ಬ್ರೇಕಿಂಗ್ ನ್ಯೂಸ್
04-04-22 09:38 pm Mangalore Correspondent ಕರಾವಳಿ
ಮಂಗಳೂರು, ಎ.4: ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಎಸ್ಡಿಪಿಐ ಪಕ್ಷವನ್ನು ಪೋಷಣೆ ಮಾಡುತ್ತಿದೆ. ಆದರೆ ಇದೇ ಎಸ್ ಡಿಪಿಐ ಪಕ್ಷವು ಮುಂದೊಂದು ದಿನ ದೇಶದ ಭದ್ರತೆಗೆ ಸವಾಲಾಗಲಿದೆ. ಈಗಲೇ ಹಲವು ಬಾರಿ ದೇಶದ್ರೋಹದ ಕೆಲಸಗಳಲ್ಲಿ ಎಸ್ಡಿಪಿಐ ಪಾತ್ರ ಸಾಬೀತಾಗಿದ್ದರೂ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಇವರು ಮುಂದಾಗಿಲ್ಲ. ಎಸ್ಡಿಪಿಐಯನ್ನು ಜೊತೆಗಿಟ್ಟುಕೊಂಡು ಇವರು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ಇವರ ಓಲೈಕೆ ರಾಜಕಾರಣದಿಂದ ಇಡೀ ದೇಶಕ್ಕೇ ಅಪಾಯ ಎದುರಾಗಲಿದೆ ಎಂದು ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ ಪವಿತ್ರನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜೇಶ್ ಪವಿತ್ರನ್, ಬಿಜೆಪಿ ನಾಯಕರು ಹಿಂದುತ್ವವನ್ನು ಕೇವಲ ರಾಜಕಾರಣಕ್ಕಾಗಿ ಬಳಸುತ್ತಿದ್ದಾರೆ. ಅವರಿಗೆ ಹಿಂದುಗಳ ಮೇಲೆ ಬದ್ಧತೆಯಿಲ್ಲ. ಹಿಂದುಗಳ ವಿರುದ್ಧವೇ ಸುಳ್ಳು ಕೇಸು ದಾಖಲಿಸಿ, ಜೈಲಿಗಟ್ಟುವ ಕೆಲಸ ಮಾಡುತ್ತಾರೆ. ಸುಳ್ಳು ದೂರು ದಾಖಲಿಸಿ ಅಖಿಲ ಭಾರತ ಹಿಂದು ಮಹಾಸಭಾದ ನಾಯಕರನ್ನು ಜೈಲಿಗಟ್ಟುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರಿಂದ ನಮ್ಮ ನೈಜ ಹಿಂದುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ. ಮುಂದೆ ಹಿಂದು ಮಹಾಸಭಾ ಹಿಂದುತ್ವದ ಆಧಾರದಲ್ಲಿಯೇ ಬಲಿಷ್ಠಗೊಂಡು ಬಿಜೆಪಿಗೆ ಪೈಪೋಟಿ ನೀಡಲಿದೆ ಎಂದು ಹೇಳಿದರು.
ಬಿಜೆಪಿಯ ನಕಲಿ ಹಿಂದುತ್ವದ ರಾಜಕಾರಣದಿಂದ ಬೇಸತ್ತು ಹಲವು ಬಿಜೆಪಿ ಕಾರ್ಯಕರ್ತರು ಹಿಂದು ಮಹಾಸಭಾ ಸೇರುತ್ತಿದ್ದಾರೆ. ಯಾರು ಬಿಜೆಪಿಯವರ ಕಿರುಕುಳದಿಂದ ಜೈಲು ಸೇರಿದ್ದಾರೋ ಅಂಥವರ ಕುಟುಂಬಗಳಿಗೆ ಹಿಂದು ಮಹಾಸಭಾ ನೆರವು ನೀಡಲಿದೆ. ಆ ಕುಟುಂಬಗಳಿಗೆ ಕಾನೂನು ನೆರವು ನೀಡುವ ಕೆಲಸವನ್ನೂ ಮಾಡಲಿದೆ ಎಂದು ರಾಜೇಶ್ ಹೇಳಿದರು.
ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅಮೀನ್ ಮಾತನಾಡಿ, ಮುಂದಿನ ದಿನಗಳಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯದಲ್ಲಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬರಲಿದ್ದು ಆಗ ನಾಥುರಾಮ್ ಗೋಡ್ಸೆ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸಲಿದ್ದೇವೆ ಎಂದು ಹೇಳಿದರು. ಬಿಜೆಪಿ ಅನ್ನುವುದು ಎಸ್ಡಿಪಿಐ ಪಾಲಿಗೆ ಬಿ ಟೀಮ್ ಇದ್ದಂತೆ. ಹಲವು ಕಡೆಗಳಲ್ಲಿ ಇವರ ನಡುವೆ ಅಧಿಕಾರಕ್ಕಾಗಿ ಮೈತ್ರಿ ಇದೆ. ಅಲ್ಲಿ ಗೆದ್ದ ನಂತರ ಜೊತೆಯಾಗಿಯೇ ವಿಜಯೋತ್ಸವ ಆಚರಿಸಿದ್ದೂ ಇದೆ. ಇದರರ್ಥ ಇವರು ಹಿಂದುತ್ವದ ಹೆಸರೇಳಿ ಗೆದ್ದು ಹಿಂದುಗಳಿಗೇ ಮೋಸ ಮಾಡುತ್ತಿದ್ದಾರೆ ಎಂದಲ್ಲವೇ ಎಂದು ಪ್ರಶ್ನೆ ಮಾಡಿದರು.
ಉಳ್ಳಾಲ ಭಾಗದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಪ್ರಮೋದ್ ಉಚ್ಚಿಲ ಅವರು ಹಿಂದು ಮಹಾಸಭಾ ಸೇರ್ಪಡೆಯಾಗಿದ್ದು, ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಉಳ್ಳಾಲ ಕ್ಷೇತ್ರದ ಒಂಬತ್ತುಕೆರೆಯಲ್ಲಿ 20 ಎಕ್ರೆ ಜಮೀನಿದ್ದು, ಅದನ್ನು ಪರಿವರ್ತಿಸಿ ಬಡವರಿಗೆ ಮನೆ ಕಟ್ಟಿಕೊಡಲು ಯತ್ನಿಸಲಾಗುವುದು. ಅಲ್ಲಿ ಒಂದೂವರೆ ಸಾವಿರ ಜನರಿಗೆ ವಸತಿ ಸೌಲಭ್ಯ ನೀಡಲು ಸಾಧ್ಯವಿದೆ. ಅದನ್ನು ಹಿಂದು ಮಹಾಸಭಾ ವತಿಯಿಂದ ಮಾಡಲಾಗುವುದು. ಕಾಂಗ್ರೆಸ್ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ಕಾಂಗ್ರೆಸ್ ಬಿಟ್ಟು ಹಿಂದು ಮಹಾಸಭಾ ಸೇರಿದ್ದಾಗಿ ಪ್ರಮೋದ್ ಉಚ್ಚಿಲ ಹೇಳಿದರು.
"The BJP has created SDPI to gain political points despite the latter becoming a threat to the nation's internal security. Though the BJP is in power at the Centre, state and locally, it has failed to ban SDPI," said Rajesh Pavitran, state president, Akhil Bharath Hindu Mahasabha (ABHM) .Speaking to reporters here on Monday, April 4, Pavitran pointed out that Riyaz, a SDPI leader had claimed in a programme on television that Hindu Mahasabha had collaborated with the SDPI during the elections.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm