ಬ್ರೇಕಿಂಗ್ ನ್ಯೂಸ್
03-04-22 09:39 pm Mangalore Correspondent ಕರಾವಳಿ
ಮಂಗಳೂರು, ಎ.3: ಎಲ್ಲಾ ವಿವಾದಗಳನ್ನ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು. ಕೋಮು ವಿಚಾರವನ್ನ ಬಿಜೆಪಿ, ಬಜರಂಗದಳ ಮಾಡುತ್ತಿದೆ ಅಂತ ದೊಡ್ಡ ಧ್ವನಿಯಲ್ಲಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದೆಲ್ಲ ರಾಹುಲ್ ಗಾಂಧಿ, ಸೋನಿಯಾರನ್ನು ಮೆಚ್ಚಿಸಲು ಮಾಡುತ್ತಿರುವ ಆರೋಪಗಳು ಅಷ್ಟೆ. ಮುಸ್ಲಿಮರನ್ನು ಮೆಚ್ಚಿಸುವ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಇದನ್ನೇ ಮಾಡಿಕೊಂಡು ಬಂದಿರುವುದು ಕಾಂಗ್ರೆಸ್ ನವರು ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರು ಹಿಜಾಬ್ ವಿಚಾರವನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ಆರು ಜನ ವಿದ್ಯಾರ್ಥಿನಿಯರೊಂದಿಗೆ ಕಾಂಗ್ರೆಸ್ - ಎಸ್ಡಿಪಿಐ ಪಿಎಫ್ಐ ಕರೆದು ಮಾತನಾಡಿದ್ದಾರೆ. ಇವರು ಅವರಿಗೆ ಸಪೋರ್ಟ್ ಮಾಡದೇ ಇರುತ್ತಿದ್ದರೆ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಬರ್ತಾ ಇತ್ತಾ..? ಇದನ್ನು ಹುಟ್ಟುಹಾಕಿದ್ದು ಅವರೇ. ಅವರೇ ಹುಟ್ಟುಹಾಕಿ ಸಂಘ ಪರಿವಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಈಗ ಹಲಾಲ್ ಮತ್ತು ಜಟ್ಕಾ ಕಟ್ ವಿಚಾರ ಚರ್ಚೆ ನಡೀತಾ ಇದೆ. ಮುಸ್ಲಿಂನವರು ಹಾಲಾಲ್ ಮಾಡೋದ್ದನ್ನ ತಿನ್ನಲಿ. ಹಿಂದುಗಳು ಜಟ್ಕಾ ಕಟ್ ತಿನ್ನಲಿ. ಯಾರು ಬೇಡ ಅಂದಿರೋದು. ಇದ್ರಿಂದ ಕಾಂಗ್ರೆಸ್ ನವರಿಗೆ ಏನು ತೊಂದರೆ. ಇವರು ಯಾಕೆ ಬೊಮ್ಡಾ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಹಿಂದು -ಮುಸ್ಲಿಂ ಆನಂದವಾಗಿ ಇರಬಾರದು
ಅಂತಲೇ ಇವರು ಹೀಗೆ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಆಪಾದಿಸಿದರು.
ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಎಂಬ ಪದ ಬಳಸಿದ್ದನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಹರ್ಷ ಕೊಲೆ ಪ್ರಕರಣದಲ್ಲಿ ಕೊಲೆಗಡುಕರನ್ನು ಮುಸ್ಲಿಂ ಗೂಂಡಾಗಳು ಅಂತ ಕರೆಯದೆ ಒಳ್ಳೆಯವರು ಅಂತ ಕರೆಯಬೇಕಾ.. ಆ ಕೊಲೆಗಡುಕರನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಏನಂತ ಕರೆಯುತ್ತಾರೆ ? ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಅನ್ನುವ ಉದ್ದೇಶ ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್ನವರು ಮುಸಲ್ಮಾನರನ್ನು ಸಂತೃಪ್ತಿ ಮಾಡಲಷ್ಟೇ ಹೇಳಿಕೆಯನ್ನು ಕೊಡುತ್ತಾರೆ. ಇವರು ಹಿಂದೂ-ಮುಸ್ಲಿಂ ಎರಡು ಕಣ್ಣುಗಳೆಂದು ನೋಡಿದ್ದಾರೆಯೇ.. ಹಾಗೆ ನೋಡಿದಿದ್ರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕೋಮು ದ್ವೇಷಕ್ಕೆ ಕಾರಣ ಪಿಎಫ್ಐ ಮತ್ತು ಎಸ್ಡಿಪಿಐ ಅಂತ ಎಲ್ಲರೂ ಹೇಳ್ತಾರೆ. ಹಿಜಾಬ್ ವಿವಾದದ ಬಳಿಕ ಎಲ್ಲ ಮುಸಲ್ಮಾನ್ ಶಾಸಕರು ಇದನ್ನೇ ಹೇಳಿದ್ರು. ಆದ್ರೆ ಆವತ್ತೆ ಸಿದ್ದರಾಮಯ್ಯ ಹೇಳುತ್ತಾರೆ, ಈ ಕೋಮು ದ್ವೇಷಕ್ಕೆ ಆರೆಸ್ಸೆಸ್ ಮತ್ತು ಬಿಜೆಪಿ ಕಾರಣ ಅಂತ. ಇದರಲ್ಲಿ ನಾವು ಯಾವುದನ್ನು ನಂಬಬೇಕು. ಅವರ ಪಾಪವನ್ನ ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಿದ್ದಾರೆ. ಹಳ್ಳಿಜನ ಸೇರಿದಂತೆ ಎಲ್ಲರೂ ಕೂಡ ಕಾಂಗ್ರೆಸಿಗರನ್ನು ಗಮನಿಸುತ್ತಿದ್ದಾರೆ. ಸೂಕ್ತ ತೀರ್ಪು ನೀಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿ ಬಗ್ಗೆ ಟೀಕೆ ಮಾಡಲು ಅವರಿಗೆ ಶಕ್ತಿನೂ ಇಲ್ಲ ಅಧಿಕಾರವನ್ನು ಇಲ್ಲ. ಬಿಜೆಪಿ ಬಗ್ಗೆ ಟೀಕೆ ಮಾಡಿದವರೆಲ್ಲ ನೆಗೆದು ಬಿದ್ದು ಹೋದರು. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿಲ್ಲ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಾಂಪಿಟಿಷನ್ ಗೆ ಇಳಿದಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಈ ರೀತಿ ಕಾಂಪಿಟೇಶನ್ ಗೆ ಇಳಿದಿದ್ದಾರೆ ಎಂದರು.
ಗುತ್ತಿಗೆದಾರರು 40% ಪರ್ಸಂಟೇಜ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಟ್ರ್ಯಾಕ್ಟರ್ ಕೆಂಪಣ್ಣ ಪದೇ ಪದೆ 40% ಪರ್ಸೆಂಟೇಜ್ ಬಗ್ಗೆ ಹೇಳ್ತಿದ್ದಾರೆ. ಈ ವರೆಗೂ ಒಂದೇ ಒಂದು ಉದಾಹರಣೆ ಕೊಟ್ಟಿಲ್ಲ. ರಾಜ್ಯ ಸರ್ಕಾರದಲ್ಲಿ ಇಂಥವರು 40 % ಪರ್ಸೆಂಟೇಜ್ ಕೇಳ್ತಿದ್ದಾರೆ ಅಂತ ಹೇಳಿದ್ರೆ ಅವರನ್ನ ಒಪ್ಪುತ್ತಿದ್ದೆ. ಕಾಂಗ್ರೆಸ್ ನವರು ಇಂತಹ ಸುಳ್ಳು ಆಪಾದನೆಗಳನ್ನು ಸೃಷ್ಟಿ ಮಾಡಿದ್ರೆ ಜನ ನಂಬಬೇಕಲ್ಲ. ಕಾಂಟ್ರ್ಯಾಕ್ಟರ್ ಕೆಂಪಣ್ಣ ಕೂಡ ಕಾಂಗ್ರೆಸ್ ಬೆಂಬಲಿಗ. ರಾಜ್ಯದ ಜನರು ಇವ್ರನ್ನ ಯಾವತ್ತೂ ನಂಬಲ್ಲ ಎಂದು ಹೇಳಿದರು.
All the controversy sparked by the Congress. Siddaramaiah is saying in a loud voice that BJP and Bajrang Dal are doing the communal thinking.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm