಓಟ್ ಬ್ಯಾಂಕ್ ಅಂತ ಅಂದುಕೊಂಡಿದ್ದಾರೆ. ಅಂದಿನಿಂದ ಇಂದಿನ ವರೆಗೆ ಮತದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ. ದೇಶದ ಜನ ಎರಡೂ ಪಕ್ಷಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎಲ್ಲಿ ಎಂಬುದನ್ನು ಟಾರ್ಚ್ ಲೈಟ್ ಹಾಕಿ ಹುಡುಕುವ ಪರಿಸ್ಥಿತಿ ಇದೆ. ಕಾಂಗ್ರೆಸ್ ತನ್ನ ಮಾನಸಿಕತೆಯನ್ನು ಈಗಲಾದರೂ ಬದಲಾಯಿಸಿಕೊಳ್ಳಬೇಕು. ಬಿಜೆಪಿ ಜನರ ಭಾವನೆ ಜೊತೆ ನಿಲ್ಲುವ ಪಾರ್ಟಿ. ಜನ ಅಪೇಕ್ಷೆ ಪಡುವುದನ್ನು, ಇಷ್ಟ ಪಡುವುದನ್ನು ಜಾರಿಗೆ ತರುತ್ತದೆ.
ಸಂಘರ್ಷ ಆಗದಂತೆ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಬಿಜೆಪಿ ಚಿಂತನೆ.
ಮೋದಿ ಪ್ರಧಾನಿಯಾದ ಮೇಲೆ ಕೋಮು ಗಲಭೆಗಳು ನಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಕೋಮುಗಲಭೆ, ಪ್ರಾಣತ್ಯಾಗ ಮಾಡಿ ಹಲವರು ವಿಧವೆಯರಾಗಿದ್ದಾರೆ. ಬಿಜೆಪಿ ರಾಜ್ಯ ಮತ್ತು ದೇಶದಲ್ಲಿ ಒಡೆದು ಆಳುವ ನೀತಿಯನ್ನು ಮಾಡುತ್ತಿಲ್ಲ. ಸಿದ್ದರಾಮಯ್ಯ ಶಾದಿ ಭಾಗ್ಯ, ಟಿಪ್ಪು ಜಯಂತಿ, ಮಕ್ಕಳಿಗೆ ಟೂರ್ ಭಾಗ್ಯ ಮಾಡಿದರು. ಅದೇ ಮಾನಸಿಕತೆ ರಾಜ್ಯದ ಮುಂದೆ ಹೇರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮತ್ತು ಜನತಾದಳಕ್ಕೆ ವೋಟ್ ಮಾತ್ರ ಕಾಣುತ್ತಿದೆ, ಬಿಜೆಪಿಗೆ ಜನ ಕಾಣುತ್ತಾರೆ ಎಂದು ವಿಶ್ಲೇಷಣೆ ಮಾಡಿದರು.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಎನ್ಐಎ ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಹೊರ ಬರಲಿದೆ. ಸಾವಿನ ಹಿಂದಿನ ಕಾರಣ, ಕೊಲೆಯ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಾಗಬೇಕು. ರಸ್ತೆಯಲ್ಲಿ ಮಚ್ಚು ಲಾಂಗ್ ತೋರಿಸಿ ಪೊಲೀಸರನ್ನು ಹಿಮ್ಮೆಟ್ಟಿಸಿದ್ದೂ ತನಿಖೆಯಾಗಬೇಕು. ಯಾರ ಮನೆಯಲ್ಲಿ ಮಚ್ಚು ಲಾಂಗು ಇತ್ತು. ಯಾಕೆ ಬಂತು ತನಿಖೆಯಾಗಬೇಕು ಎಂದು ಸಚಿವೆ ಶೋಭಾ ಹೇಳಿದರು.
ಪ್ರಕರಣದ ಹಿಂದಿನ ಉದ್ದೇಶ ಏನು ಎಂಬುದು ತನಿಖೆಯಲ್ಲಿ ಹೊರ ಬರಬೇಕು. ಘಟನೆಯ ತನಿಖೆ ಸರಿಯಾಗಿ ನಡೆದರೆ ಶಾಂತಿ ನೆಲೆಸಲು ಪ್ರಮುಖ ಹೆಜ್ಜೆಯಾಗಬಹುದು. ಎಸ್ ಡಿಪಿ ಐ, ಪಿಎಫ್ ಐ ಇಡೀ ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಜಾತಿ, ಧರ್ಮ ಒಡೆದಾಳುವ ಹಿಜಬ್ ವಿಚಾರದಲ್ಲಿ ಬಡ ಮಕ್ಕಳನ್ನು ಎತ್ತಿಗಟ್ಟಿದರು. ಇದರ ಹಿಂದಿನ ಅಂತಾರಾಷ್ಟ್ರೀಯ ಷಡ್ಯಂತ್ರ ಎನ್ ಐಎ ತನಿಖೆಯಲ್ಲಿ ಹೊರಬರಲಿದೆ ಎಂದು ಹೇಳಿದರು.
Muslims are not against eating halal meat. But Union Minister Shobha Karandlaje expressed his displeasure that the idea of eating halal is not right for everyone.Speaking to reporters, he said Halal is a religion issue. He said, "We are the ones who grew up eating halal and Hindus should not eat halal." In addition, the directive that everyone should get a Halal Certificate is coming true. It's not okay. There are cases in court about this. He said the government should take a decision based on the sentiments of everyone.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 04:14 pm
Mangalore Correspondent
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
Mangalore Rain, School College Holiday: ಕರಾವಳ...
16-07-25 10:52 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am